Breaking News
Home / Breaking News / ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಾ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ಭೂಮಿಯಿಂದ ಸೂರ್ಯನನ್ನು ನೋಡಿದ್ದೀರಾ..ಆದರೆ ಬೇರೆ ಗ್ರಹಗಳಲ್ಲಿ ಅದೇ ಸೂರ್ಯ ಅದೆಷ್ಟು ಅದ್ಭುತ, ರೋಚಕವಾಗಿ ಕಾಣಿಸುತ್ತಾನೆ ನೋಡಿ!

ವಿಜ್ಞಾನಕ್ಕೆ ಕೊನೆ ಎಂಬುದಿಲ್ಲ. ಅದು ಅಗೆದಷ್ಟೂ, ಮೊಗೆದಷ್ಟೂ ತೆರೆಯುತ್ತಾ ಹೋಗುತ್ತದೆ. ಹೊಸ ಹೊಸ ವಿಷಯಗಳು, ಆವಿಷ್ಕಾರಗಳು ಹೊರಬರುತ್ತಾನೇ ಇರುತ್ತವೆ.

ನಮ್ಮ ಸೃಷ್ಟಿಯಲ್ಲಿರುವ ಸೂರ್ಯ, ಚಂದ್ರ, ಭೂಮಿ ಇತರ ಗ್ರಹಗಳು ಒಂದು ಕೌತುಕವೇ ಸರಿ. ನಾವು ಭೂಮಿಯೇ ಅಂದುಕೊಂಡಿರುವುದಕ್ಕಿಂತ ಹೊರಗೂ ಇನ್ನಷ್ಟು ಪ್ರಪಂಚಗಳಿವೆ. ಅಲ್ಲೂ ಈ ಸೂರ್ಯ, ಚಂದ್ರರು ಕಾಣಿಸಿಕೊಳ್ಳುತ್ತಾರೆ ಎಂಬುದು ನಮಗೇ ಅಚ್ಚರಿಯ ವಿಷಯವೇ ಸರಿ. ಆದರೆ ಈಗ ವಿಜ್ಞಾನಿಗಳು ಬೇರೆ ಗ್ರಹಗಳಿಂದ ಸೂರ್ಯ ಹೇಗೆ ಕಾಣಿಸುತ್ತಾನೆ ಎಂದು ಕಂಡುಹಿಡಿದಿದ್ದಾರೆ. ನೋಡೋಣ ಬನ್ನಿ;

ಬುಧ ಗ್ರಹ:

ಬುಧ ಗ್ರಹವು ಸೂರ್ಯನಿಗೆ ಅತ್ಯಂತ ಹತ್ತಿರದಲ್ಲಿದೆ, ಅಂದರೆ ಸುಮಾರು 36 ದಶಲಕ್ಷ ಮೈಲಿಗಳಷ್ಟು ದೂರದಲ್ಲಿದೆ. ಅಂದರೆ ಭೂಮಿಗಿಂತ ಸುಮಾರು 39% ದಷ್ಟು ಹತ್ತಿರದಲ್ಲಿದೆ. ಈ ಗ್ರಹದಲ್ಲಿ ಸೂರ್ನು ಭೂಮಿಗಿಂತ 3 ಪಟ್ಟು ದೊಡ್ಡದಾಗಿ, ಪ್ರಕಾಶಮಾನವಾಗಿ ಕಾಣಿಸುತ್ತದೆ.

ಶುಕ್ರ ಗ್ರಹ:

ಬುಧ ಗ್ರಹದ ನಂತರ ಸೂರ್ಯನಿಗೆ ಹತ್ತಿರವಾಗಿರುವ ಗ್ರಹ ಶುಕ್ರ. ಅಂದರೆ ಸುಮಾರು 67 ದಶಲಕ್ಷ ಮೈಲಿಗಳಷ್ಟು ದೂರದಲ್ಲಿದೆ. ಭೂಮಿಗಿಂತ ಸುಮಾರು 72% ದಷ್ಟು ಹತ್ತಿರದಲ್ಲಿದೆ. ಇಷ್ಟು ಹತ್ತಿರವಿದ್ದರೂ ಇಲ್ಲಿ ಸೂರ್ಯ ಪ್ರಕಾಶಮಾನವಾಗಿ ಕಾಣಿಸುವುದಿಲ್ಲ. ಯಾಕೆಂದರೆ ಇಲ್ಲಿ ಶುಕ್ರಗ್ರಹದಲ್ಲಿರುವ ಸಲ್ಫ್ಯೂರಿಕ್ ಆಮ್ಲ ಮತ್ತು ಸೂರ್ಯನ ನಡುವೆ ದಟ್ಟವಾದ ಮೋಡ ಇರುತ್ತದೆ. ಹಾಗಾಗಿ ಇಲ್ಲಿ ಸೂರ್ಯ ಒಂದು ಮಸುಕಾದ ಭಾಗದಂತೆ ಮಾತ್ರ ಗೋಚರಿಸುತ್ತಾನೆ.

ಮಂಗಳ ಗ್ರಹ:

ಮಂಗಳ ಗ್ರಹ ಮತ್ತು ಸೂರ್ಯನ ನಡುವೆ ಸುಮಾರು 142 ದಶಲಕ್ಷ ಮೈಲಿಗಳಷ್ಟು ಅಂತರವಿದೆ. ಈ ಗ್ರಹದಲ್ಲಿ ಧೂಳು ಹೆಚ್ಚಾಗಿ ಇರುವುದರಿಂದ ಮತ್ತು ಸೂರ್ಯನಿಂದ ಬಹಳಷ್ಟು ದೂರವಿರುವುದರಿಂದ ಇಲ್ಲಿ ಸೂರ್ಯ ತುಂಬಾ ಚಿಕ್ಕದಾಗಿ , ಅಸ್ಪಷ್ಟವಾಗಿ ಕಾಣಿಸುತ್ತದೆ.

ಗುರು ಗ್ರಹ:

ಗುರು ಗ್ರಹವು ಸೂರ್ನಿಂದ ಸುಮಾರು 484 ದಶಲಕ್ಷ ಮೈಲಿಗಳಷ್ಟು ದೂರದಲ್ಲಿದೆ. ಇದು ಸೌರವ್ಯೂದಲ್ಲಿಯೇ ಅತೀ ದೊಡ್ಡದಾದ ಗ್ರಹವಾಗಿದ್ದು, ಇಲ್ಲಿ ಸೂರ್ಯ ಭೂಮಿಗಿಂತ 5 ಪಟ್ಟು ಚಿಕ್ಕದಾಗಿ ಕಾಣಿಸುತ್ತಾನೆ. ಇಲ್ಲಿ ಸೂರ್ಯ ಸುಂದರವಾಗಿ, ತಂಪಾಗಿ ಕಾಣಿಸುತ್ತಾನೆ ಎನ್ನುತ್ತಾರೆ.

ಶನಿ ಗ್ರಹ:

ಶನಿಯಿಂದ ಸೂರ್ಯ ಸುಮಾರು 888 ದಶಲಕ್ಷ ಮೈಲಿಗಳಷ್ಟು ದೂರದಲ್ಲಿದೆ. ಇಲ್ಲಿ ಅಮೋನಿಯ, ನೀರು ಮತ್ತು ಹರಳುಗಳು ಸೂರ್ಯನ ಕಿರಣಗಳನ್ನು ವಕ್ರೀಭವನಗೊಳಿಸಿ ಹಲವು ಸೂರ್ಯ ಇದ್ದಂತೆ ಭಾಸವಾಗುತ್ತದೆ. ಇಲ್ಲಿ ಸೂರ್ಯ ಬಹಳ ವಿಸ್ಮಯಕರವಾಗಿ ಕಾಣಿಸುತ್ತಾನೆ. ಇಲ್ಲಿ ಭೂಮಿಗಿಂತ ಸೂರ್ಯ ಅತೀ ದೂರದಲ್ಲಿದ್ದರೂ ಕಣ್ಣಿಗೆ ರಕ್ಷಣೆ ಇಲ್ಲದೆ ಹಾಗೇ ನೋಡಲು ಅಸಾಧ್ಯವಾದಷ್ಟೂ ಪ್ರಕಾಶಮಾನವಾಗಿರುತ್ತದೆ.

ಯುರೇನಸ್:

ಯುರೇನಸ್ ಮತ್ತು ಸೂರ್ಯನ ಮಧ್ಯದ ಅಂತರ ಸುಮಾರು 1.8 ಬಿಲಿಯನ್ ಮೈಲಿಗಳಷ್ಟಿದೆ. ಯುರೇನಸ್ ಗ್ರಹದ ಚಂದ್ರ ಏರಿಯಲ್ ಆಗಿದ್ದು, ಇಲ್ಲಿಂದ ಸೂರ್ಯನನ್ನು ನೋಡಿದರೆ, ಸೂರ್ಯ ಒಂದು ಸಣ್ಣ ನಕ್ಷತ್ರದಂತೆ ಕಾಣಿಸುತ್ತಾನೆ.

ನೆಪ್ಚೂನ್:

ನೆಪ್ಚೂನ್ ಸೂರ್ಯನಿಂದ ಸುಮಾರು 2.8 ಶತಕೋಟಿ ಮೈಲುಗಳಷ್ಟು ದೂರದಲ್ಲಿರುತ್ತದೆ. ನೆಪ್ಚೂನ್ ನ ಚಂದ್ರ ಟೈಟಾನ್ ನಿಂದ ಸೂರ್ಯನನ್ನು ನೋಡಿದರೆ ಅಲ್ಲಿರುವ ಧೂಳು ಮತ್ತು ಅನಿಲವನ್ನು ಸುತ್ತುವ ಮೋಡಗಳಿಂದ ಸೂರ್ಯ ಒಂದು ಪುಟ್ಟ ನಕ್ಷತ್ರವಾಗಿ ಕಾಣಿಸುತ್ತದೆ.

ಪ್ಲೂಟೋ:

ಪ್ಲೂಟೋ ಸೂರ್ಯನಿಂದ ಸುಮಾರು 3.7 ಶತಕೋಟಿ ಮೈಲಿಗಳಷ್ಟು ದೂರದಲ್ಲಿದ್ದಾನೆ. ಇಲ್ಲಿಂದ ಸೂರ್ಯನ ಬೆಳಕು ಭೂಮಿಗಿಂತ 1,600 ಪಟ್ಟು ಮಬ್ಬಾಗಿ ಕಾಣಿಸುತ್ತದೆ. ಆದರೆ ಭೂಮಿಯಲ್ಲಿ ಸಂಭವಿಸುವ ಹುಣ್ಣಿಮೆಯ ಬೆಳಕಿಗಿಂತ 250 ಪಟ್ಟು ಹೆಚ್ಚು ಪ್ರಕಾಶಮಾನವಾಗಿದ್ದು, ಅಲ್ಲಿರುವ ಪ್ರತಿ ವಸ್ತುಗಳನ್ನು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ನೇರವಾಗಿ ಕಣ್ಣಿಂದ ನೋಡಲು ಅಸಾಧ್ಯವಾಗಿರುತ್ತದೆ.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money