Breaking News
Home / Breaking News / ಮೊದಲು ಮಕ್ಕಳು, ಹೆಣ್ಣು ಓಕೆ ಅಂದ್ರೆ ನಂತರ ಮದುವೆ; ನಮ್ಮದೇ ದೇಶದ ಈ ಗ್ರಾಮದಲ್ಲಿ ಲಿವ್-ಇನ್ ಸಂಬಂಧಕ್ಕೆ ಪ್ರಥಮ ಆದ್ಯತೆ!

ಮೊದಲು ಮಕ್ಕಳು, ಹೆಣ್ಣು ಓಕೆ ಅಂದ್ರೆ ನಂತರ ಮದುವೆ; ನಮ್ಮದೇ ದೇಶದ ಈ ಗ್ರಾಮದಲ್ಲಿ ಲಿವ್-ಇನ್ ಸಂಬಂಧಕ್ಕೆ ಪ್ರಥಮ ಆದ್ಯತೆ!

ಜಗತ್ತಿನೆಲ್ಲೆಡೆ ಮದುವೆಯಾಗದೇ ಗಂಡು ಹೆಣ್ಣು ಜೊತೆಯಾಗಿ ಬಾಳ್ವೆ ನಡೆಸಲು ಸಮ್ಮತಿಯಿದ್ದರೂ ಭಾರತದಲ್ಲಿ ಇನ್ನೂ ಅದಕ್ಕೆ ವಿರೋಧವಿದೆ. ಇಲ್ಲಿ ಮದುವೆಗೆ ಅದರದೇ ಆದ ಪವಿತ್ರತೆ ಇದೆ. ಮದುವೆ ಒಂದು ವ್ಯವಸ್ಥೆ, ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ಇಂತಹ ಮಡಿವಂತಿಕೆಯ ಭಾರತದಲ್ಲೇ ಒಂದು ಗ್ರಾಮದಲ್ಲಿ ಮದುವೆಗಿಂತ ಹೆಚ್ಚಿನ ಆದ್ಯತೆ ಲಿವ್ ಇನ್ ಸಂಬಂಧಕ್ಕಿದೆ. ಇಲ್ಲಿ ಮದುವೆಯಾಗಿರುವ ಜೋಡಿಗಳಿಗಿಂತ ಮದುವೆಯಾಗದೆ ಜೊತೆಯಾಗಿ ಸಹಬಾಳ್ವೆ ನಡೆಸುವವರೇ ಹೆಚ್ಚು.

ರಾಜಸ್ತಾನದಲ್ಲಿರುವ ಈ ಗ್ರಾಮದಲ್ಲಿ ಇತ್ತೀಚೆಗೆ ನಾನಿಯಾ ಗರಾಸಿಯ ಎಂಬ 70 ವರ್ಷದ ವೃದ್ಧರೊಬ್ಬರು ತಮ್ಮ ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ತಮ್ಮ ಲಿವ್ ಇನ್ ಸಂಗಾತಿ 60 ವರ್ಷದ ಕಾಳಿ ಎಂಬುವವರನ್ನು ವಿವಾಹವಾದರು. ಅದೇ ದಿನ ಇವರ ಮೂವರು ಮಕ್ಕಳು ಕೂಡ ವಿವಾಹ ಬಂಧನಕ್ಕೆ ಒಳಗಾದರು. ಈ ಮೂರೂ ಜನ ಯುವಕರು ತುಂಬಾ ವರ್ಷದಿಂದ ತಮ್ಮ ಸಂಗಾತಿಯೊಂದಿಗೆ ವಾಸಿಸುತ್ತಿದ್ದರು. ವಿವಾಹವಿಲ್ಲದೆ ಅವರಿಗೆಲ್ಲ ಮಕ್ಕಳೂ ಆಗಿದ್ದವು. ಇದು ಭಾರತದಲ್ಲಿ ನಂಬಲು ಅಸಾಧ್ಯವಾದ ಸತ್ಯ.

1000 ವರ್ಷಗಳಿಂದ ಇರುವ ಪದ್ಧತಿ:

ಕಳೆದ ಸುಮಾರು 1000 ವರ್ಷಗಳಿಂದ ಈ ಪ್ರದೇಶದಲ್ಲಿ ಈ ಪದ್ಧತಿಯಿದೆ. ಇಲ್ಲಿ ಇಷ್ಟಪಟ್ಟ ಜೋಡಿ ಜೊತೆಗೆ ವಾಸಿಸಬಹುದು, ಮಕ್ಕಳನ್ನೂ ಪಡೆಯಬಹುದು. ನಂತರ ಸಂಸಾರದ ಹೊಣೆಗಾರಿಕೆಯನ್ನು ಹೊರಲು ಸಿದ್ಧವಾಗಿದ್ದಾರೆಂದು ವಿಶ್ವಾಸ ಮೂಡಿದ ಮೇಲೆಯೇ ಮದುವೆಯ ನಿರ್ಣಯ ತೆಗೆದುಕೊಳ್ಳುತ್ತಾರೆ. ಗರಾಸಿಯ ಸಮುದಾಯಕ್ಕೆ ಸೇರಿದ ಈ ಜನಾಂಗ ಭಾರತದ ಸಂಸ್ಕೃತಿಯಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ.

ಮಹಿಳೆಯರಿಗೆ ಪ್ರಮುಖ ಸ್ಥಾನಮಾನ:

ಈ ಸಮುದಾಯದಲ್ಲಿ ಪುರುಷರಿಗಿಂತ ಮಹಿಳೆಯರಿಗೇ ಹೆಚ್ಚಿನ ಸ್ಥಾನಮಾನವಿದೆ. ಇಲ್ಲಿ ಯುವತಿಯರನ್ನು ಸ್ವತಂತ್ರವಾಗಿ ಬಿಡಲಾಗುತ್ತದೆ ಮತ್ತು ತಮಗೆ ಇಷ್ಟಬಂದವರೊಡನೆ ಸ್ನೇಹ ಬೆಳೆಸಲು ಅವಕಾಶವಿದೆ.  ಇಲ್ಲಿ ವರದಕ್ಷಿಣೆ, ಅತ್ಯಾಚಾರದಂತಹ ಸಮಸ್ಯೆಗಳು ಇಲ್ಲವೇ ಇಲ್ಲ ಎನ್ನುತ್ತಾರೆ. ಈ ಜನರಿಗೆ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವಂತಹ ಸ್ವಾತಂತ್ರ್ಯವಿರುತ್ತದೆ. ವರ್ಷಗಳ ಕಾಲ ಮದುವೆಯಾಗದೆಯೂ ಇರಬಹುದು, ಮಕ್ಕಳನ್ನೂ ಪಡೆಯಬಹುದು.

ಪ್ರಣಯ ಜಾತ್ರೆ:

ರಾಜಸ್ಥಾನ ಮತ್ತು ಗುಜರಾತ್ ನಲ್ಲಿ ಇವರಿಗಾಗಿಯೇ ಕೆಲವೆಡೆ ‘ಪ್ರಣಯ ಜಾತ್ರೆ’ಗಳು ನಡೆಯುತ್ತವೆ. ಇಲ್ಲಿ ತಮ್ಮ ಸಂಗಾತಿಯನ್ನು ಆಯ್ಕರ ಮಾಡಿಕೊಂಡು ಯುವತಿಯರು ಅವರೊಂದಿಗೆ ಅಲ್ಲಿಂದ ಪಲಾಯನ ಮಾಡುತ್ತಾರೆ. ಕೆಲವು ದಿನಗಳ ನಂತರ ವಾಪಾಸ್ ಬಂದು ತಮ್ಮ ಕುಟುಂಬ ಸೇರಿಕೊಳ್ಳುತ್ತಾರೆ. ಜೊತೆಗೆ ಸಂಸಾರ ನಡೆಸುತ್ತಾ ಇಷ್ಟ ಬಂದಾಗ ಮದುವೆಯಾಗುತ್ತಾರೆ.

ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿರುವ ಇವರು ತಮ್ಮ ಹೆತ್ತವರೊಂದಿಗೆ ಒಂದೇ ಮನೆಯಲ್ಲಿ ಮದುವೆಯಾಗದೆ ತಮ್ಮ ಸಂಗಾತಿ ಮತ್ತು ಮಕ್ಕಳೊಂದಿಗೆ ಬದುಕುತ್ತಾರೆ. ಸಂಸಾರ ಸಾಗಿಸಲು ಸಾಕಷ್ಟು ಹಣ ಇದೆ ಎಂದು ಖಚಿತಪಡಿಸಿಕೊಂಡ ಬಳಿಕವೇ ಮದುವೆಯ ನಿರ್ಣಯ ಕೈಗೊಳ್ಳುತ್ತಾರೆ.

Check Also

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು …

Leave a Reply

Your email address will not be published. Required fields are marked *

Powered by keepvid themefull earn money