Breaking News
Home / Breaking News / ರಸ್ತೆಗಳ ಮಧ್ಯೆ ಬಿಳಿ, ಹಳದಿ ಪಟ್ಟಿ ನೋಡಿದ್ದೀರಲ್ಲವೇ? ಅದು ಯಾಕೆ ಹಾಕಿರುತ್ತಾರೆ? ನಮಗೇನು ಉಪಯೋಗ ಗೊತ್ತೇ?

ರಸ್ತೆಗಳ ಮಧ್ಯೆ ಬಿಳಿ, ಹಳದಿ ಪಟ್ಟಿ ನೋಡಿದ್ದೀರಲ್ಲವೇ? ಅದು ಯಾಕೆ ಹಾಕಿರುತ್ತಾರೆ? ನಮಗೇನು ಉಪಯೋಗ ಗೊತ್ತೇ?

ಹೆದ್ದಾರಿಗಳ ಮಧ್ಯದಲ್ಲಿ ಮತ್ತು ಆ ಬದಿ ಈ ಬದಿ ಎಂಬತೆ ಇಕ್ಕೆಲೆಗಳಲ್ಲಿ ಬಿಳಿ ಅಥವಾ ಹಳದಿ ಬಣ್ಣಗಳಲ್ಲಿ ಪಟ್ಟಿ ಹಾಕುವ ಹಲವು ವಿಧದ ಪಟ್ಟೆಗಳನ್ನು ಎಲ್ಲರೂ ನೋಡಿರುತ್ತೇವೆ. ಆದರೆ ಆ ಪಟ್ಟಿಗಳನ್ನು ಯಾಕೆ ಹಾಕುತ್ತಾರೆ?, ಅವುಗಳ ಉಪಯೋಗವೇನು ಎಂಬುದು ಬಹುತೇಕ ಮಂದಿಗೆ ತಿಳಿದೇ ಇಲ್ಲ.

ಆ ಪಟ್ಟಿಗಳು ಹಾಕಿರುವುದು ನಮ್ಮ ರಕ್ಷಣೆಗೆ… ರಸ್ತೆ ಮೇಲೆ ವಾಹನಗಳನ್ನು ಚಲಾಯಿಸುವ ವಾಹನ ಸವಾರರು ಅಷ್ಟೇ ಅಲ್ಲ, ನಡೆದುಕೊಂಡು ಹೋಗುವ ಪಾದಚಾರಿಗಳೂ ಕೂಡ ಸಂಚಾರಿ ನಿಯಮಗಳನ್ನು ತಿಳಿದುಕೊಂಡಿರಬೇಕು ಮತ್ತು ಕಡ್ಡಾಯವಾಗಿ ಪಾಲಿಸಬೇಕು, ಜೊತೆಗೆ ಟ್ರಾಫಿಕ್ ಸಿಗ್ನಲ್ ಪಾಲಿಸುತ್ತಾ ವಾಹನ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು.

ಈಗ ಬನ್ನಿ ಹೆದ್ದಾರಿಯಲ್ಲಿ ಹಾಕಿರುವ ಬಿಳಿ, ಹಳದಿ ಪಟ್ಟೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.

ಬಿಳಿ ಗೆರೆಗಳ ಮಧ್ಯೆ ಬ್ರೇಕ್ ಇದ್ದರೆ…

ಈ ತರಹದ ಬಿಳಿ ಗೆರೆಗಳು ಸಾಮಾನ್ಯವಾಗಿ ಭಾರತದ ಹೈವೇಗಳಲ್ಲಿ ಕಾಣ ಸಿಗುತ್ತವೆ. ಇದರ ಅರ್ಥ ಇಲ್ಲಿ ನೀವು ಓವರ್ ಟೇಕ್ ಮಾಡಬಹುದು, ನೀವು ಹೋಗುತ್ತಿರುವ ಲೇನ್ ಬದಲಾಯಿಸಬಹುದು ಮತ್ತು ಯೂ ಟರ್ನ್ ತೆಗೆದುಕೊಳ್ಳಬಹುದು. ಆದರೆ ಎಚ್ಚರಿಕೆಯಿಂದ ಎಲ್ಲಾ ದಿಕ್ಕಿನೆಡೆ ನೋಡಿಕೊಂಡು ಲೇನ್ ಬದಲಾಯಿಸಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸ್ಥಿರವಾದ ಒಂದು ಬಿಳಿ ಬಣ್ಣದ ಪಟ್ಟೆ ಇದ್ದರೆ…

ಹೆದ್ದಾರಿ ಮೇಲೆ ಬಿಳಿ ಪಟ್ಟೆ ಸ್ಥಿರವಾಗಿ, ಉದ್ದಕ್ಕೆ ಒಂದೇ ಇದ್ದರೆ ವಾಹನಗಳು ತಮ್ಮ ಲೇನ್‍ನಲ್ಲೇ ಸಾಗಬೇಕು ಎಂದರ್ಥ, ಇತರೆ ಲೇನ್‌ಗಳ ಒಳಗೆ ಪ್ರವೇಶಿಸಬಾರದು. ಆದರೆ ಎದುರುಗಡೆ ಏನಾದರೂ ಅಡಚಣೆ ಎದುರಾದರೆ ಮಾತ್ರ ಇನ್ನೊಂದು ಲೇನ್ ಪ್ರವೇಶಿಸಬಹುದು.

ಎರಡು ಹಳದಿ ಬಣ್ಣದ ಪಟ್ಟೆಗಳು ಇದ್ದರೆ..

ಹೆದ್ದಾರಿ ಮೇಲೆ ಸ್ಥಿರವಾದ ಎರಡು ಹಳದಿ ಬಣ್ಣದ ಗೆರೆಗಳು ಇದ್ದರೆ ಓವರ್‌ಟೇಕ್ ಮಾಡುವುದು ಕಡ್ಡಾಯವಾಗಿ ನಿಷೇಧಿಸಿದೆ ಎಂದರ್ಥ.ಈ ಪಟ್ಟಿಗಳು ಸಾಮಾನ್ಯವಾಗಿ ಒಂದೇ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಎರಡು ಲೇನ್ ಗಳ ರಸ್ತೆಯಲ್ಲಿರುತ್ತದೆ. ಇನ್ನೊಂದು ಬದಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚರಿಸುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ನೀವು ಲೇನ್ ಬದಲಾಯಿಸುವಂತಿಲ್ಲ.

ಸ್ಥಿರ ಮತ್ತು ಬ್ರೇಕ್ ಪಟ್ಟಿಗಳು ಜೊತೆಗೆ ಇದ್ದರೆ..

ನೀವು ಸ್ಥಿರವಾಗಿರುವ ಹಳದಿ ಪಟ್ಟೆ ಬದಿಯಲ್ಲಿದ್ದರೆ ನೀವು ಓವರ್ ಟೇಕ್ ಮಾಡುವಂತಿಲ್ಲ, ಮತ್ತು ನೀವೇನಾದರೂ ಬ್ರೇಕ್ ಆಗಿರುವ ಹಳದಿ ಪಟ್ಟಿ ಬದಿಯಲ್ಲಿ ಸಂಚರಿಸುತ್ತಿದ್ದರೆ ನೀವು ಓವರ್ ಟೇಕ್ ಮಾಡಬಹುದು ಎಂದರ್ಥ. ಆದರೆ ಇತರ ವಾಹನಗಳ ಸಂಚಾರವನ್ನು ಗಮನಿಸುತ್ತಿರಬೇಕು.

ಸ್ಥಿರವಾದ ಹಳದಿ ಬಣ್ಣದ ಪಟ್ಟಿ ಇದ್ದರೆ…

ಹೆದ್ದಾರಿ ಮಧ್ಯದಲ್ಲಿ ಸ್ಥಿರವಾದ, ಉದ್ದಕ್ಕೆ ಹಳದಿ ಪಟ್ಟಿ ಇದ್ದರೆ ವಾಹನಗಳು ಓವರ್‌ಟೇಕ್ ಮಾಡಬಹುದು ಎಂದರ್ಥ. ಆದರೆ ಹಳದಿ ಬಣ್ಣದ ಗೆರೆಯನ್ನು ಮಾತ್ರ ದಾಟಬಾರದು. ಆದರೆ ಈ ಪಟ್ಟೆಯ ಅರ್ಥ ಎಲ್ಲಾ ಸ್ಥಳಗಳಲ್ಲಿ ಒಂದೇ ತರಹ ಇರಲ್ಲ. ಉದಾಹರಣೆಗೆ ಕೆಲವು ಕಡೆ ಈ ರೀತಿ ಗೆರೆ ಇದ್ದರೆ ಓವರ್‌ಟೇಕ್ ಮಾಡಬಾರದು ಎಂದರ್ಥ ಇದೆ. ಆಯಾ ಪ್ರದೇಶದ, ರಾಜ್ಯದ ನಿಯಮ ತಿಳಿದುಕೊಳ್ಳುವುದು ಒಳಿತು.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money