Breaking News
Home / Breaking News / ಹಾವುಗಳಿಗೇಕೆ ಎರಡು ನಾಲಿಗೆ ಗೊತ್ತೇ? ಪುರಾಣ ಮತ್ತು ವಿಜ್ಞಾನ ಏನು ಹೇಳುತ್ತದೆ ಈ ಪ್ರಕೃತಿ ವಿಸ್ಮಯದ ಬಗ್ಗೆ?

ಹಾವುಗಳಿಗೇಕೆ ಎರಡು ನಾಲಿಗೆ ಗೊತ್ತೇ? ಪುರಾಣ ಮತ್ತು ವಿಜ್ಞಾನ ಏನು ಹೇಳುತ್ತದೆ ಈ ಪ್ರಕೃತಿ ವಿಸ್ಮಯದ ಬಗ್ಗೆ?

ಭೂಮಂಡಲದಲ್ಲಿರುವ ಜೀವಚರಗಳಿಗೆಲ್ಲಾ ಇರುವುದು ಒಂದೇ ನಾಲಿಗೆ. ಆದರೆ ನಮಗೆ ಗೊತ್ತಿರುವಂತೆ ಹಾವುಗಳಿಗೆ ಮಾತ್ರ 2 ನಾಲಿಗೆಗಳಿರುತ್ತವೆ. ಅದು ಎರಡು ನಾಳಿಗೆ ಅನ್ನುವುದಕ್ಕಿಂತಲೂ ಒಂದೇ ನಾಲಿಗೆ ಎದುರುಗಡೆ ಸೀಳಾಗಿರುತ್ತದೆ.

ಆದರೆ ಇದು ಹೀಗ್ಯಾಕೆ ಇರುತ್ತದೆ ಎಂದು ನಿಮಗೆ ಗೊತ್ತೇ? ಪುರಾಣದಲ್ಲಿ ಈ ನಾಲಿಗೆಯ ಹಿಂದೆ ಒಂದು ಕಥೆಯಿದ್ದರೆ, ವಿಜ್ಞಾನ ಮತ್ತೊಂದು ಹೇಳುತ್ತದೆ. ಹಾಗಾದರೆ ಬನ್ನಿ, ಅದೇನೆಂದು ತಿಳಿದುಕೊಳ್ಳೋಣ.

ವಿಜ್ಞಾನ ಏನು ಹೇಳುತ್ತದೆ?

ವಿಜ್ಞಾನದ ಪ್ರಕಾರ ಹಾವುಗಳಿಗೆ ‘ವಾಸನೆ’ ಗ್ರಹಿಸಲು ಸೀಳು ನಾಲಿಗೆಗಳಿವೆ. ಅವು ನಾಲಿಗೆಯನ್ನು ಗಾಳಿಯಲ್ಲಿ ಬಿಟ್ಟಾಗ ಹತ್ತಿರದಲ್ಲಿರುವ ವಸ್ತುಗಳ, ಕಣಗಳ ವಾಸನೆಯು ಅವುಗಳ ಇಂದ್ರೀಯಗಳ ಮುಖಾಂತರ ಬಾಯಿಗೆ ತಲುಪುತ್ತದೆ. ಈ ಇಂದ್ರೀಯವನ್ನು ವೊಮೆರೊನಾಸಲ್ ಆರ್ಗಾನ್ (vomeronasal) ಎನ್ನುತ್ತಾರೆ. ಇದು ಹಾವುಗಳ ಮೂಗಿನ ಹಿಂದೆ, ಒಳ ಬಾಯಿಯ ಮೇಲೆ ಎರಡು ಸಣ್ಣ ಚಡಿಗಳಲ್ಲಿ ಇರುತ್ತವೆ. ಗಾಳಿಯಲ್ಲಿ ವಸ್ತುಗಳ ವಾಸನೆಯನ್ನು ನಾಲಿಗೆಯ ಮೂಲಕ ಗ್ರಹಿಸಿದ ನಂತರ ಅದು ನಾಲಿಗೆಯ ಮುಖಾಂತರ ಈ ಚಡಿಗಳ ಮೂಲಕ ಮೆದುಳಿಗೆ ತಲುಪಿಸುತ್ತದೆ.

ಹಾವುಗಳಿಗೆ ವಾಸನೆ ಗ್ರಹಿಸಲು ಮೂಗುಗಳಿವೆ, ಹಾಗಾಗಿ ಈ ಸೀಳು ನಾಲಿಗೆಗಳು ಇವುಗಳಿಗೆ ವಾಸನೆ ಗ್ರಹಿಸಲು ಇನ್ನೊಂದು ವರದಾನ. ಈ ಮೂಲಕ ಅವುಗಳು ಶತ್ರುಗಳ ಆಗಮನವನ್ನು ಕಿವಿಗಳಿಂದ ಹೆಚ್ಚಾಗಿ ನಾಲಿಗೆಗಳ ಮೂಲಕ ಕಂಡುಹಿಡಿಯುತ್ತವೆ.

ಪುರಾಣದ ಪ್ರಕಾರ:

ಪುರಾಣಗಳ ಪ್ರಕಾರ, ಕಶ್ಯಪ ಎಂಬ ಋಷಿಮುನಿಗೆ ಇಬ್ಬರು ಮಕ್ಕಳು, ವಿನುತ ಮತ್ತು ಕದ್ರು. ಇದರಲ್ಲಿ ವಿನುತಗೆ ಅರುಣ ಮತ್ತು ಗರುಡ ಎಂಬ ಇಬ್ಬರು ಮಕ್ಕಳಿದ್ದರೆ, ಕದ್ರುವಿನ ಮಕ್ಕಳು 2 ಸರ್ಪಗಳಾಗಿದ್ದವು. ಹೀಗೆ ಒಂದು ದಿನ ಸಮುದ್ರದಲ್ಲಿ ಇದ್ದ ಬಿಳಿ ಕುದುರೆಯ ಬಾಲದ ಬಣ್ಣದ ಬಗ್ಗೆ ವಿನುತ ಮತ್ತು ಕದ್ರುವಿನ ನಡುವೆ ವಾದ ವಿವಾದ ಏರ್ಪಡುತ್ತದೆ. ವಿನುತ ಬಿಳಿಗುದುರೆಯ ಬಾಲವೂ ಬಿಳಿ ಇದೆ ಎಂದರೆ ಕದ್ರು ಅದರ ಬಾಲ ಕಪ್ಪಗಿದೆ ಎಂದು ವಾದಿಸುತ್ತಾಳೆ. ಈ ಪಂಥದಲ್ಲಿ ಸೋತವರು ಗೆದ್ದವರ ದಾಸಿಯಾಗಬೇಕು ಎಂಬ ಒಪ್ಪಂದವೂ ಆಗುತ್ತದೆ.

ಆದರೆ ಕದ್ರು ತಾನೇ ಗೆಲ್ಲಬೇಕೆಂದು ತನ್ನ ಮಕ್ಕಳಾದ ಸರ್ಪಗಳನ್ನು ಕುದುರೆಯ ಬಾಲದಲ್ಲಿ ಸೇರಿಕೊಳ್ಳಲು ಸೂಚಿಸುತ್ತಾಳೆ. ಹೀಗಾಗು ಬಿಳಿಗುದುರೆಯ ಬಾಲವು ಕಪ್ಪಾಗಿ ಕಾಣಿಸುತ್ತದೆ. ಮೋಸದಾಟದಲ್ಲಿ ಸೋತ ವಿನುತ ಕದ್ರುವಿನ ದಾಸಿಯಾಗುತ್ತಾಳೆ. ಕದ್ರು ವಿನುತಳನ್ನು ಅತೀ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದನ್ನು ಕಂಡ ಆಕೆಯ ಮಗ ಗರುಡ ತನ್ನ ತಾಯಿಯನ್ನು ಬಿಡುಗಡೆಗೊಳಿಸುವಂತೆ ಕದ್ರುವಿನ ಮಕ್ಕಳಾದ ಸರ್ಪಗಳ ಬಳಿ ಕೇಳಿಕೊಳ್ಳುತ್ತಾನೆ. ಆಗ ಸರ್ಪಗಳು ತಮಗೆ ಸ್ವರ್ಗದಿಂದ ಅಮೃತ ತಂದುಕೊಟ್ಟರೆ ಆಕೆಯನ್ನು ಬಂಧಮುಕ್ತಿಗೊಳಿಸುವುದಾಗಿ ಹೇಳುತ್ತಾರೆ.

ಆಗ ಗರುಡ ಸ್ವರ್ಗಕ್ಕೆ ಹೋಗಿ ಇಂದ್ರನಲ್ಲಿ ಅಮೃತಕ್ಕಾಗಿ ಬೇಡಿಕೆಯಿಡುತ್ತಾನೆ, ಅಮೃತ ಕೊಡಲು ಹಿಂಜರಿಯುವ ಇಂದ್ರನಲ್ಲಿ ತಾಯಿಯ ಬಂಧಮುಕ್ತಿಯಾದ ತಕ್ಷಣ ಅಮೃತವನ್ನು ವಾಪಾಸ್ ತರುವುದಾಗಿ ಮಾತು ಕೊಟ್ಟು ಅದನ್ನು ತೆಗೆದುಕೊಂಡು ಬಂದು ಸರ್ಪಗಳಿಗೆ ತೋರಿಸುತ್ತಾನೆ. ಸಂತಸಗೊಂಡ ಸರ್ಪಗಳು ವಿನುತಳನ್ನು ಬಿಡುಗಡೆಗೊಳಿಸುತ್ತವೆ. ಕೂಡಲೇ ಗರುಡ ತಾಯಿಯ ಜೊತೆ ಅಮೃತವನ್ನು ತೆಗೆದುಕೊಂಡು ವಾಪಾಸ್ ಹೋಗುತ್ತಾನೆ. ಇದರಿಂದ ನಿರಾಸೆಗೊಂಡ ಸರ್ಪಗಳು ಅಮೃತ ಇಟ್ಟಿದ್ದ ದರ್ಭೆಯನ್ನೇ ನೆಕ್ಕುತ್ತಾರೆ. ನೆಕ್ಕಿ – ನೆಕ್ಕಿ ಅವುಗಳ ನಾಲಿಗೆ ಎರಡು ಸೀಳಾಗುತ್ತದೆ, ಇದರಿಂದ ಸರ್ಪಕ್ಕೂ ಗರುಡಕ್ಕೂ ಶಾಶ್ವತ ವೈರತ್ವ ಏರ್ಪಡುತ್ತದೆ ಎನ್ನುವುದು ಪೌರಾಣಿಕ ಕಥೆ.

Check Also

ಯಾರೂ ಊಹಿಸದ ಜಾಗದಲ್ಲಿ ರಾತ್ರಿ ಕಳೆದ ಶಾಸಕ; ಎಲ್ಲಿ ಎಂದು ಗೊತ್ತಾದ್ರೆ ಬೆಚ್ಚಿ ಬೀಳುವಿರಿ!

ರಾಜಕಾರಣಿಗಳು, ಶಾಸಕರು, ಮಂತ್ರಿಗಳು ಸಾಮಾನ್ಯವಾಗಿ ಅಧಿಕಾರಿಗಳಿಗೆ ಆದೇಶ ನೀಡುತ್ತಾ, ಅವರಿಂದ ಕೆಲಸ ಮಾಡಿಸುತ್ತಾ ಇನ್ನೇನು ಸಂಜೆಯಾಗುತ್ತಿದೆ ಎನ್ನುವಾಗ ತಮ್ಮ ತಮ್ಮ …

Leave a Reply

Your email address will not be published. Required fields are marked *

Powered by keepvid themefull earn money