Breaking News
Home / Breaking News / ಡಾ.ರಾಜ್ ಕುಮಾರ್ ಕಿಡ್ನ್ಯಾಪ್ ಕೇಸ್; ಎಲ್ಲಾ ಆರೋಪಿಗಳು ಖುಲಾಸೆ- ಕೋರ್ಟ್’ನಲ್ಲೇನಾಯಿತು?

ಡಾ.ರಾಜ್ ಕುಮಾರ್ ಕಿಡ್ನ್ಯಾಪ್ ಕೇಸ್; ಎಲ್ಲಾ ಆರೋಪಿಗಳು ಖುಲಾಸೆ- ಕೋರ್ಟ್’ನಲ್ಲೇನಾಯಿತು?

18 ವರ್ಷಗಳ ಹಿಂದೆ ವರನಟ ಡಾ. ರಾಜ್ ಕುಮಾರ್ ಅವರ ಕಿಡ್ನ್ಯಾಪ್ ಕೇಸ್ ಗೆ ಸಂಬಂಧಪಟ್ಟ ತೀರ್ಪು ಇಂದು ಹೊರಬಿದ್ದಿದ್ದು, ಎಲ್ಲಾ 9 ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ.

Image result for rajkumar veerappan

ಜುಲೈ 30, 2000ರಂದು ತಲವಾಡಿಯ ದೊಡ್ಡಗಾಜನೂರು ಗ್ರಾಮದ ಬಳಿ ರಸ್ತೆಯಲ್ಲಿ ಅಡ್ಡಗಟ್ಟಿ ಪಾರ್ವತಮ್ಮ ಅವರ ಎದುರೇ ರಾಜ್‍ಕುಮಾರ್, ಅಳಿಯ ಎಸ್.ಎ.ಗೋವಿಂದರಾಜು, ಸಂಬಂಧಿ ನಾಗೇಶ್ ಹಾಗೂ ಸಹಾಯಕ ನಿರ್ದೇಶಕ ನಾಗಪ್ಪ ಅವರನ್ನು ಅಪಹರಿಸಿದ್ದರು. 108 ದಿನಗಳ ಕಾಲ ಇರಿಸಿಕೊಂಡು, ನವೆಂಬರ್ 15ರಂದು ರಾಜ್‍ಕುಮಾರ್ ಅವರನ್ನು ಬಿಟ್ಟು ಕಳುಹಿಸಿದ್ದ.

Image result for rajkumar veerappan

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ತಲ್ಲಣ ಸೃಷ್ಟಿಸಿದ್ದ ಈ ಕೇಸ್ ಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿದ ತಮಿಳುನಾಡಿನ ಈರೋಡ್ ಜಿಲ್ಲೆಯ ಗೋಬಿಚೆಟ್ಟಿಪಾಳ್ಯಂ ಕೋರ್ಟ್ ‘ಪೊಲೀಸ್ ಇಲಾಖೆ ಅಪಹರಣದ ಕುರಿತು ಸಾಕ್ಷ್ಯ ನೀಡುವಲ್ಲಿ ವಿಫಲಗೊಂಡಿದೆ ಮತ್ತು ರಾಜ್‍ಕುಮಾರ್ ಕುಟುಂಬಸ್ಥರು ಸಾಕ್ಷ್ಯ ಹೇಳದ ಹಿನ್ನೆಲೆಯಲ್ಲಿ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

Image result for rajkumar veerappan

‘ತನ್ನ ಕಣ್ಣಮುಂದೆಯೇ ಅಪಹರಣ ನಡೆದರೂ ಪತ್ನಿ ಪಾರ್ವತಮ್ಮ ರಾಜ್ ‘ಕುಮಾರ್ ಕೂಡ ಸಾಕ್ಷ್ಯ ನೀಡಲು ಹಿಂಜರಿದಿದ್ದರು, ಅಲ್ಲದೆ 42 ಜನ ಸಾಕ್ಷಿದಾರರು, 52 ದಾಖಲೆ ಹಾಗೂ 31 ಗನ್ ಸೇರಿದಂತೆ ಕೃತ್ಯಕ್ಕೆ ಬಳಸಿದ್ದ ವಸ್ತುಗಳ ಬಗ್ಗೆ ತನಿಖೆ ನಡೆಸಿದರೂ, ಅಗತ್ಯ ಸಾಕ್ಷಾಧಾರಗಳು ಸಿಕ್ಕಿಲ್ಲ’ ಎಂದು ನ್ಯಾಯಾಧೀಶ ಮಣಿ ವೀರಪ್ಪನ್ ತೀರ್ಪಿನಲ್ಲಿ ತಿಳಿಸಿದ್ದಾರೆ.

Image result for rajkumar veerappan

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲವಾಡಿ ಪೊಲೀಸರು ವೀರಪ್ಪನ್ ಸೇರಿದಂತೆ ಒಟ್ಟು 14 ಮಂದಿಯನ್ನು ಬಂಧಿಸಿದ್ದರು. ಸೇತುಕುಳಿ ಗೋವಿಂದನ್, ಚಂದ್ರೇಗೌಡ, ಮಲ್ಲು, ಮಾರನ್, ಗೋವಿಂದರಾಜ್ ಅಲಿಯಾಸ್ ಇನಿಯನ್, ಅಂದ್ರಿಲ್, ಸೆಲ್ವಂ, ಅಮೃತಲಿಂಗಂ, ಪಸುವನ್ನ, ನಾಗರಾಜ್, ಪುಟ್ಟುಸ್ವಾಮಿ, ಕಲ್‌ಮಂದಿರಾಮ ಮತ್ತು ರಮೇಶ್ ಬಂಧಿತ ಆರೋಪಿಗಳು.

Image result for rajkumar veerappan

ಇದರಲ್ಲಿ 2004ರ ಅಕ್ಟೋಬರ್ 18ರಂದು ಆಪರೇಷನ್ ಕೋಕೂನ್ ಹೆಸರಲ್ಲಿ ನಡೆಸ ಪೊಲೀಸ್ ಎನ್‍ಕೌಂಟರ್ ನಲ್ಲಿ ವೀರಪ್ಪನ್ ಬಲಿಯಾಗಿದ್ದರೆ, ಸಹಚರ ಸೇತುಕುಡಿ, ಗೋವಿಂದನ್, ರಂಗಸಾಮಿ ಸಾವನ್ನಪ್ಪಿದ್ದರು. ಉಳಿದ 9 ಜನರ ತೀರ್ಪು ಬಾಕಿಯಿತ್ತು.

Check Also

ಧರ್ಮಶಾಸ್ತ್ರಾನುಸಾರ ನಿಮ್ಮ ಇಂದಿನ ದಿನ ಭವಿಷ್ಯ [ಅಕ್ಟೋಬರ್ 17 – ಬುಧವಾರ]

ಪಂಡಿತ್ ಸೋಮನಾಥ್ ಸ್ವಾಮಿ, ದೈವಜ್ಞ ಜ್ಯೋತಿಷ್ಯರು – ಆಧ್ಯಾತ್ಮಿಕ ಚಿಂತಕರು: ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *

Powered by keepvid themefull earn money