Breaking News
Home / Breaking News / ನೆನೆಸಿಟ್ಟ ಬಾದಾಮಿ ತಿನ್ನುವ ಮೊದಲು ಅದ್ಯಾಕೆ ತಿನ್ನುತ್ತಿದ್ದೀರೆಂದು ಮೊದಲು ತಿಳ್ಕೊಬೇಕಲ್ವೇ? ಇದನ್ನು ಓದಿ!

ನೆನೆಸಿಟ್ಟ ಬಾದಾಮಿ ತಿನ್ನುವ ಮೊದಲು ಅದ್ಯಾಕೆ ತಿನ್ನುತ್ತಿದ್ದೀರೆಂದು ಮೊದಲು ತಿಳ್ಕೊಬೇಕಲ್ವೇ? ಇದನ್ನು ಓದಿ!

ಬಾದಾಮಿ – ಪುಟ್ಟದಾದ ಈ ಬೀಜವನ್ನು ಸಾಮಾನ್ಯವಾಗಿ ನಾನು ರಾತ್ರಿ ನೆನೆಸಿ ಬೆಳಿಗ್ಗೆ ಅದರ ಸಿಪ್ಪೆ ಸುಲಿದು ಸೇವಿಸುತ್ತೇವೆ. ಏಕೆಂದರೆ ಇದರಲ್ಲಿರುವ ಕ್ಯಾಲೋರಿಗಳು, ಒಮೆಗಾ-ವಿಟಮಿನ್ನುಗಳು ನಮ್ಮ ಮೆದುಳನ್ನು ಚುರುಕುಗೊಳಿಸಬೇಕಾದರೆ ಇದನ್ನು ಒಣದಾಗಿ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದು ಅತ್ಯಗತ್ಯ.

ಬಾದಾಮಿಯ ಗಾತ್ರ ಚಿಕ್ಕದಾದರೂ ಇದರಲ್ಲಿ ಪೋಷಕಾಂಶಗಳ ಆಗರವೇ ಇದೆ. ಇದು ನೈಸರ್ಗಿಕ ಕೊಬ್ಬಿನ ಪ್ರಮುಖ ಮೂಲವಾಗಿದ್ದು ದಿನದ ಅಗತ್ಯದ ಪ್ರೋಟೀನುಗಳನ್ನೂ ಒದಗಿಸುತ್ತವೆ.

Image result for soaked almonds nutrition

ಸ್ವಲ್ಪ ದೊಡ್ಡದಾಗಿರುವ ಒಂದು ಬಾದಾಮಿಯಲ್ಲಿ ಇರುವ ಪೋಷಕಾಂಶದ ಅಂಶಗಳ ಬಗ್ಗೆ ತಿಳಿಯಬೇಕೇ?

ಪೊಟ್ಯಾಸಿಯಮ್ – 50 ಮಿ ಗ್ರಾಂ
ಕ್ಯಾಲೋರಿಗಳು – 40
ಕಾರ್ಬೋಹೈಡ್ರೇಟ್ – 1 ಗ್ರಾಂ
ಕೊಬ್ಬು – 3 ಗ್ರಾಂ
ಕ್ಯಾಲ್ಸಿಯಂ – 2%
ಕಬ್ಬಿಣ – 1%
ಕೊಬ್ಬು – 3 ಗ್ರಾಂ

ಬಾದಾಮಿಯ ಆರೋಗ್ಯ ಲಾಭಗಳು:

ಬಾದಾಮಿಯ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕರುಳಿನ ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾದಾಮಿಯಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಏಕ ಏಕ ಅಸಂತೃಪ್ತ ಕೊಬ್ಬುಗಳು ಮತ್ತು ಪ್ರೋಟೀನ್‌ಗಳಿವೆ. ಬಾದಾಮಿಯಲ್ಲಿರುವ ವಿಟಮಿನ್ ಇ ಅಂಶವು ನಿಮಗೆ ನಯವಾದ ಮತ್ತು ಹೊಳೆಯುವ ಕೂದಲನ್ನು ನೀಡುತ್ತದೆ. ನೆನೆಸಿದ ಬಾದಾಮಿಯಲ್ಲಿರುವ ಫೋಲಿಕ್ ಆಮ್ಲ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮೆದುಳನ್ನು ಚುರುಕುಗೊಳಿಸಿ ಸ್ಮರಣಶಕ್ತಿಯನ್ನು ಉತ್ತಮಪಡಿಸುತ್ತದೆ:

ಬಾದಾಮಿಯಲ್ಲಿರುವ ವಿಟಮಿನ್ ಬಿ6 ಮೆದುಳಿನ ಜೀವಕೋಶಗಳಿಗೆ ಪ್ರೋಟೀನ್‌ಗಳ ಜೈವಿಕ ಲಭ್ಯತೆಯನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಮೆದುಳಿನಲ್ಲಿ ನರಪ್ರೇಕ್ಷಕ ರಾಸಾಯನಿಕ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ನ್ಯೂರೋಪ್ಲ್ಯಾಸ್ಟಿಕ್ ಅಂಶವನ್ನೂ ಸುಧಾರಿಸುತ್ತದೆ. ಮೆದುಳಿನಲ್ಲಿ ನ್ಯೂರೋಪ್ಲ್ಯಾಸ್ಟಿಕ್ ಅಂಶ ಉತ್ತಮಗೊಂಡಾಗ ನಿಮ್ಮ ಮೆದುಳು ಹೊಸ ಸಿನಾಪ್ಸೆಸ್ (ಮೆದುಳಿನಲ್ಲಿ ಒಂದು ನ್ಯೂರಾನ್ ನಿಂದ ಇನ್ನೊಂದಕ್ಕೆ ವಿದ್ಯುತ್ ಅಥವಾ ರಾಸಾಯನಿಕ ಸಂಕೇತ ರವಾನಿಸುವ ಕ್ಶಮತೆ) ರಚಿಸಲು, ಕೋಶಗಳ ನಡುವೆ ಹೆಚ್ಚಿನ ಸಂಪರ್ಕವನ್ನು ಮಾಡಲು ಮತ್ತು ಹೊಸ ವಿಷಯಗಳನ್ನು ವೇಗವಾಗಿ ಕಲಿಯಲು ಸಾಧ್ಯವಾಗುತ್ತದೆ.

ಅಲ್ಲದೆ, ಬಾದಾಮಿಯಲ್ಲಿ ಎಲ್-ಕಾರ್ನಿಟೈನ್ ಮತ್ತು ಇತರ ಪೋಷಕಾಂಶಗಳಿದ್ದು ಇದು ಹೊಸ ಮೆದುಳಿನ ಕೋಶಗಳ ಉತ್ಪಾದನೆ ಮತ್ತು ಬೆಳವಣಿಗೆಗೆ ನೆರವಾಗುತ್ತದೆ. ಅರಿವಿನ ಸಾಮರ್ಥ್ಯಗಳಿಗೆ ಸಂಬಂಧಿಸಿರುವ ಮೆದುಳಿನಲ್ಲಿರುವ ಫೆನಿಲಾಲನೈನ್ ಎಂಬ ರಾಸಾಯನಿಕವು ಸ್ಮರಣಶಕ್ತಿಯನ್ನು ಉತ್ತಮಗೊಳಿಸುತ್ತದೆ ಎಂದು ಸಾಬೀತಾಗಿದೆ.

Image result for soaked almonds health benefits

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ:

ಬಾದಾಮಿಯಲ್ಲಿ ಕಾರ್ಬೋಹೈಡ್ರೇಟುಗಳು ಅತಿ ಕಡಿಮೆ ಇರುವುದರಿಂದ ಅವು ಮಧುಮೇಹಿಗಳಿಗೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ನೆರವಾಗುತ್ತವೆ. ಇದರ ಜೊತೆಗೇ ರಕ್ತದಲ್ಲಿ ಇನ್ಸುಲಿನ್ ನ ಕಾರ್ಯವನ್ನು ಸುಧಾರಿಸುತ್ತದೆ. ದೇಹದ 300ಕ್ಕೂ ಅಧಿಕ ಕಾರ್ಯಚಟುವಟಿಕೆಗಳಿಗೆ ಅಗತ್ಯವಿರುವ ಮೆಗ್ನೀಸಿಯಮ್ ನ್ನು ಬಾದಾಮಿ ಪೂರೈಸುತ್ತದೆ.

ಉತ್ತಮ ಜೀರ್ಣಾಂಗ ವ್ಯವಸ್ಥೆಗೆ:

ದೇಹಕ್ಕೆ ಅಗತ್ಯವಿರುವ ಪೋಷಕಾಂಶ ಗಳನ್ನು ಆಹಾರದಿಂದ ಹೀರಿ ದೇಹಕ್ಕೆ ಒದಗಿಸಲು ಅಗತ್ಯವಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳ ಉತ್ಪಾದನೆಗೆ ಬಾದಾಮಿ ತುಂಬಾ ಒಳ್ಳೆಯದು. ರಾತ್ರಿ ನೆನೆಸಿಟ್ಟ ಬಾದಾಮಿಯನ್ನು ಬೆಳಿಗ್ಗೆ ತಿನ್ನುವುದರಿಂದ ಅದು ನಮ್ಮ ಕರುಳಿನ ಕಾರ್ಯವನ್ನು ಉತ್ತಮಗೊಳಿಸಿ ಜೀರ್ಣ ಕ್ರೀಯೆ ಸಲೀಸಾಗುವಂತೆ ಮಾಡುತ್ತದೆ.

ಹೃದಯ ಸಂಬಂಧಿ ರೋಗಗಳಿಂದ ಕಾಪಾಡುತ್ತದೆ:

ಬಾದಾಮಿಯಲ್ಲಿರುವ ಫ್ಲೇವನಾಯ್ಡುಗಳು ಮತ್ತು ಆರೋಗ್ಯಕರ ಕೊಬ್ಬಿನ ಆಮ್ಲಗಳು ಏಕ ಅಸಂತೃಪ್ತ ಆಮ್ಲಗಳಾಗಿವೆ ಇದಕ್ಕೆ MUFA (monounsaturated fatty acid) ಎಂದೂ ಹೇಳುತ್ತಾರೆ. ಇವು ಹೃದಯರಕ್ತನಾಳದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹದಲ್ಲಿನ ಉತ್ಕರ್ಷಣ ನಿರೋಧಕ ಅಂಶಕ್ಕೆ ಪೂರಕವಾಗಿರುತ್ತದೆ.

ಫ್ಲೇವನಾಯ್ಡುಗಳು ಉರಿಯೂತವನ್ನು ತಡೆಗಟ್ಟಿದರೆ, ಬಾದಾಮಿಯಲ್ಲಿರುವ ವಿಟಮಿನ್ ಇ ಮತ್ತು ಇತರ ಪೋಷಕಾಂಶಗಳು ದೇಹದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ.

Image result for soaked almonds health benefits

ಮೂಳೆಗಳು ಗಟ್ಟಿಯಾಗಲು:

ವಯಸ್ಸಾಗುತ್ತಿದ್ದಂತೆ ನಮ್ಮ ಮೂಳೆಗಳ ಸಾಂದ್ರತೆಯು ಕಡಿಮೆಯಾಗಿ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ ಓಸ್ಟಿಯೋಪೋರೋಸಿಸಿ ಎಂಬ ಸ್ಥಿತಿ ಉಂಟಾಗುತ್ತದೆ. ಹೀಗಾಗಿ ಮೂಳೆ ಮತ್ತು ಹಲ್ಲುಗಳು ಗಟ್ಟಿಯಾಗಿ ಆರೋಗ್ಯಕರವಾಗಿರಬೇಕಾದರೆ ಕ್ಯಾಲ್ಶಿಯ್ಮ್ ಹೇರಳವಾಗಿರುವ ಬಾದಾಮಿಯನ್ನು ಪ್ರತಿದಿನ ಸೇವಿಸುವುದು ಅತ್ಯಗತ್ಯ.

ಕೊಂಚ ವ್ಯಾಯಾಮ, ಕೊಂಚ ಬಾದಾಮಿ ಈ ಶಿಥಿಲವಾಗುವಿಕೆಯನ್ನು ನಿಧಾನಗೊಳಿಸಿ ವೃದ್ಧಾಪ್ಯದಲ್ಲಿಯೂ ಗಟ್ಟಿ ಮೂಳೆಗಳನ್ನು ಪಡೆಯಲು ನೆರವಾಗುತ್ತದೆ.

ಪಾರ್ಶ್ವವಾಯು ಮತ್ತು ರಕ್ತದೊತ್ತಡ ಸಾಧ್ಯತೆ ತಗ್ಗಿಸಲು:

ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು, ಹೃದಯಾಘಾತ ಮತ್ತು ಹೃದಯ ಸ್ತಂಭನದ ಸಾಧ್ಯತೆಗಳು ಹೆಚ್ಚುತ್ತವೆ. ನಮ್ಮ ದೇಹದಲ್ಲಿ ಮೆಗ್ನಿಶಿಯಂ ಕೊರತೆಯಾದರೆ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಯಿರುತ್ತದೆ. ಆದ್ದರಿಂದ ಮೆಗ್ನಿಶಿಯಂ ಹೇರಳವಾಗಿರುವ ಬಾದಾಮಿಯನ್ನು ಪ್ರತಿದಿನ ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

Check Also

ಹಿಮಾಲಯದಲ್ಲಿ ಸಿಗೋ ಈ ಬೇರಿಗಾಗಿ ಕೊಲೆಗಳೇ ನಡೆಯುತ್ತವಂತೆ; ಅಂಥದ್ದೇನಿದೆ ಆ ಬೇರಲ್ಲಿ…

ಅದೊಂದು ಬೇರು ಹಿಮಾಲಯದ ತಪ್ಪಲು ಹೊರತುಪಡಿಸಿದರೆ ಜಗತ್ತಿನ ಬೇರೆಲ್ಲೂ ಸಿಗದು. ಇದಕ್ಕಾಗಿ ಹೋರಾಟ, ಕೊಲೆಗಳೇ ನಡೆಯುತ್ತವೆ. ಇಂದು ಈ ಬೇರಿಗೆ …

Leave a Reply

Your email address will not be published. Required fields are marked *