Breaking News
Home / Breaking News / ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಮೊಣಕೈ ಮತ್ತು ಮೊಣಕಾಲಿನ ಮೇಲಿನ ಕಲೆ ನಿವಾರಣೆಗೆ ಇಲ್ಲಿದೆ ನೋಡಿ ಪರಿಣಾಮಕಾರಿ ಮನೆಮದ್ದು!

ಸಾಮಾನ್ಯವಾಗಿ ನಮ್ಮ ಮೊಣಕೈ, ಮೊಣಕಾಲು ಅಥವಾ ದೇಹದ ಕೆಲವು ಭಾಗಗಳು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತವೆ. ಇದಕ್ಕೆ ಕಾರಣ ಚರ್ಮ ಕೋಶಗಳು ಸತ್ತು ಒಣಗಿ ಹೋಗುವುದು. ಇದನ್ನು ನಿವಾರಿಸಲು ನಾವು ಎಷ್ಟೇ ಕ್ರೀಮ್ ಗಳನ್ನು ಹಚ್ಚಿದರೂ ಯಾವುದೇ ಪರಿಣಾಮ ಬೀರುವುದಿಲ್ಲ.

ಅದಕ್ಕೆ ಇಲ್ಲಿದೆ ನೋಡಿ ಕೆಲವು ಮನೆಮದ್ದುಗಳು;

ಅಡುಗೆ ಸೋಡಾ:

ಮೊಣಕಾಲು ಹಾಗೂ ಮೊಣಕೈಯಲ್ಲಿರುವ ಸತ್ತ ಚರ್ಮದ ಕೋಶಗಳನ್ನು ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಹಾಲಿನಲ್ಲಿರುವ ಲ್ಯಾಕ್ಟಿಕ್‌ ಆಮ್ಲವು ಚರ್ಮಕ್ಕೆ ತೇವಾಂಶ ನೀಡುತ್ತದೆ.

ಒಂದು ಚಮಚ ಅಡುಗೆ ಸೋಡಾಕ್ಕೆ ಹಾಲು ಹಾಕಿ ದಪ್ಪ ಪೇಸ್ಟ್‌ ಮಾಡಿ, ಅದನ್ನು ಮೊಣಕೈ ಹಾಗೂ ಮೊಣಕಾಲಿಗೆ ಹಚ್ಚಿ. ಇದು ಒಣಗಿದ ಬಳಿಕ ಸ್ಕ್ರಬ್ ಮಾಡಿ. ವಾರದಲ್ಲಿ ಎರಡು ಸಲ ಇದನ್ನು ಮಾಡಿದರೆ ಕಪ್ಪು ಕಲೆ ನಿಧಾನವಾಗಿ ಕರಗುತ್ತದೆ.

ಸಾಸಿವೆ ಎಣ್ಣೆ:

ಈ ಎಣ್ಣೆಯಲ್ಲಿರುವ ಲಿನೋಲಿಕ್‌, ಎರುಸಿಸ್‌ ಮತ್ತು ಒಲೈಕ್‌ ಆಮ್ಲಗಳು ಮೊಣಕೈ ಹಾಗೂ ಮೊಣಕಾಲಿನ ಕಪ್ಪು ಕಲೆಯನ್ನು ತಿಳಿಯಾಗಿಸುವವು. ಆದ್ದರಿಂದ ಮಲಗುವ ಮೊದಲು ಮೊಣಕಾಲು ಹಾಗೂ ಮೊಣಕೈಗೆ ಸಾಸಿವೆ ಎಣ್ಣೆ ಹಚ್ಚಿಕೊಂಡು ಸರಿಯಾಗಿ ಮಸಾಜ್ ಮಾಡಿ. ಬೆಳಗ್ಗೆ ಎದ್ದ ನಂತರ ಸೋಪಿನಿಂದ ತೊಳೆದರೆ ಉತ್ತಮ ಪರಿಣಾಮ ಬೀರುವುದು.

ಈರುಳ್ಳಿ ಮತ್ತು ನಿಂಬೆ ರಸ:

ಈರುಳ್ಳಿ ಮತ್ತು ನಿಂಬೆರಸದಲ್ಲಿರುವ ಸಲ್ಫರ್‌ ಮತ್ತು ಸಿಟ್ರಿಕ್‌ ಆಮ್ಲ ಸತ್ತ ಚರ್ಮದ ಕೋಶಗಳ ಶೇಖರಣೆಯನ್ನು ತೆಗೆದು ಚರ್ಮದ ಬಣ್ಣವನ್ನು ತಿಳಿಯಾಗಿಸುವುದು.

ಒಂದು ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಕತ್ತರಿಸಿ ತೆಳುವಾದ ಪೇಸ್ಟ್‌ ಮಾಡಿ. ಈ ಮಿಶ್ರಣಕ್ಕೆ ಒಂದು ಚಮಚ ನಿಂಬೆ ರಸ ಮತ್ತು ಒಂದು ಚಮಚ ಗ್ಲಿಸರಿನ್‌ ಹಾಕಿ. ಇದನ್ನು ಮೊಣಕೈಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಕಾಲ ಹಾಗೆ ಬಿಟ್ಟು ನಂತರ ತೊಳೆದುಕೊಳ್ಳಬೇಕು.

ಕಿತ್ತಳೆಯ ಸಿಪ್ಪೆ:

ಇದರಲ್ಲಿರುವ ವಿಟಿಮಿನ್‌ ಸಿ ಚರ್ಮದ ಬಣ್ಣವನ್ನು ತಿಳಿಯಾಗಿಸುತ್ತದೆ.

ಕಿತ್ತಳೆ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ. ಒಂದು ಚಮಚ ಕಿತ್ತಳೆ ಸಿಪ್ಪೆಯ ಪುಡಿಯನ್ನು ಸಣ್ಣ ಬೌಲ್‌ಗೆ ಹಾಕಿ ಅದಕ್ಕೆ ರೋಸ್‌ ವಾಟರ್‌ ಬೆರೆಸಿ. ಈ ಮಿಶ್ರಣವನ್ನು ಮೊಣಕೈಗೆ ಹಚ್ಚಿ ಒಣಗಲು ಬಿಡಿ. 10 ನಿಮಿಷದ ನಂತರ ತೊಳೆಯಿರಿ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money