Breaking News
Home / Breaking News / ಕೊಂಬುಚಾ ಕೇಳಿದ್ದೀರಾ…? ಈ ಮ್ಯಾಜಿಕ್ ಟೀ ಕುಡಿದು ನೋಡಿ; ರೆಸಿಪಿ ನಿಮಗಾಗಿ

ಕೊಂಬುಚಾ ಕೇಳಿದ್ದೀರಾ…? ಈ ಮ್ಯಾಜಿಕ್ ಟೀ ಕುಡಿದು ನೋಡಿ; ರೆಸಿಪಿ ನಿಮಗಾಗಿ

ಕ್ರಿಸ್ತಪೂರ್ವ 414ರಲ್ಲಿ ಜಪಾನಿನ ಚಕ್ರವರ್ತಿ ಇನ್ಯೋಕೋಗೆ ಕೊರಿಯನ್ ವೈದ್ಯ ಡಾ. ಕೊಂಬು ಈ ಟೀಯನ್ನು ಪರಿಚಯಿಸಿದ್ದು ಎನ್ನಲಾಗಿದೆ. ಅವರಿಂಲೇ ಈ ಚಹಾಕ್ಕೆ ಕೊಂಬುಚಾ ಎಂಬ ಹೆಸರು ಬಂದಿದೆ. ಕೊಂಬುಚಾವನ್ನು ಜಪಾನ್, ಪೂರ್ವ ಯೂರೋಪ್ ಹಾಗೂ ರಷ್ಯಾಗಳಲ್ಲಿ ಹಲವು ಶತಮಾನಗಳಿಂದ ಸೇವಿಸಲಾಗುತ್ತಿದೆ.

ವಿಶ್ವಯುದ್ಧ 2ರ ಬಳಿಕ ಜರ್ಮನ್ ವೈದ್ಯ ರುಡಾಲ್ಫ್ ಸ್ಕ್ಲೀನರ್ ಪಾಶ್ಚಾತ್ಯ ದೇಶಗಳಿಗೂ ಪರಿಚಯಿಸಿದರು. ವಿದೇಶಗಳಲ್ಲಿದ್ದು ದೇಶಕ್ಕೆ ಮರಳಿದ ಭಾರತೀಯರು ಈ ಚಹಾದ ಆರೋಗ್ಯ ಲಾಭಗಳಿಗೆ ಮಾರುಹೋಗಿ ಸ್ವದೇಶಕ್ಕೂ ಹೊತ್ತು ತಂದರು. ಇತ್ತೀಚಿನ ವರ್ಷಗಳಿಂದ ಗೋವಾ ಹಾಗೂ ಮುಂಬಯಿಗಳಲ್ಲಿ ಕೊಂಬುಚಾ ಟ್ರೆಂಡಿಯಾಗಿದೆ.

ಕ್ರಿಸ್ತಪೂರ್ವ 221 ರಲ್ಲಿ ಚೀನಾದ ಮೊದಲ ಚಕ್ರವರ್ತಿ ಕ್ವಿನ್ ಶಿ ಹಾಂಗ್ ಸಾವಿನ ಭಯದಿಂದ ನರಳುತ್ತಿದ್ದಾಗ ಆಸ್ಥಾನದ ಪಂಡಿತರೆಲ್ಲ ಸೇರಿ ಇರೋ ಬರೋ ಆಯುರ್ವೇದಿಕ್ ವಿದ್ಯೆಯನ್ನೆಲ್ಲ ಜಾಲಾಡಿ, ಒಂದು ದ್ರವ ಶೋಧಿಸಿದರು. ಅದೇ ಹುದುಗು ಬರಿಸಿದ ಚಹಾ ಕೊಂಬುಚಾ. ಅದು ಆತನನ್ನು ಬದುಕಿಸುವಲ್ಲಿ ಸಫಲವಾಯಿತು ಎಂಬ ಮಾತುಗಳೂ ಚಾಲ್ತಿಯಲ್ಲಿವೆ.

ಭಾರತದಲ್ಲಿ ಮುಂಬೈ ಮೂಲದ ಪ್ರಥಮ ಬ್ರ್ಯಾಂಡ್ ಬೊಂಬುಚಾ. ನಿತಿನ್ ಗಾಂಧಿ ಹಾಗೂ ಮೋನಿಕಾ ಪೌಲೋಸ್ಕಾ ದಂಪತಿ ಆರಂಭಿಸಿದ್ದಾರೆ. ಇಂಡೋನೇಶ್ಯಾದಲ್ಲಿದ್ದಾಗ ಪ್ಯಾರಾಸಿಸ್ಟಿಕ್ ಇನ್ಫೆಕ್ಷನ್‌ಗಾಗಿ ಪೌಲೋಸ್ಕಾ ಇದನ್ನು ಸೇವಿಸಿ, ಅದರ ಆರೋಗ್ಯ ಲಾಭಗಳಿಮದ ಪ್ರೇರಣೆಗೊಂಡು ಕೊಂಬುಚಾವನ್ನು ಭಾರತೀಯರಿಗೂ ಪರಿಚಯಿಸುವ ನಿರ್ಧಾರದೊಂದಿಗೆ ಬೊಂಬುಚಾವನ್ನು ಆರಂಭಿಸಿದರು.

ಇದೀಗ ಈ ಕೊಂಬುಚಾ ದೇಶಾದ್ಯಂತ ಕೆಫೆಗಳಲ್ಲಿ, ಸೂಪರ್‌ಮಾರ್ಕೆಟ್‌ಗಳಲ್ಲಿ ಹಾಗೂ ಆನ್‌‌ಲೈನ್‌ನಲ್ಲಿ ಲಭ್ಯ. ಅಟ್ಮಾಸ್ಪಿಯರ್, ಖುಕ್ರೇನ್ಸ್ ಕೊಂಬುಚಾ ಬ್ರ್ಯಾಂಡ್‌ಗಳೂ ಪ್ರಸಿದ್ಧಿ ಪಡೆದಿವೆ.

ಕೊಂಬುಚಾ ಟೀ ರೆಸಿಪಿ ಹೀಗಿದೆ:

ಟೀ ಪೌಡರ್, ಸಕ್ಕರೆ, ನೀರು ಹಾಗೂ ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ಮಿಕ್ಸ್ಚರ್(ಸಿಂಬಾಯೋಟಿಕ್ ಕಲ್ಚರ್ ಆಫ್ ಬ್ಯಾಕ್ಟೀರಿಯಾ ಆ್ಯಂಡ್ ಯೀಸ್ಟ್, ಸ್ಕೋಬಿ) ಸೇರಿಸಿ ಕುದಿಸಿ ವಾರಗಳ ಕಾಲ ಹಾಗೆಯೇ ಇಡಬೇಕು.

ಸ್ಕೋಬಿಯು ಸಕ್ಕರೆ ಜೊತೆ ಬೆರೆತು ಅಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ. ಚಹಾದ ಮೇಲೆ ಅಣಬೆಯಂತೆ ಒಂದು ಪದರ ನಿಲ್ಲುತ್ತದೆ. ಅದು ಅಸಿಟಿಕ್ ಆ್ಯಸಿಡ್ ಆಗಿ ಟೀಗೆ ನೊರೆ ಹಾಗೂ ಹುಳಿ ಫ್ಲೇವರ್ ನೀಡುತ್ತದೆ.

ಹುದುಗು ಬಂದ ಈ ಟೀಯಲ್ಲಿ ಪೋಷಕಾಂಶಗಳು, ಆ್ಯಂಟಿಆಕ್ಸಿಡೆಂಟ್ಸ್, ಪ್ರೋಬಯೋಟಿಕ್ಸ್ ಹಾಗೂ ಎಂಜೈಮ್ಸ್ ಹೇರಳವಾಗಿ ಸೇರಿಕೊಂಡು ಸೇವಿಸಿದವರ ದೇಹದ ಮೇಲೆ ಮ್ಯಾಜಿಕ್ ಮಾಡುತ್ತವೆ.

ಉಪಯೋಗಗಳು:

Image result for kombucha for liver

ಲಿವರನ್ನು ರಕ್ಷಿಸಿ, ಉರಿಯೂತ ಕಡಿಮೆ ಮಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಕೊಂಬುಚಾ ಟೀ.

ಇದರಲ್ಲಿರುವ ಪ್ರೋಬಯೋಟಿಕ್ಸ್ ಉತ್ತಮ ಗಟ್ ಸಪೋರ್ಟ್ ನೀಡುತ್ತವೆ.

ಇದು ಆಲ್ಕೋಹಾಲ್ ಆಗಿ ಪರಿವರ್ತನೆ ಆಗುವುದರಿಂದ ಗರ್ಭಿಣಿಯರು, ಮಗುವಿಗೆ ಹಾಲುಣಿಸುವ ತಾಯಂದಿರು ಹಾಗೂ ಡಯಾಬಿಟೀಸ್ ಇರುವವರು ಈ ಚಹಾ ಸೇವಿಸದಿರುವುದು ಒಳಿತು.

Check Also

ಮಂಡ್ಯ: ಕಟ್ಕೊಂಡವ ಮೋಸ ಮಾಡಿದನೆಂದು ಆತನ ಪ್ರಿಯತಮೆಗೇ ಮಾರಿ ಹಣ ತಗೊಂಡ್ಲು; ಓದಿ ಈ ಕಥೆಯನ್ನು!

ಪರಸ್ತ್ರಿ ಸಂಗಾ ಮಾಡಿ ಮೋಸ ಮಾಡುವ ಗಂಡನನ್ನು ತನ್ನೆಡೆಗೆ ಮತ್ತೆ ಬರುವಂತೆ ಮಾಡಲು ಪತ್ನಿ ಪಡುವ ನಾನಾ ರೀತಿಯ ಕಷ್ಟಗಳನ್ನು …

Leave a Reply

Your email address will not be published. Required fields are marked *