Breaking News
Home / Breaking News / ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ? ಈ ಆರೋಗ್ಯ ಸಮಸ್ಯೆ ಇರುವವರು ತಿಳ್ಕೊಳ್ಳೇಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ!

ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯೋದ್ರಿಂದ ಏನಾಗುತ್ತೆ ಗೊತ್ತಾ? ಈ ಆರೋಗ್ಯ ಸಮಸ್ಯೆ ಇರುವವರು ತಿಳ್ಕೊಳ್ಳೇಬೇಕಾದ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ!

ಹಸಿವಾದಾಗಲೇ ಕೈಗೆ ಸಿಕ್ಕಿದ್ದು ತಿನ್ನೋದೋ, ಕುಡಿಯೋದು ಮಾಡ್ತಿವಿ. ಆದರೆ ಅದರಿಂದ ಮುಂದೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಆಗುತ್ತೋ, ದುಷ್ಪರಿಣಾಮ ಬೀರುತ್ತೋ ಯಾರಿಗೂ ಗೊತ್ತಿರುವುದಿಲ್ಲ. ಅವಸರದಲ್ಲಿ ತಿಂದು ಹೊಟ್ಟೆ ತುಂಬಿದರೆ ಸಾಕಪ್ಪ ಅಂತ ಅಂದುಕೊಳ್ಳುತ್ತೇವೆ. ಒಂದು ವೇಳೆ ನಮಗೆ ಖಾಲಿ ಹೊಟ್ಟೆಯಲ್ಲಿ ಏನು ತಿನ್ನಬೇಕು? ಏನು ತಿನ್ನಬಾರದು ಅಂತ ತಿಳಿದುಕೊಂಡಿದ್ದರೆ ಮುಂಜಾಗೃತೆ ವಹಿಸಬಹುದು. ಈ ನಿಟ್ಟಿನಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿದರೆ ಒಳ್ಳೆಯದೋ ಕೆಟ್ಟದೋ ಎಂಬ ಬಗ್ಗೆ ಸಂಪೂರ್ಣ ಮಾಹಿತಿ `ಅಂತರ್ಮುಖಿ’ ನಿಮಗಾಗಿ ನೀಡುತ್ತಿದೆ. ಓದಿಕೊಳ್ಳಿ.

Image result for milk as breakfast

ನಾವು ‘ಯಾವಾಗ ತಿನ್ನುತ್ತೇವೆ’ ಎಂಬುದು ಎಷ್ಟು ಮುಖ್ಯವೋ ‘ಏನು ತಿನ್ನುತ್ತೇವೆ’ ಎನ್ನುವುದು ಕೂಡ ಅಷ್ಟೇ ಮುಖ್ಯ. ಯಾವ ತರಹದ ಆಹಾರಗಳನ್ನು ಜೊತೆಗೂಡಿಸಿ ತಿನ್ನಬೇಕು? ಮತ್ತು ಯಾವುದನ್ನು ಯಾವ ಸಮಯದಲ್ಲಿ ತಿನ್ನಬೇಕು ಎನ್ನುವುದು ನಮ್ಮ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಮತ್ತು ದೇಹದೊಳಗೆ ಹೋಗುವ ಪೋಷಕಾಂಶಗಳು ಈ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

Image result for milk on empty stomach

ಸಾಮಾನ್ಯವಾಗಿ ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಆರೋಗ್ಯಕ್ಕೆ ಉತ್ತಮ ಎಂದು ನಾವು ಅಂದುಕೊಂಡಿದ್ದೇವೆ.ಆದರೆ ಇದು ಆರೋಗ್ಯಕ್ಕೆ ಒಳ್ಳೆದಲ್ಲ ಎಂದು ತಿಳಿದುಬಂದಿದೆ. ‘ಹಾಲು ಕೂಡ ಒಂದು ತರಹದ ಊಟ, ಇದನ್ನು ರಾತ್ರಿ ಮಲಗುವ ಮೊದಲು ಸೇವಿಸುವುದರಿಂದ ನಾವು ಇನ್ನೊಂದು ಊಟ ಮಾಡಿದ ಹಾಗಿರುತ್ತದೆ ಮತ್ತು ಇದರಿಂದ ಜೀರ್ಣಕ್ರೀಯೆ ನಿಧಾನವಾಗಬಹುದು ಮತ್ತು ಕೆಲವರಲ್ಲಿ ಇದು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಉಂಟು ಮಾಡಬಹುದು.’ ಎಂದು ದೆಹಲಿ ಮೂಲದ ತೂಕ ನಿರ್ವಹಣಾಧಿಕಾರಿ ಅನ್ಶುಲ್ ಜೈಭಾರತ್ ಹೇಳುತ್ತಾರೆ.

Image result for milk on empty stomach

ಹಾಗಾದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುದು ಒಳ್ಳೆಯದೇ? ಬನ್ನಿ ತಿಳಿದುಕೊಳ್ಳೋಣ.

ಹಾಲು ದಿನದ ಮೊದಲ ಆಹಾರ:

ಹಾಲು ಒಂದು ಸಂಪೂರ್ಣ ಊಟ. ಸಾಂಪ್ರದಾಯಿಕವಾಗಿ ನಾವು ಮೊದಲಿನಿಂದಲೂ ನಮ್ಮ ದಿನವನ್ನು ಒಂದು ಲೋಟ ಹಾಲಿನಿಂದ ಪ್ರಾರಂಭ ಮಾಡುತ್ತೇವೆ. ಲ್ಯಾಕ್ಟೋಸ್ (ಹಾಲಿನಲ್ಲಿರುವ ಗ್ಲೂಕೊಸ್ ಮತ್ತು ಗೆಲ್ಯಾಕ್ಟೋಸ್ ಗಳ ಸಂಯೋಗದಿಂದ ಆದ ಒಂದು ದ್ವಶರ್ಕರ) ಸಮಸ್ಯೆ ಇಲ್ಲದೆ ಇರುವವರು ಬೆಳಗ್ಗೆ ಹಾಲು ಕುಡಿಯುವುದರಿಂದ ಅದರಲ್ಲಿರುವ ಅವಶ್ಯಕ ಪೋಷಕಾಂಶಗಳು ದಿನದ ಪ್ರಾರಂಭದಲ್ಲಿಯೇ ದೇಹ ಸೇರುತ್ತದೆ. ‘ನಿಮಗೆ ಲ್ಯಾಕ್ಟೋಸ್ ತೊಂದರೆ ಇಲ್ಲದಿದ್ದರೆ, ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲವಾದರೆ ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.

ಖಾಲಿ ಹೊಟ್ಟೆಯಲ್ಲಿ ಹಾಲು ಸೇವಿಸುವುದು ಅಷ್ಟು ಒಳ್ಳೆಯದಲ್ಲ:

Related image

ನಿಂಬು ನೀರು ಅಥವಾ ಆ್ಯಪಲ್ ವಿನೆಗರ್ ದಿನದ ಪ್ರಾರಂಭದಲ್ಲಿ ಸೇವಿಸುವುದು ಉತ್ತಮ. ಇದರ ನಂತರ ನೀವು ಯಾವುದಾದರೂ ಇತರ ಆಹಾರದ ಜೊತೆಗೆ ಸೇರಿಸಿ ಹಾಲು ಕುಡಿಯುವುದು ಅತ್ಯುತ್ತಮ ಉದಾ: ಓಟ್ಸ್ ಅಥವಾ ಕಾರ್ನ್ ಫ್ಲೇಕ್ಸ್ ಜೊತೆಗೆ. ನಿಮ್ಮ ದಿನದ ಪ್ರಾರಂಭ ಯಾವುದಾದರೂ ಲಘು ಆಹಾರದಿಂದ ಆಗಬೇಕು, ಇದರಿಂದ ಹೊಟ್ಟೆ ಶುದ್ಧಿಯಾಗುತ್ತದೆ.

ಆಯುರ್ವೇದ ಏನು ಹೇಳುತ್ತದೆ?

  • ‘ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯುವುದು ಯಾರ ಆರೋಗ್ಯಕ್ಕೂ ಅಷ್ಟು ಒಳ್ಳೆಯದಲ್ಲ.ನೀವು ಯಾವ ರೀತಿಯ ದೇಹ ಪ್ರಕೃತಿಯನ್ನು ಹೊಂದಿರುತ್ತೀರಿ ಎಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ.
  • ನೀವು ವಾತ ಅಥವಾ ಕಫದ ಸಮಸ್ಯೆ ಇರುವವರಾದರೆ, ಖಾಲಿ ಹೊಟ್ಟೆಯಲ್ಲಿ ಮತ್ತು ಬೆಳಗ್ಗಿನ ಹೊತ್ತು ಹಾಲು ಕುಡಿಯಲೇಬಾರದು.ಇದು ಕೆಮ್ಮು, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ.
  • ನೀವು ಅಸಿಡಿಟಿ ಸಮಸ್ಯೆಯಿಂದ ಬಳಲುವವರಾಗಿದ್ದರೆ, ತಣ್ಣಗಿನ ಹಾಲು ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ. ಯಾಕೆಂದರೆ ಹಾಲಿನಲ್ಲಿರುವ ಕ್ಯಾಲ್ಶಿಯಂ ದೇಹದ ಆಮ್ಲೀಯ ಅಂಶದೊಂದಿಗೆ ಸಂಯೋಗಗೊಂಡಾಗ ಅದು ಉಪ್ಪು ಆಗಿ ಪರಿವರ್ತನೆಗೊಂಡು ಅಸಿಡಿಟಿಯನ್ನು ಹೋಗಲಾಡಿಸುತ್ತದೆ.
  • ವಾತ ಸಮಸ್ಯೆ ಇರುವವರು ಬೆಳಗ್ಗಿನ ಹೊತ್ತು ಬಿಟ್ಟು ಬೇರೆ ಯಾವ ಸಮಯದಲ್ಲಾದರೂ ಹಾಲು ಸೇವಿಸುವುದು ಒಳ್ಳೆಯದು, ಅದೂ ಬೆಲ್ಲ ಸೇರಿಸಿ ಕುಡಿದರೆ ಇನ್ನೂ ಉತ್ತಮ’ ಎನ್ನುತ್ತಾರೆ ಚೈತನ್ಯ ಫೌಂಡೇಷನ್ ನ ಯೋಗಾಚರ್ಯ ಅನೂಪ್.

Image result for milk as breakfast

ಒಟ್ಟಾಗಿ ಹೇಳುವುದಾದರೆ, ಹಾಲು ಕುಡಿಯುವುದು ಅವರವರ ಹೇಹ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಆಹಾರದ ಅಲರ್ಜಿ ಇರುವವರು ಹಾಲು ಸೇವಿಸುವಾಗ ಹೆಚ್ಚು ಎಚ್ಚರದಿಂದಿರಬೇಕು.’ನಿಮ್ಮ ದೇಹ ಏನು ಬಯಸುತ್ತದೋ ಅದನ್ನು ಮಾಡಿ. ಆಗ ಖಾಲಿ ಹೊಟ್ಟೆಯಲ್ಲಿ ನೀವು ಸೇವಿಸುವ ಆಹಾರ ನಿಮಗೆ ಉತ್ತಮ ಶಕ್ತಿಯನ್ನು ನೀಡುತ್ತದೋ, ಭಾರ ಎನಿಸುತ್ತದೋ ಅಥವಾ ನಿಮಗೆ ಸಮಸ್ಯೆಯೆನಿಸುತ್ತದೋ ಎಂದು ನಿಮ್ಮ ಅರಿವಿಗೆ ಬರುತ್ತದೆ.

Check Also

ಅಡಿಲೇಡ್ ಟೆಸ್ಟ್: 307ಕ್ಕೆ ಭಾರತ ಆಲೌಟ್, ಆಸೀಸ್ ಗೆಲುವಿಗೆ 323 ಟಾರ್ಗೆಟ್

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರೆಹಾನೆ ಮತ್ತು ಚೇತೇಶ್ವರ …

Leave a Reply

Your email address will not be published. Required fields are marked *

Powered by keepvid themefull earn money