Breaking News
Home / Breaking News / ಈ ಎರಡು ವಸ್ತುಗಳ ಮಿಶ್ರಣ ನಿಮ್ಮ ಆರೋಗ್ಯದ ಹಲವು ಸಮಸ್ಯೆಗಳ ವಿರುದ್ಧ ಮ್ಯಾಜಿಕ್ ನಂತೆ ಕೆಲ್ಸ ಮಾಡುತ್ತದೆ!

ಈ ಎರಡು ವಸ್ತುಗಳ ಮಿಶ್ರಣ ನಿಮ್ಮ ಆರೋಗ್ಯದ ಹಲವು ಸಮಸ್ಯೆಗಳ ವಿರುದ್ಧ ಮ್ಯಾಜಿಕ್ ನಂತೆ ಕೆಲ್ಸ ಮಾಡುತ್ತದೆ!

ಆರೋಗ್ಯದ ಹಲವು ಸಮಸ್ಯೆಗಳಿಗೆ ನಾವು ಸಾಮಾನ್ಯವಾಗಿ ವೈದ್ಯರ ಮೊರೆ ಹೋಗುತ್ತೇವೆ. ಆದರೆ ಪುರಾತನ ಕಾಲದಿಂದಲೂ ಭಾರತೀಯ ಆಯುರ್ವೇದ ಪದ್ಧತಿಯಲ್ಲಿ ಗಿಡಮೂಲಿಕೆಗಳಿಂದ, ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳಿಂದ ನಮ್ಮ ಆರೋಗ್ಯದ ಹಲವು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಲಾಗಿದೆ.

Related image

ಅದರಲ್ಲಿ ಒಂದು ಜೇನುತುಪ್ಪ ಮತ್ತು ದಾಲ್ಷಿನ್ನಿ ಅಥವಾ ಚಕ್ಕೆಯ ಮಿಶ್ರಣ. ಹೌದು ಈ ಎರಡು ವಸ್ತುಗಳ ಸಂಯೋಜನೆ ನಮ್ಮ ದೇಹದಲ್ಲಿ ಇಮ್ಯುನಿಟಿ ಹೆಚ್ಚಿಸುವುದಲ್ಲದೆ, ಶೀತ, ಕೆಮ್ಮು, ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಹಾಗಾದ್ರೆ ಬನ್ನಿ; ಇದರ ಪ್ರಯೋಜನಗಳೇನು ತಿಳಿದುಕೊಳ್ಳೋಣ;

ಮೊಡವೆ ಕಲೆಗಳು:

Related image

ಮುಖದಲ್ಲಿ ಕಪ್ಪು ಕಲೆಗಳು, ಮೊಡವೆ ಮಚ್ಚೆಗಳಿವೆಯೇ? ಅದರ ನಿವಾರಣೆಗೆ ಹೀಗೆ ಮಾಡಿ; ಒಂದು ಟೀ ಚಮಚ ಚಕ್ಕೆಪುಡಿಯನ್ನು 3 ಟೀಚಮಚ ಜೇನುತುಪ್ಪದಲ್ಲಿ ಮಿಶ್ರ ಮಾಡಿ ಪೇಸ್ಟ್ ನಂತೆ ಮಾಡಿ ಇದನ್ನು ಮುಖದ ಕಲೆಗಳು ಅಥವಾ ಮೊಡವೆಗಳ ಮೇಲೆ ರಾತ್ರಿ ಹಚ್ಚಿ ಮಲಗಿ ಬೆಳಗ್ಗೆ ಮುಖ ತೊಳೆದರೆ ಈ ಕಲೆಗಳು ದಿನಗಳೆದಂತೆ ಮಂಗ ಮಾಯವಾಗುತ್ತದೆ.

ರೋಗ ನಿರೋಧಕವಾಗಿ:

Related image

ಚಕ್ಕೆ ಮತ್ತು ಜೇನುತುಪ್ಪವನ್ನು ಆಗಾಗ ಸೇವಿಸುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುವ ಬ್ಯಾಕ್ಟೀರೀಯಾ ಮತ್ತು ವೈರಸ್ ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಅಷ್ಟು ಮಾತ್ರವಲ್ಲದೆ, 2ನೇ ವಿಧದ ಮಧುಮೇಹ ರೋಗದಿಂದ ಬಳಲುವವರಿಗೆ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ವೃದ್ಧಿಸುತ್ತದೆ.

ಸಂಧಿವಾತ ನೋವು:

Related image

ಚಕ್ಕೆ ಮತ್ತು ಜೇನುತುಪ್ಪದ ಪೇಸ್ಟ್ ತಿನ್ನುವುದರಿಂದ ಇದು ಸಂಧಿವಾತದ ಸಮಸ್ಯೆಗೆ ಆರಾಮ ನೀಡುತ್ತದೆ. ಇದು ತಿನ್ನಲು ಹಿಂಸೆಯಾದರೆ, ಉಗುರು ಬೆಚ್ಚಗಿನ ನೀರಿಗೆ 1ಟೀ ಚಮಚ ಚಕ್ಕೆ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪೇಸ್ಟ್ ನಂತೆ ಮಾಡಿ ಸಂಧಿನೋವಿರುವ ಭಾಗಕ್ಕೆ ಹಚ್ಚಿ. ಅಷ್ಟು ಮಾತ್ರವಲ್ಲದೆ, ನೀರಿನಲ್ಲಿ ಚಕ್ಕೆ ಪುಡಿ ಮತ್ತು ಜೇನುತುಪ್ಪ ಸೇರಿಸಿ ಪಾನೀಯದಂತೆ ಮಾಡಿ ದಿನಾ ಕುಡಿಯುವುದರಿಂದಲೂ ಈ ಸಂಧಿವಾತವನ್ನು ಕಡಿಮೆ ಮಾಡಬಹುದು.

ಕೊಬ್ಬು (ಕೊಲೆಸ್ಟ್ರಾಲ್):

Image result for cholesterol

ಈ ಎರಡು ವಸ್ತುಗಳ ಮಿಶ್ರಣ ದೇಹದ ಕೊಬ್ಬಿನ ಮಟ್ಟವನ್ನು ನಿಯಂತ್ರಿಸುತ್ತದೆ. ನೀವು ಚಹಾ ಕುಡಿಯುವವರಾದರೆ, ಚಹಾದಲ್ಲಿ 3 ಟೀ ಸ್ಪೂನ್ ಚಕ್ಕೆ ಪುಡಿ, 2 ಟೀ ಸ್ಪೂನ್ ಜೇನುತುಪ್ಪ ಸೇರಿಸಿ ನಿಯಮಿತವಾಗಿ ಕುಡಿಯುತ್ತಿರಿ. ಇದು ದೇಹದ ಕೊಬ್ಬಿ ಮಟ್ಟವನ್ನು 10%ನಷ್ಟು ಕಡಿಮೆ ಮಾಡುತ್ತದೆ.

ಬಂಜೆತನ:

Related image

ಇದೊಂದು ಪುರಾತನ ನಂಬಿಕೆ. ಜೇನುತುಪ್ಪ ಪುರುಷರಲ್ಲಿ ವೀರ್ಯವನ್ನು ಬಲಪಡಿಸಲು ಮತ್ತು ಇತರ ದುರ್ಬಲತೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಚಿನಾದಲ್ಲಿ ಮತ್ತು ಪೂರ್ವ ದೇಶಗಳಲ್ಲಿ ಮಹಿಳೆಯರು ತಮ್ಮ ಗರ್ಭಕೋಶದ ಆರೋಗ್ಯವನ್ನು ವೃದ್ಧಿಸಲು ಚಕ್ಕೆಪುಡಿಯನ್ನು ಸೇವಿಸುತ್ತಿದ್ದರಂತೆ. ಅಲ್ಲದೆ, ಕೆಲವು ಸಂಶೋಧನೆಗಳ ಪ್ರಕಾರ ನಿಯಮಿತವಾಗಿ ಚಕ್ಕೆ ಪುಡಿ ಸೇವನೆ ಪಾಲಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (ಪಿಸಿಓಎಸ್) ಸಮಸ್ಯೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ.

ಕೂದಲು ಉದುರುವಿಕೆ:

Related image

ಆಲಿವ್ ಎಣ್ಣೆಯನ್ನು ಸ್ವಲ್ಪ ಬಿಸಿಮಾಡಿ ಅದರಲ್ಲಿ ಜೇನುತುಪ್ಪ ಮತ್ತು ಚಕ್ಕೆ ಪುಡಿಯನ್ನು ಮಿಶ್ರಣ ಮಾಡಿ ಅದನ್ನು ಕೂದಲಿಗೆ ಹಚ್ಚಿ 15 ನಿಮಿಷದ ನಂತರ ಸ್ನಾನ ಮಾಡಿದ್ರೆ ಕೂದುಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಮೂತ್ರಕೋಶದ ಸೋಂಕುಗಳು:

Related image

ಜೇನುತುಪ್ಪ ಮತ್ತು ಚಕ್ಕೆ ಮಿಶ್ರಣ ಮೂತ್ರಕೋಶದಲ್ಲಿರುವ ರೋಗಾಣುಗಳನ್ನು ನಾಶಪಡಿಸುವಲ್ಲಿ ಸಹಾಯ ಮಾಡುತ್ತದೆ. 1 ಟೀ ಚಮಚ ಜೇನುತುಪ್ಪದಲ್ಲಿ, 2 ಟೀ ಚಮಚ ಚಕ್ಕೆ ಅದನ್ನು ಉಗುರು ಬೆಷ್ಷಗಿನ ನೀರಿನಲ್ಲಿ ಆಗಾಗ ಕುಡಿಯುತ್ತದ್ದರೆ ಮೂತ್ರಕೋಶದ ಆರೋಗ್ಯ ಸಮತೋಲನದಲ್ಲಿರುತ್ತದೆ. ಇದನ್ನು ದಿನಕ್ಕೆ 3-4 ಲೀ ದಿನಾ ಸೇವಿಸಿದರೆ ಆದಷ್ಟು ಉತ್ತಮ. ಆದ್ರೆ ಎಚ್ಚರ ಇದರ ಜೊತೆಗೆ ನೀವು ಮೂತ್ರಕೋಶಕ್ಕೆ ತೊಂದರೆಯನ್ನುಂಟು ಮಾಡುವ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೂಸಂಬಿ, ನಿಂಬೆ ಮುಂತಾದ ಜ್ಯೂಸ್ ಗಳು, ಮದ್ಯ, ಕಾಫಿ ಮುಂತಾದವುಗಳನ್ನು ಸೇವಿಸಬಾರದು.

ತೂಕ ಇಳಿಕೆಗೆ:

Related image

ನೀರಿನಲ್ಲಿ ಚಕ್ಕೆ ಪುಡಿಯನ್ನು ಕುದಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ದಿನಕ್ಕೆ ಮೂರು ಬಾರಿಯಂತೆ ಕುಡಿದರೆ, ಇದು ಶೀಘ್ರವಾಗಿ ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ, ಮಧ್ಯಾಹ್ನ ಊಟದ ಅರ್ಧ ಗಂಟೆ ಮುಂಚೆ, ರಾತ್ರಿ ಮಲಗುವ ಮುನ್ನ ಈ ಪಾನೀಯ ಕುಡಿಯಿರಿ.

ಕೆಮ್ಮು – ನೆಗಡಿ:

ಚಕ್ಕೆ ಮತ್ತು ಜೇನುತುಪ್ಪ ಸೈನಸ್, ದೀರ್ಘಕಾಲದಿಂದ ಕಾಡುವ ಕೆಮ್ಮು – ನೆಗಡಿಯಂತಹ ಸಮಸ್ಯೆಗಳನ್ನು ಗುಣಪಡಿಸುವಲ್ಲಿ ಸಹಾಯ ಮಾಡುತ್ತದೆ. ಜೇನುತುಪ್ಪದಲ್ಲಿರುವ ಬ್ಯಾಕ್ಟೀರೀಯಾ, ವೈರಸ್ ವಿರೋಧಿ, ರೋಗ ನಿರೋಧಕ ಶಕ್ತಿಗಳು ಮತ್ತು ಚಕ್ಕೆಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಸ್, ಉರಿಯೂತ ನಿರೋಧಕ ಅಂಶಗಳು ಕೆಮ್ಮು – ನೆಗಡಿಯನ್ನು ಗುಣಪಡಿಸುವಲ್ಲಿ ಬಹುದೊಡ್ಡ ಪರಿಣಾಮ ಬೀರುತ್ತದೆ.

ಚರ್ಮದ ಸೋಂಕುಗಳು:

Image result for skin infection

ಹುಳುಕಡ್ಡಿಗಳ ಸೋಕು ಅಥವಾ ಇನ್ನಿತರ ಚರ್ಮದ ಸೋಂಕುಗಳಿದ್ದರೆ ನೀವು ಈ ಮಿಶ್ರಣವನ್ನು ಹಚ್ಚಿ ಅದನ್ನು ನಿವಾರಿಸಬಹುದು. ಮೊದಲು ಸೋಂಕಿನ ಜಾಗವನ್ನು ಆ್ಯಂಟಿ ಬ್ಯಾಕ್ಟೀರೀಯಾ ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ತೊಳೆಯಬೇಕು. ನಂತರ 2 ಟೀ ಚಮಚ ಚಕ್ಕೆ ಮತ್ತು 3 ಚಮಚ ಜೇನುತುಪ್ಪ ಮಿಶ್ರಣ ಮಾಡಿ ಆ ಪೇಸ್ಟ್ ನ್ನು ಸೋಕಿನ ಜಾಗಕ್ಕೆ ಹಚ್ಚಿ ಕೆಲವು ನಿಮಿಷಗಳ ಬಳಿಕ ನೀರಿನಿಂದ ತೊಳೆಯಿರಿ.

Check Also

Don’t get fooled; ಈ 4 ಆಹಾರಗಳು ತಿಂದ ಮೇಲೆ ನಿಮ್ಮ ಹಸಿವನ್ನು ಮತ್ತಷ್ಟು ಹೆಚ್ಚಿಸುತ್ತದೆ!

ಅತ್ಯಧಿಕ ಗುಣಮಟ್ಟದ ಪೋಷಕಾಂಶಗಳಿಂದ ಶ್ರೀಮಂತವಾಗಿರುವ ಆಹಾರಗಳ ಬಗ್ಗೆ ನಾವು ತಿಳಿದಿರುತ್ತೇವೆ, ಓದುತ್ತಾನೇ ಇರುತ್ತೇವೆ. ಈ ಆಹಾರಗಳು ನಮ್ಮ ಹಸಿವನ್ನು ನಿಂಗಿಸಿ …

Leave a Reply

Your email address will not be published. Required fields are marked *