Breaking News
Home / Breaking News / ತಾಮ್ರದ ಪಾತ್ರೆ ಫಳಫಳ ಹೊಳೆಯಲು ಹೀಗೆ ಮಾಡಿ…

ತಾಮ್ರದ ಪಾತ್ರೆ ಫಳಫಳ ಹೊಳೆಯಲು ಹೀಗೆ ಮಾಡಿ…

ಈ ಸಾಂಪ್ರಾದಾಯಿಕ, ಆರೋಗ್ಯಕರ ಅಂಶಗಳಿಂದ ಕೂಡಿದ ಹೊಳೆಯುವ ತಾಮ್ರದ ಪಾತ್ರೆಗಳನ್ನು ನೋಡಿದಾಗ ಅದನ್ನು ಖರೀದಿಸಬೇಕು ಎಂದೆನಿಸುತ್ತದೆ ಅಲ್ಲವೇ? ಹೌದು ತಾಮ್ರದ ಪಾತ್ರೆಗಳಲ್ಲಿ ಊಟ ಮಾಡುವುದರಿಂದ, ನೀರು ಕುಡಿಯುವುದರಿಂದ ಅಷ್ಟೇ ಅಲ್ಲ, ಅದರಲ್ಲಿ ಅಡುಗೆ ಮಾಡುವುದರಿಂದಲೂ ನೀವು ಬಹಳಷ್ಟು ಆರೋಗ್ಯಕರ ಅಂಶಗಳನ್ನು ಪಡೆಯುತ್ತೀರಿ. ರಾತ್ರಿ ಇಡೀ ತಾಮ್ರದ ಪಾತ್ರೆಯಲ್ಲಿ ನೀರು ತುಂಬಿಸಿ ಬೆಳಗ್ಗೆ ಕುಡಿಯುವುದು ಈಗ ಸಾಮಾನ್ಯ. ಆಯುರ್ವೇದದ ಪ್ರಕಾರ ಹೀಗೆ ತುಂಬಿಸಿಟ್ಟ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಕಫ, ವಾತ, ಪಿತ್ತ ಈ ಮೂರು ದೋಷಗಳಿಗೆ ಉತ್ತಮ ಪರಿಹಾರ.

Image result for how to wash copper vessels

ಇದನ್ನು ಖರೀದಿಸಿದ ಮೇಲೆ ಅದೇ ರೀತಿ ಯಾವಾಗಲೂ ಹೊಳೆಯುವಂತೆ ನೋಡಿಕೊಳ್ಳುವುದು ಬಹು ಮುಖ್ಯ ಕೆಲಸ. ತಾಮ್ರದ ಪಾತ್ರೆಗಳು ಸ್ವಲ್ಪ ದಿನ ಬಳಕೆ ಮಾಡಿದ ನಂತರ ಕಪ್ಪಗಾಗುವ ಸಾಧ್ಯತೆಗಳಿವೆ.ಮನೆಯಲ್ಲಿರುವ ಕೆಲವು ವಸ್ತುಗಳನ್ನು ಉಪಯೋಗಿಸಿ, ಇಂಥ ಕಪ್ಪು ಕಲೆಗಳನ್ನು ಹೋಗಲಾಡಿಸಿ ಅದನ್ನು ಫಳಫಳ ಹೊಳೆಯುವಂತೆ ಮಾಡಲು ಕೆಲವೊಂದು ಟಿಪ್ಸ್ ನಿಮಗಾಗಿ:

ವಿನೆಗರ್:

ನಿಂಬೆಹಣ್ಣು ಇಲ್ಲವೇ? ಚಿಂತೆ ಬೇಡ ಸ್ವಲ್ಪ ವಿನೆಗರ್ ತಗೊಂಡು ಉಪ್ಪಿನ ಜೊತೆ ಸೇರಿಸಿ ಮೇಲೆ ಹೇಳಿದಂತೆ ಮಾಡಿ.

ಕೆಚಪ್ ಉಪಯೋಗಿಸಿ:

Related image

ನಿಮಗೀಗ ಆಶ್ಚರ್ಯವಾಗುತ್ತಿರಬಹುದು. ಆದರೆ ಇದು ನಿಜ. ಕೆಚಪ್ ನಲ್ಲಿರುವ ನೈಸರ್ಗಿಕ ಆ್ಯಸಿಡಿಕ್ ಅಂಶಗಳು ತಾಮ್ರದ ಕಲೆಗಳನ್ನು ಓಡಿಸುವಲ್ಲಿ ಸಹಾಯ ಮಾಡುತ್ತವೆ.ಸ್ವಲ್ಪ ಕೆಚಪ್ ತೆಗೆದುಕೊಂಡು ಅದನ್ನು ಪಾತ್ರೆಯ ಮೇಲೆ ಹಚ್ಚಿ 10 ನಿಮಿಷ ಹಾಗೇ ಬಿಡಿ.ಕೆಚಪ್ ನಲ್ಲಿರುವ ಆ್ಯಸಿಡಿಕ್ ಅಂಶಗಳು ತಮ್ಮ ಕೆಲಸ ಮಾಡುತ್ತಿರುತ್ತವೆ. ನಂತರ ಮೆತ್ತಗಿನ ಸ್ಪಾಂಜ್ ನಲ್ಲಿ ಸ್ಕ್ರಬ್ ಮಾಡಿ, ನೀರಿನಲ್ಲಿ ತೊಳೆಯಿರಿ. ಆಮೇಲೆ ಒಂದು ಬಟ್ಟೆಯಲ್ಲಿ ಸ್ವಲ್ಪ ಆಲಿವ್ ಎಣ್ಣೆ ತೆಗೆದುಕೊಂಡು ಪಾತ್ರೆಯ ಮೇಲೆ ಪಾಲಿಶ್ ಮಾಡಿ. ಎಣ್ಣೆ ಒಣಗಿದ ಮೇಲೆ ಪಾತ್ರೆ ಹೇಗೆ ಹೊಳೆಯುತ್ತದೆ ನೋಡಿ.

ಮನೆಯಲ್ಲಿಯೇ ತಾಮ್ರದ ಪಾಲಿಶ್ ತಯಾರಿಸಿ:

Related image

ಮೈದಾ ಹಿಟ್ಟು, ಉಪ್ಪು, ಯಾವುದಾದರೂ ಡಿಟರ್ಜೆಂಟ್ ಈ ಮೂರನ್ನೂ ಸಮಪ್ರಮಾಣದಲ್ಲಿ ತೆಗೆದುಕೊಂಡು, ಅದಕ್ಕೆ ವಿನೆಗರ್, ನಿಂಬೆರಸ ಮತ್ತು ಸ್ವಲ್ಪ ನೀರು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಒಂದು ಗಾಜಿನ ಬಾಟಲ್ ನಲ್ಲಿ ಹಾಕಿ ಸಂಗ್ರಹಿಸಿಟ್ಟು ಬೇಕಾದಾಗ ಉಪಯೋಗಿಸಬಹುದು. ಇದರಲ್ಲಿ ಪಾತ್ರೆಯನ್ನು ಸ್ಕ್ರಬ್ ಮಾಡಿ ನಂತರ ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿದರೆ ತಾಮ್ರವು ಮೊದಲಿನಂತೆ ಕಾಣಿಸುತ್ತದೆ.

ಬೇಕಿಂಗ್ ಸೋಡಾ:

ತಾಮ್ರದ ಪಾತ್ರೆಯನ್ನು ತೊಳೆಯಲು ಬೇಕಿಂಗ್ ಸೋಡಾ ಉಪಯೋಗಿಸುವುದು ಒಂದು ಉತ್ತಮ ವಿಧಾನ. ನೀವು ಬೇಕಿಂಗ್ ಸೋಡವನ್ನು ನಿಂಬೆ ರಸದೊಂದಿಗೆ ಮಿಕ್ಸ್ ಮಾಡಬಹುದು, ಅಥವಾ ಹಾಗೆಯೇ ಉಪಯೋಗಿಸಲೂಬಹುದು.

ವಿನಿಗರ್ ಮತ್ತು ಮೈದಾ ಹಿಟ್ಟು:

Image result for how to wash copper vessels vinegar maida

ಒಂದು ಟೇಬಲ್ ಸ್ಪೂನ್ ಉಪ್ಪು, ಒಂದು ಕಪ್ ಬಿಳಿ ವಿನಿಗರ್ ಗೆ ಸ್ವಲ್ಪ ಮೈದಾ ಹಿಟ್ಟನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಇದನ್ನು ತಾಮ್ರದ ಪಾತ್ರೆಯ ಕಲೆಯಾಗಿರುವ ಭಾಗಕ್ಕೆ ಹಚ್ಚಿ 15 ನಿಮಿಷ ಹಾಗೇ ಬಿಡಿ. ನಂತರ ಬಿಸಿ ನೀರಿನಿಂದ ತೊಳೆದರೆ ಪಾತ್ರೆಯು ಹೊಸದರಂತೆ ಕಾಣಿಸುತ್ತದೆ.

Check Also

ಹುಲಿ ಹಿಡಿಯಲು 45 ನಿಮಿಷ ಕಾರ್ಯಾಚರಣೆ ಮಾಡಿದ ಸಶಸ್ತ್ರ ಪೊಲೀಸರಿಗೆ ಅಲ್ಲಿ ಸಿಕ್ಕಿದ್ದೇನು? ನಕ್ಕು ನಕ್ಕು ಸುಸ್ತಾಗುವಿರಿ!

ಒಬ್ಬ ವ್ಯಕ್ತಿ ಭಯಭೀತನಾಗಿ ಪೊಲೀಸ್ ಠಾಣೆಗೆ ಕರೆ ಮಾಡುತ್ತಾನೆ. ‘ನನ್ನ ತೋಟದಲ್ಲಿ ದೊಡ್ಡ ಹುಲಿಯೊಂದು ಬಂದಿದೆ. ಕೂಡಲೇ ಬನ್ನಿ’ ಎಂದು …

Leave a Reply

Your email address will not be published. Required fields are marked *