Breaking News
Home / Breaking News / ಇಡ್ಲಿಯಲ್ಲೂ ಇವೆ ಹಲವು ವೆರೈಟಿಗಳು; ಇಲ್ಲಿದೆ ನೋಡಿ 5 ಬಗೆಯ ಇಡ್ಲಿ ರೆಸಿಪಿಗಳು!

ಇಡ್ಲಿಯಲ್ಲೂ ಇವೆ ಹಲವು ವೆರೈಟಿಗಳು; ಇಲ್ಲಿದೆ ನೋಡಿ 5 ಬಗೆಯ ಇಡ್ಲಿ ರೆಸಿಪಿಗಳು!

ದಕ್ಷಿಣ ಭಾರತದಲ್ಲಿ ಇಡ್ಲಿ ಪ್ರಮುಖ ಉಪಹಾರ. ಹಬೆಯಲ್ಲಿ ಬೇಯಿಸಿದ ಬಿಸಿಬಿಸಿ ಇಡ್ಲಿಗಳು ಹೆಚ್ಚು ಎಣ್ಣೆ ಉಪಯೋಗಿಸದೆ ತಯಾರಿಸುವುದರಿಂದ ಆರೋಗ್ಯಕ್ಕೂ ಉತ್ತಮ, ಹೊಟ್ಟೆಯೂ ತುಂಬುತ್ತದೆ. ಕ್ಯಾಲೋ, ಕೊಬ್ಬು, ಕೊಲೆಸ್ಟ್ರಾಲ್ ಅತೀ ಕಡಿಮೆ ಇರುವ ತಿಂಡಿ ಎಲ್ಲರಿಗೂ ಅತೀ ಪ್ರೀಯ.

ಆದರೆ ಕೇವಲ ಅಕ್ಕಿ ಮತ್ತು ಉದ್ದಿನಿಂದ ಮಾಡಿದ ಿಡ್ಲಿಯನ್ನು ತಿಂದು ಬೇಜಾರಾಗಿದ್ದರೆ ಇಲ್ಲಿದೆ ನೋಡಿ ವೆರೈಟಿ ವೆರೈಟಿ ಇಡ್ಲಿ ಮಾಡುವ ವಿಧಾನಗಳು!

ವೆಜಿಟೇಬಲ್ ಇಡ್ಲಿ:

ಈ ಇಡ್ಡಲಿ ಮಕ್ಕಳಿಗೂ ಇಷ್ಟವಾಗುತ್ತದಲ್ಲದೆ, ಸ್ವಲ್ಪ ತರಕಾರಿಯೂ ದೇಹ ಸೇರುತ್ತದೆ. ಇಡ್ಲಿ ಹಿಟ್ಟಿಗೆ ಸ್ವಲ್ಪ ಕ್ಯಾರೆಟ್, ಬಟಾಟೆ, ಬೀನ್ಸ್ ತುರಿದು ಸ್ವಲ್ಪ ಬಟಾಕಿ ಹಿಚುಕಿ ಸೇರಿಸಿ ಬೇಯಿಸಿದರೆ ವೆಜಿಟೇಬಲ್ ಇಡ್ಲಿ ರೆಡಿ.

ಸ್ಟಫ್ಡ್ ಇಡ್ಲಿ:

ಈ ಇಡ್ಲಿ ಬೆಳಗ್ಗಿನ ಉಪಹಾರಕ್ಕೆ ಹೇಳಿ ಮಾಡಿಸಿದ್ದು ಮತ್ತು ಅತ್ಯಂತ ಆರೋಗ್ಯಕರವಾಗಿರುತ್ತದೆ. ವಿವಿಧ ತರಕಾರಿಗಳು, ಮೊಳಕೆ ಕಾಳುಗಳು, ತುರಿದ ಶುಂಠಿ, ಪುದೀನಾ ಎಲೆ ಮುಂತಾದವುಗಳನ್ನು ಹೂರಣದಂತೆ ಇಡ್ಲಿ ಹಿಟ್ಟಿನ ನಡುವೆ ಸೇರಿಸಿ ತಯಾರಿಸಿದರೆ ಸ್ಟಫ್ಡ್ ಇಡ್ಲಿ ರೆಡಿಯಾಗುತ್ತದೆ.

ರವೆ ಇಡ್ಲಿ:

ಅಕ್ಕಿ ತಿಂಡಿಯನ್ನು ತಿನ್ನಲು ಬಯಸದವರು ಅಕ್ಕಿ ಬದಲು ರವೆ ಸೇರಿಸಿ ಇಡ್ಲಿ ತಯಾರಿಸಬಹುದು. ಇದು ಅತೀ ಬೇಗನೆ ಬೇಯುತ್ತದೆ, ಮೈಕ್ರೋಓವನ್ ನಲ್ಲಿಯೂ ಬೇಯಿಸಬಹುದು.

ಓಟ್ಸ್ ಇಡ್ಲಿ:

ಅಕ್ಕಿ ಮತ್ತು ಉದ್ದು ಹಾಕಿದ ಇಡ್ಲಿ ತಿಂದರೆ ದೇಹ ತೂಕ ಹೆಚ್ಚುತ್ತದೆ ಎನ್ನುವವರು ಓಟ್ಸ್ ಇಡಲ್ಲಿ ಮಾಡಿ ತಿನ್ನಬಹುದು. ಓಟ್ಸ್‌ಗೆ ಶ್ಯಾವಿಗೆ, ಕ್ಯಾರೆಟ್‌ ತುರಿ, ಬಟಾಣಿ, ಮೊಸರು ಹಾಕಿ ತಯಾರಿಸಿದರೆ ರುಚಿಯಾಗಿಯೂ ಇರುತ್ತದೆ, ಆರೋಗ್ಯಕರವೂ ಹೌದು.

ಸೌತೆಕಾಯಿ ಇಡ್ಲಿ:

ತೆಂಗಿನಕಾಯಿ ತುರಿ, ಸೌತೆಕಾಯಿ ತುರಿ ಮತ್ತು ಬೆಲ್ಲ ಹಾಕಿ ಮಾಡುವ ಇಡ್ಲಿ ಸಿಹಿ ಪ್ರಿಯರಿಗೆ ಇಷ್ಟವಾಗಬಹುದು. ಇದು ಅತ್ಯಂತ ಮೃದುವಾಗಿಯೂ ಇರುತ್ತದೆ.

Check Also

Don’t get fooled; ಈ 4 ಆಹಾರಗಳು ತಿಂದ ಮೇಲೆ ನಿಮ್ಮ ಹಸಿವನ್ನು ಮತ್ತಷ್ಟು ಹೆಚ್ಚಿಸುತ್ತದೆ!

ಅತ್ಯಧಿಕ ಗುಣಮಟ್ಟದ ಪೋಷಕಾಂಶಗಳಿಂದ ಶ್ರೀಮಂತವಾಗಿರುವ ಆಹಾರಗಳ ಬಗ್ಗೆ ನಾವು ತಿಳಿದಿರುತ್ತೇವೆ, ಓದುತ್ತಾನೇ ಇರುತ್ತೇವೆ. ಈ ಆಹಾರಗಳು ನಮ್ಮ ಹಸಿವನ್ನು ನಿಂಗಿಸಿ …

Leave a Reply

Your email address will not be published. Required fields are marked *