Breaking News
Home / ಅಡುಗೆ – ಆಹಾರ

ಅಡುಗೆ – ಆಹಾರ

ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯ ಈ ಬಿಹಾರದ ‘ಸಟ್ಟು ಶರ್ಬತ್’; ಸುಲಭವಾಗಿ, ಥಟ್ ಅಂತ ಮಾಡಬಹುದು!

ಅಬ್ಬಾ! ಅದೆಂಥಹ ಉರಿಬಿಸಿಲು, ಮನೆ ಒಳಗೆ ಬಂದ್ರೆ ಫ್ಯಾನ್ ಗಾಳಿ ಕೂಡ ಬಿಸಿ ಅನ್ಸುತ್ತೆ ಅಲ್ವೇ? ತಂಪು ತಂಪು ಏನಾದರೂ ಕುಡೀಬೇಕು ಅನ್ನಿಸ್ತಿದೆಯೇ? ಅದೇ ಶರಬತ್, ಜ್ಯೂಸ್ ಬಿಟ್ಟು ಈ ಹೊಸ ಪೇಯ ‘ಸಟ್ಟು ಶರಬತ್ ‘ ಒಮ್ಮೆ ಟ್ರೈ ಮಾಡಿ ನೋಡಿ! ಬೇಕಾಗುವ ಸಾಮಾಗ್ರಿಗಳು: ಕಡಲೆ ಹಿಟ್ಟು –   3/4 ಕಪ್ ತಣ್ಣಗಿನ ನೀರು  – 4 ಕಪ್ ನಿಂಬೆರಸ  – 2 ಟೀ ಸ್ಪೂನ್ ಹುರಿದ …

Read More »

ಶೀತ, ಕೆಮ್ಮು ಶಮನಕ್ಕೆ ಪರಿಣಾಮಕಾರಿ ಕಷಾಯ; ಇಲ್ಲಿದೆ ನೋಡಿ ರೆಸಿಪಿ!

ಶೀತ , ಕೆಮ್ಮು ಸಾಮಾನ್ಯವಾದ ಖಾಯಿಲೆಯಾದರೂ ಇದರಿಂದ ಉಂಟಾಗುವ ಕಿರಿಕಿರಿ ಅಷ್ಟಿಷ್ಟಲ್ಲ. ಇದು ನಮ್ಮ ಮೂಡ್, ದಿನವನ್ನೇ ಹಾಳು ಮಾಡಿಬಿಡುತ್ತದೆ, ಅಲ್ಲದೆ, ಬೇರೆಯವರ ಎದುರಲ್ಲಿ ಮುಜುಗರವನ್ನು ಕೂಡ ಉಂಟುಮಾಡುತ್ತದೆ. ಈ  ರೀತಿ ಕಾಡುವ ಶೀತ ಕೆಮ್ಮಿನಿಂದ ಮುಕ್ತಿ ಪಡೆಯಲು ಇಲ್ಲಿದೆ ನೋಡಿ ಪರಿಣಾಮಕಾರಿ ಕಷಾಯ; ರೆಸಿಪಿ ನಿಮಗಾಗಿ. ಬೇಕಾಗುವ ಸಾಮಾಗ್ರಿಗಳು: 1 ಚಮಚ ಕೊತ್ತಂಬರಿ ಬೀಜ 1/2 ಚಮಚ ಜೀರಿಗೆ 1/2 ಚಮಚ ಅರಿಶಿಣ ಪುಡಿ 1 ಚಮಚ ಬೆಲ್ಲ …

Read More »

ಓಟ್ಸ್’ನಿಂದಲೂ ವಿವಿಧ ಬಗೆಯ ಬ್ರೇಕ್’ಫಾಸ್ಟ್ ತಯಾರಿಸಬಹುದು ಗೊತ್ತೇ? ಇಲ್ಲಿದೆ ನಿಮಗಾಗಿ ಕೆಲವು ರೆಸಿಪಿಗಳು!

ಓಟ್ಸ್ ಆರೋಗ್ಯಕ್ಕೆ ಅತ್ಯಂತ ಒಳ್ಳೆಯ ಆಹಾರ ಎಂದು ಎಲ್ಲರಿಗೂ ಗೊತ್ತು. ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶ, ಮೆಗ್ನಿಶಿಯಂ, ಪಾಸ್ಫರಸ್, ತಾಮ್ರ, ಕಬ್ಬಿಣ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇಷ್ಟೆಲ್ಲಾ ಪೋಷಕಾಂಶಗಳನ್ನು ಹೊಂದಿರುವ ಈ ಅದ್ಭುತ ಧಾನ್ಯವನ್ನು ಪ್ರತಿದಿನ ತಿನ್ನಬೇಕೆಂದುಕೊಂಡರೂ ಒಂದೇ ರೀತಿ ತಯಾರಿಸಿ ತಿನ್ನಲು ಬೇಸರವಾಗುತ್ತದೆ. ಅದರಲ್ಲೂ ಬೆಳಗಿನ ತಿಂಡಿಯಾಗಿ ಓಟ್ಸ್ ಸೇವಿಸಿದರೆ ಅದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರಿನಂಶದಿಂದ ನಮ್ಮ ಹೊಟ್ಟೆ ತುಂಬಾ ಸಮಯದವರೆಗೆ ತುಂಬಿದಂತೆ ಇರುವುದರಿಂದ ಹಸಿವು …

Read More »

ರುಚಿಯಾದ ಪನ್ನೀರ್ ಖೀರು ಮಾಡುವುದು ಹೇಗೆ ಗೊತ್ತೇ?

ಪನ್ನೀರ್ ನಿಂದ ವಿವಿಧ ಪಾಕಗಳನ್ನು ತಯಾರಿಸುವುದು ನಮಗೆ ಗೊತ್ತೇ ಇದೆ. ಸಾಮಾಣ್ಯವಾಗಿ ಉತ್ತರ ಭಾರತದ ಕಡೆ ಪನ್ನೀರ್ ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂಬ ಮಾತೊಂದಿದೆ. ಇದೇ ಪನ್ನೀರ್ ನಿಂದ ಖೀರು ಅಥವಾ ಪಾಯಸ ತಯಾರಿಸುವುದರ ಬಗ್ಗೆ ನಿಮಗೆ ಗೊತ್ತೇ? ಬನ್ನಿ ಇಲ್ಲಿದೆ ನಿಮಗಾಗಿ ಇದರ ರೆಸಿಪಿ; ಪೋಷಕಾಂಶಗಳ ವಿವರ: ಸರ್ವಿಂಗ್ ಸೈಜ್ – 1/2 ಕಪ್ ಕ್ಯಾಲೋರಿ – 281.5 ಕ್ಯಾಲ್ ಫ್ಯಾಟ್ – 6.8 …

Read More »

ಮೊಸರಿಗೆ ಸಕ್ಕರೆ ಹಾಕಿ ಯಾಕೆ ತಿನ್ನುತ್ತಾರೆ ಗೊತ್ತೇ? ಆಯುರ್ವೇದದಲ್ಲಿದೆ ಇದರ ಹಿಂದಿನ ಲಾಜಿಕ್!

ಭಾರತದಲ್ಲಿ ಹಲವಾರು ನಂಬಿಕೆಗಳಿವೆ, ಕೆಲವೊಂದು ಇಂತಹ ನಂಬಿಕೆಗಳ ಮೂಲ ಹುಡುಕುತ್ತಾ ಹೊರಟರೆ ಅದರಲ್ಲಿ ನಿಜವಾಗಲೂ ಒಂದು ಲಾಜಿಕ್ ಇರುತ್ತದೆ. ಅದರಲ್ಲಿ ಒಂದು ಮೊಸರಿಗೆ ಸಕ್ಕರೆ ಹಾಕಿ ತಿನ್ನುವುದು. ಇದು ಭಾರತೀಯರಿಗೆ ತುಂಬಾ ಇಷ್ಟವಾಗಿರುವ ಸಿಹಿ. ಅಲ್ಲದೆ, ಸಾಮಾಣ್ಯವಾಗಿ ಮಕ್ಕಳು ಪರೀಕ್ಷೆ ಬರೆಯಲು ಹೋಗುವ ಮೊದಲು ಇದನ್ನು ಮಕ್ಕಳಿಗೆ ತಿನ್ನಿಸುವ ಸಂಪ್ರದಾಯವೂ ಹೆಚ್ಚಿನ ಕಡೆಗಳಲ್ಲಿದೆ. ರಾತ್ರಿ ಹೊತ್ತು ಮೊಸರು ತಿಂದರೆ ಏನಾಗುತ್ತದೆ? ಮೊಸರಿಗೆ ಸಕ್ಕರೆ ಹಾಕಿ ಮಕ್ಕಳಿಗೆ ಕೊಟ್ಟರೆ ಅವರಿಗೆ ಪರೀಕ್ಷೆ …

Read More »

ಮಕ್ಕಳಿಗೆ ಬಲು ಇಷ್ಟವಾಗುತ್ತೆ ಈ ‘ಎಗ್ ಮಫಿನ್ಸ್’; ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ!

ಮನೆಯಲ್ಲಿ ದೊಡ್ಡವರಿಗೆ ಏನಾದರೂ ಮಾಡಿ ಕೊಡುವುದಕ್ಕಿಂತ ಹೆಚ್ಚಿನ ಚಿಂತೆ ಮಕ್ಕಳದ್ದು. ಏನೇ ಕೊಟ್ಟರೂ ಅವರಿಗೆ ಇಷ್ಟವಾಗುವುದಿಲ್ಲ. ಹೊಸ ಹೊಸ ರೆಸಿಪಿ ಗಳನ್ನು ಅವರಿಗಾಗಿ ಹುಡುಕುತ್ತಾ ಇರಬೇಕು. ಮೊಟ್ಟೆ ಖಾದ್ಯಗಳನ್ನು ಸಾಮಾನ್ಯವಾಗಿ ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಬೇಯಿಸಿದ ಮೊಟ್ಟೆ, ಆಮ್ಲೆಟ್ ತಿಂದು ಮಕ್ಕಳು ಬೇಸರಗೊಂಡಿದ್ದರೆ ಅವರಿಗೆ ರುಚಿಯಾದ ‘ಎಗ್ ಮಫಿನ್ಸ್’ ಮಾಡಿ ಕೊಡಿ. ‘ಎಗ್ ಮಫಿನ್ಸ್’ ತಿನ್ನಲು ರುಚಿ ಮಾತ್ರವಲ್ಲ, ಒಳ್ಳೆಯ ಪೋಷಕಾಂಶಗಳೂ ಇದರಲ್ಲಿ ನಾವು ಸಿಗುತ್ತವೆ. ಇದನ್ನು ಹೇಗೆ ಮಾಡುವುದು ತಿಳಿದುಕೊಳ್ಳೋಣ …

Read More »

ಬಂಗಾಳದ ಪ್ರಖ್ಯಾತ ಖಾದ್ಯ ‘ಮಿಷ್ತಿ ಡೊಯೈ’ ಮಾಡುವುದು ಹೇಗೆ ಗೊತ್ತಾ?

ಸಿಹಿತಿನಿಸುಗಳಿಗೆ ಅತೀ ಹೆಚ್ಚು ಪ್ರಸಿದ್ಧಿಯಾಗಿದೆ ಪಶ್ಚಿಮ ಬಂಗಾಳ. ಬೆಂಗಾಲಿ ಸ್ವೀಟ್ಸ್ ಅಂತಾನೇ ಜನ ಕೇಳಿ ತಿನ್ನುವಷ್ಟು ತರಹೇವಾರಿ ವಿವಿಧ ಸಿಹಿತಿನಿಸುಗಳನ್ನು ಬಂಗಾಳದಲ್ಲಿ ತಯಾರಿಸುತ್ತಾರೆ. ‘ಮಿಷ್ತಿ ಡೊಯೈ’ ಮಕ್ಕಳಿಂದ ವಯಸ್ಸಾದವರವರೆಗೂ ಇಷ್ಟಪಟ್ಟು ಚಪ್ಪರಿಸಿ ತಿನ್ನುವ ತಿನಿಸು. ಇದು ಸ್ವಲ್ಪ ಹುಳಿ, ಸ್ವಲ್ಪ ಸಿಹಿ ರುಚಿಯನ್ನು ಹೊಂದಿರುತ್ತದೆ. ಅಲ್ಲದೆ ಇದು ಆರೋಗ್ಯಕ್ಕೂ ಅತ್ಯುತ್ತಮವಾಗಿದ್ದು, ಯಾರು ಬೇಕಾದರೂ ತಿನ್ನಬಹುದು. ಬನ್ನಿ ಇದನ್ನು ಹೇಗೆ ಮಾಡುವುದು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು:   ಕೆನೆಭರಿತ ಹಾಲು   …

Read More »

ಬಾರ್ಲಿ ನೀರಿನಲ್ಲಿದೆ ಬರೋಬ್ಬರಿ ಆರೋಗ್ಯ; ಈ ಕೆಲವು ಸಮಸ್ಯೆಗಳಿಗೆ ಇದು ರಾಮಬಾಣ!

ನೋಡಲು ಗೋಧಿಯಂತೆಯೇ ಇರುವ ಬಾರ್ಲಿ ಅತ್ಯಂತ ಆರೋಗ್ಯಕರ ಅಂಶಗಳನ್ನು ಒಳಗೊಂಡಿದೆ. ಬಾರ್ಲಿಯನ್ನು ಕೊಳೆಸಿದ ಬಳಿಕ ಬಿಯರ್ ತಯಾರಿಸಲು ಉಪಯೋಗಿಸುತ್ತಾರೆ ಎಂದಷ್ಟೇ ಹೆಚ್ಚಿನ ಜನರು ಅಂದುಕೊಡಿದ್ದಾರೆ. ಬಾರ್ಲಿಯನ್ನು ಕುದಿಸಿ ಸೋಸಿ ತಣಿಸಿದ ನೀರು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸಲು ಬಳಕೆಯಾಗುತ್ತದೆ. ಈ ಬಗ್ಗೆ ಕೆಲವು ಮಹತ್ವದ ಮಾಹಿತಿಗಳನ್ನು ನಿಮಗಾಗಿ ಇಲ್ಲಿ ನೀಡುತ್ತಿವೆ.   ಬಾರ್ಲಿ ನೀರು ತಯಾರಿಸುವುದು ಹೇಗೆ? ಬಾರ್ಲಿ ನೀರನ್ನು ಒಂದು ಸಲಕ್ಕೆ ಮಾಡಿಯೂ ಕುಡಿಯಬಹುದು ಅಥವಾ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ತಯಾರಿಸಿ ಫ್ರಿಜ್ಜಿನಲ್ಲಿ …

Read More »

ಮೊಸರು ಹುಳಿಯಾಗದಂತೆ ತಡೆಯಲು ಮತ್ತು ಅದರ ತಾಜಾತನ ಕಾಪಾಡಲು ಹೀಗೆ ಮಾಡಿ!

ಬೇಸಿಗೆಕಾಲ ಬಂತೆಂದರೆ ದಿನಾ ಮೊಸರು ತಿನ್ನಬೇಕೆನಿಸುತ್ತದೆ. ಆರೋಗ್ಯಕ್ಕೂ ಉತ್ತಮವಾದ ಮೊಸರನ್ನು ಪ್ರತಿನ ಬಳಸಿದರೂ ಅದು ರುಚಿಯಾಗಿದರೆ ಹುಳಿ ಹುಳಿಯಾಗುತ್ತದೆ ಎಂಬುದು ಹಲವರ ಸಮಸ್ಯೆ. ಹಾಗಾದರೆ ಮೊಸರು ಹುಳಿ ಬರದಂತೆ ತಡೆಯುವುದು ಮತ್ತು ಅದರ ತಾಜಾತನ ಕಾಪಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ; ಮನೆಯಲ್ಲಿರುವ ಮೊಸರನ್ನು ಒಂದು ತೆಳ್ಳನೆಯ ಕಾಟನ್ ಬಟ್ಟೆಗೆ ಸುರಿದು ಗಂಟಿನಂತೆ ಕಟ್ಟಿ ಅದರ ನೀರನ್ನು ನಿಧಾನವಾಗಿ ಹಿಂಡಿ. ಬಳಿಕ ಗಂಟು ಬಿಚ್ಚಿ ಗಟ್ಟಿ ಮೊಸರನ್ನು ಒಂದು ಬೌಲ್‌ಗೆ …

Read More »

ಕಣ್ಣೀರು ಬಾರದಂತೆ ಈರುಳ್ಳಿ ಕತ್ತರಿಸಬೇಕೆ? ಇಲ್ಲಿದೆ ನೋಡಿ ಟಿಪ್ಸ್!

ಈರುಳ್ಳಿ ಹಾಕಿದಷ್ಟು ಅಡುಗೆಯ ರುಚಿ, ಘಮ ಅಧಿಕವಾಗಿರುತ್ತದೆ. ಆದ್ರೆ ಹೆಚ್ಚು ಹೆಚ್ಚು ಈರುಳ್ಳಿ ಕತ್ತರಿಸುವುದು ಹೇಗೆಂಬ ಚಿಂತೆ ಅಲ್ವೇ? ಕಣ್ಣಿಗೆಲ್ಲಾ ಖಾರ ಹಬ್ಬಿ ಉರಿ ಉರಿ, ನೀರಿನ ಧಾರೆ. ಅದಕ್ಕೆ ಕಾರಣ ಈರುಳ್ಳಿ ಕತ್ತರಿಸುವಾಗ ಅದರಿಂದ ಬಿಡುಗಡೆಯಾಗುವ ಪ್ರೊಪನೆಥಿಯೊಲ್‌ ಎಸ್‌ಆಕ್ಸೈಡ್‌ ಎಂಬ ಅನಿಲ ರೂಪದ ಆಮ್ಲ. ಆದ್ರೆ ಕಣ್ಣೀರು ಬರದಂತೆ ಈರುಳ್ಳಿ ಕತ್ತರಿಸಲು ಕೆಲವೊಂದು ಉಪಾಯಗಳನ್ನು ನಾವು ನಿಮಗೆ ಹೇಳಿಕೊಡುತ್ತೇವೆ. ಈರುಳ್ಳಿಯನ್ನು ಹದಿನೈದು ನಿಮಿಷಗಳ ಕಾಲ ಫ್ರೀಜ್‌ ಮಾಡಿ ಆಮೇಲೆ ಕತ್ತರಿಸಿ. …

Read More »

Powered by keepvid themefull earn money