Breaking News
Home / ಆರೋಗ್ಯ – ಸೌಂದರ್ಯ

ಆರೋಗ್ಯ – ಸೌಂದರ್ಯ

‘ನುಗ್ಗೆ ಟೀ’ ಕೇಳಿದ್ದೀರಾ? ಶುಗರ್, ಬಿಪಿಗೆ ರಾಮಬಾಣವಿದು; ರೆಸಿಪಿ ಇಲ್ಲಿದೆ ನೋಡಿ!

ಭಾರತೀಯರ ಆಹಾರ ಪದ್ಧತಿಯಲ್ಲಿ ನುಗ್ಗೆಸೊಪ್ಪು, ನುಗ್ಗೆ ಹೂ, ನುಗ್ಗೆ ಕಾಯಿ ಅಗ್ರಸ್ಥಾನವನ್ನೇ ಪಡೆದಿದೆ. ಆದರೆ ಇಂದು ಇದೊಂದು ಮಿಕಾಕಲ್ ಹರ್ಬ್, ಸೂಪರ್ ಫುಡ್ ಎಂದು ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ. ನುಗ್ಗೆ ಇಂದು ಟೀ ಮತ್ತು ಕಾಫಿ ಪುಡಿಗಳ ರೂಪದಲ್ಲಿ ವಿದೇಶಗಳಲ್ಲಿ ಹೆಲ್ದಿ ಟ್ರೆಂಡ್ ಆಗಿದೆ. ಅದೇ ರೀತಿ ನಾನಾ ತಿನಿಸುಗಳಲ್ಲೂ ಸೇರಿಕೊಂಡಿದೆ. ನುಗ್ಗೆ ಸೊಪ್ಪು ಅಥವಾ ನುಗ್ಗೆಕಾಯಿಯಿಂದ ತಯಾರಿಸುವ ‘ಮೊರಿಂಗಾ ಟೀ’ ಅತ್ಯದ್ಭುತ ಆರೋಗ್ಯ ಲಾಭಗಳನ್ನು ನೀಡುತ್ತದೆ. ಈ ವಿಶೇಷ …

Read More »

ನಿಮಗೆ ಗೊತ್ತಿಲ್ಲದೇ ನಿಮ್ಮ ಹಲ್ಲುಗಳಿಗೆ ಹೇಗೆಲ್ಲಾ ಹಾನಿ ಮಾಡುತ್ತಿದ್ದೀರಿ ಗೊತ್ತಿದೆಯೇ?

ಹಲ್ಲುಗಳು ಹೇಗೆ ಹಾಳಾಗುತ್ತವೆ ಎಂದು ಕೇಳಿದರೆ ಸಾಮಾನ್ಯವಾಗಿ ಬರುವ ಉತ್ತರಗಳು ;  ಸಿಗರೇಟು ಸೇವನೆಯಿಂದ, ಹಲ್ಲುಗಳನ್ನು ಸ್ವಚ್ಛವಾಗಿಡದ ಕಾರಣ ಎಂಬಿತ್ಯಾದಿ. ಆದರೆ ಇನ್ನೂ ಹಲವು ಕಾರಣಗಳಿಂದ ನಿಮ್ಮ ಹಲ್ಲು ಮತ್ತು ಒಸಡುಗಳಿಗೆ ನಿಮಗೆ ಅರಿವಿಗೆ ಬಾರದೇ ನೀವೇ ಹಾನಿಮಾಡುತ್ತೀರಿ. ಸರಿಯಾಗಿ ಹಲ್ಲುಜ್ಜದೆ ಇರುವುದು, ಬಾಯಿ ಸ್ವಚ್ಛವಾಗಿಡದೇ ಇದ್ದರೆ ನಮ್ಮ ಹಲ್ಲುಗಳಲ್ಲಿ ಹುಳುಕು ಮೂಡಿ, ಒಸಡುಗಳಿಗೆ ಹಾನಿ ಮಾಡಿ, ಬಾಯಿಂದ ದುರ್ವಾಸನೆ ಬರಲು ಕಾರಣವಾಗುತ್ತದೆ. ಆದರೆ ಸಂಪೂರ್ಣವಾಗಿ ನಿಮ್ಮ ಬಾಯಿಯನ್ನು ಸ್ವಚ್ಛವಾಗಿಟ್ಟರೂ …

Read More »

ತುಪ್ಪದ ಈ 6 ಪ್ರಯೋಜನಗಳನ್ನು ತಿಳಿದರೆ, ನೀವು ಯಾವತ್ತೂ ‘ತುಪ್ಪ ಬೇಡ’ ಎನ್ನುವುದಿಲ್ಲ!

ನಮ್ಮ ಹಿರಿಯರು ಅನಾದಿಕಾಲದಿಂದಲೂ ಆಹಾರದಲ್ಲಿ ತುಪ್ಪದ ಮಹತ್ವವನ್ನು ತಿಳಿಸುತ್ತಾನೇ ಬಂದಿದ್ದಾರೆ. ಆದರೆ ಈಗ ಆಧುನಿಕ ವಿಜ್ಞಾನವೂ ತುಪ್ಪ ನಮ್ಮ ಆರೋಗ್ಯಕ್ಕೆ ಅಗತ್ಯವಾದುದು ಎಂದು ಸಾಬೀತು ಮಾಡಿದೆ. ಮನೆಯಲ್ಲಿ ನಿಮ್ಮ ತಾಯಿ ಅಥವಾ ಅಜ್ಜಿ ಊಟದಲ್ಲಿ ತುಪ್ಪ ಸೇರಿಸಿ ಕೊಟ್ಟರೆ ನಿಮಗೆ ಸಿಟ್ಟು ಬರಬಹುದು. ಮಿತಿಮೀರಿ ಯಾವುದನ್ನೇ ಸೇವಿಸಿದರೂ ಅದು ಆರೋಗ್ಯಕ್ಕೆ ಹಾನಿಕರ. ಹಾಗೇ ತುಪ್ಪ ಕೂಡ. ನಿಗದಿತ ಪ್ರಮಾಣದ ತುಪ್ಪ ದಿನಾ ನಿಮ್ಮ ಆಹಾರದಲ್ಲಿ ಬಳಸಲ್ಪಟ್ಟರೆ ಆರೋಗ್ಯದ ಮೇಲೆ ಬಹಳ …

Read More »

ನಿಂಬೆಹಣ್ಣು ಹುಳಿಯಾದರೂ ಆರೋಗ್ಯಕ್ಕೆ ಎಷ್ಟು ಸಿಹಿ ಗೊತ್ತಾ?

ಬರೀ ಸಿಹಿಯಾದ ಹಣ್ಣು ಮತ್ತು ತರಕಾರಿಯಿಂದ ಮಾತ್ರ ಆರೋಗ್ಯವಲ್ಲ. ಹುಳಿ, ಒಗರು, ಕಹಿ ಇರುವ ತರಕಾರಿ, ಹಣ್ಣುಗಳೂ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದರಲ್ಲಿ ನಿಂಬೆಹಣ್ಣು ಕೂಡ ಒಂದು. ದೇಹ ತಂಪಾಗಿಸಲು ಮನೆಯಲ್ಲಿ ಶರಬತ್ ಮಾಡಿ ಕುಡಿಯುವುದು ಎಲ್ಲರಿಗೂ ಗೊತ್ತು. ಆದರೆ ಇದರಿಂದ ಇನ್ನೂ ಹಲವಾರು ಆರೋಗ್ಯಕಾರಿ ಪ್ರಯೋಜನಗಳಿವೆ. ಲಿ೦ಬೆಹಣ್ಣುಗಳಲ್ಲಿ ಫ್ಲೇವನಾಯ್ಡ್ (flavonoid) ಗಳೆ೦ಬ ರಾಸಾಯನಿಕಗಳಿದ್ದು, ಅವು ಆ೦ಟಿ ಆಕ್ಸಿಡೆ೦ಟ್ ಹಾಗೂ ಕ್ಯಾನ್ಸರ್ ರೋಗದ ವಿರುದ್ಧ ಸೆಣಸಾಡುವ …

Read More »

ಬಾಳೆಹಣ್ಣಿನ ಸಿಪ್ಪೆ ಎಸೆಯುವ ಮುನ್ನ ಇದನ್ನು ಓದಿ; ಚರ್ಮದ ಹಲವು ಸಮಸ್ಯೆಗಳಿಗೆ ಸಂಜೀವಿನಿ ಇದು!

ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಎಸೆಯುವುದು ಸಾಮಾನ್ಯ ಸಂಗತಿಯಾಗಿದೆ.  ಆದರೆ ಬಾಳೆಹಣ್ಣಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ಬಾಳೆಹಣ್ಣಿನ ಸಿಪ್ಪೆಯಲ್ಲೂ ಇದೆ ಎಂದು ಕೆಲವೊಂದು ಅಧ್ಯಯನಗಳು ಹೇಳುತ್ತವೆ. ಬಾಳೆಹಣ್ಣಿನ ಸಿಪ್ಪೆ ಕೂಡ ಆರೋಗ್ಯಕ್ಕೆ ತುಂಬಾ ಲಾಭಕರ.ಸಾವಯವವಾಗಿ ಬೆಳೆದಿರುವ ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಬಿ6 ಮತ್ತು ವಿಟಮಿನ್ ಬಿ12 ಅತ್ಯಧಿಕ ಮಟ್ಟದಲ್ಲಿ ಇದೆ. ಇಷ್ಟು ಮಾತ್ರವಲ್ಲದೆ ಮೆಗ್ನಿಶಿಯಂ, ಪೊಟಾಶಿಯಂ, ನಾರಿನಾಂಶ ಮತ್ತು ಪ್ರೋಟೀನ್ ಬಾಳೆಹಣ್ಣಿನ ಸಿಪ್ಪೆಯಲ್ಲಿದೆ. ಮೊಡವೆಗಳಿಗೆ : ಮೊಡವೆಗಳು ಉಂಟಾದಾಗ …

Read More »

ರುಚಿಯಾದ ‘ಹೈದಾರಾಬಾದಿ ಮೊಸರು ಬೆಂಡೆಕಾಯಿ ಮಸಾಲಾ’ ಮಾಡುವುದು ಹೇಗೆ ಗೊತ್ತಾ?

ಹೈದ್ರಾಬಾದ್ ಎಂದರೆ ನಮಗೆ ಒಮ್ಮೆಗೆ ನೆನಪಾಗುವುದು ಅಲ್ಲಿ ತಯಾರಾಗುವ ರುಚಿಯಾದ ಚಿಕನ್ ಬಿರಿಯಾನಿ! ಬರಿಯ ಬಿರಿಯಾನಿ ಮಾತ್ರವಲ್ಲದೆ ಅಲ್ಲಿ ತಯಾರಿಸುವ ನವಾಬ ಪಾಕ ವಿಧಾನವು ಸಸ್ಯಾಹಾರಿಗಳ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಇವರು ಖಾದ್ಯಕ್ಕೆ ಬಳಸುವ ಸಾಮಾಗ್ರಿ ಮತ್ತು ಅದನ್ನು ಸಿದ್ಧಪಡಿಸುವ ಇತರ ಅಂಶಗಳಿಂದ ಹೈದ್ರಾಬಾದ್ ತಿನಿಸುಗಳು ಎಲ್ಲರಿಗೂ ಪ್ರಿಯವಾಗುತ್ತದೆ. ಇದರಲ್ಲಿ ಒಂದು ಹೈದಾರಾಬಾದಿ ‘ಮೊಸರು ಬೆಂಡೆಕಾಯಿ ಮಸಾಲಾ’ –  ಈ ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುವುದು ಖಂಡಿತ. ಹಾಗಿದ್ದರೆ ಬನ್ನಿ, ಅದನ್ನು …

Read More »

ನಾಲಿಗೆ ರುಚಿ ಕಳ್ಕೊಂಡಿದೆಯೇ? ಈ ಸರಳ ಮಾರ್ಗದಿಂದ ನಿಮ್ಮ ನಾಲಿಗೆ ರುಚಿ ಹೆಚ್ಚಿಸಬಹುದು!

ಜ್ವರ ಬಂದ್ರೆ ಅಥವಾ ಯಾವುದಾದರೂ ಅನಾರೋಗ್ಯದಿಂದ ನಾಲಿಗೆಗೆ ಊಟ ರುಚಿಸುವುದಿಲ್ಲ. ಇದರಿಂದ ನಿತ್ರಾಣ, ಬಳಲಿಕೆ ಉಂಟಾಗುವುದು ಸಹಜ. ಈ ನಾಲಿಗೆ ರುಚಿಯನ್ನು ಮರಳಿ ಪಡೆಯಲು ಇಲ್ಲಿವೆ ನೋಡಿ ಕೆಲವು ಸರಳ ಉಪಾಯಗಳು: ಹಸಿ ಶುಂಠಿ ರಸಕ್ಕೆ ಸ್ವಲ್ಪ ನಿಂಬೆರಸ ಮತ್ತು ಸೈಂಧವ ಉಪ್ಪು ಬೆರಸಿ ದಿನಕ್ಕೆ 2 ಬಾರಿ ಸೇವಿಸಿದರೆ ನಾಲಿಗೆ ರುಚಿ ಹೆಚ್ಚುತ್ತದೆ. ಅಮೃತಬಳ್ಳಿ ರಸಕ್ಕೆ ಹಿಪ್ಪಲಿ ಪುಡಿ ಮತ್ತು ಜೇನುತುಪ್ಪ ಸೇರಿಸಿ ಸೇವಿಸಿದರೆ ನಾಲಿಗೆ ರುಚಿ ಹೆಚ್ಚುತ್ತದೆ. …

Read More »

ಆಲೂಗಡ್ಡೆಯಿಂದ ಹೀಗೆ ಮಾಡಿದರೆ ನಿಮ್ಮ ಮುಖದ ಮೇಲಿನ ಉರಿ, ತುರಿಕೆ ಕಡಿಮೆಯಾಗುತ್ತದೆ

ಆಲೂಗಡ್ಡೆ ಇಲ್ಲದೆ ಅಡುಗೆಯೇ ಆಗುವುದಿಲ್ಲ ಎನ್ನಬಹುದು. ಇದರಿಂದಾಗುವ ಅಡುಗೆಗಳು ಅಪಾರ. ಆದರೆ ಅದೇ ಆಲೂಗಡ್ಡೆಯನ್ನು ಸೌಂದರ್ಯ ಉದ್ದೀಪನಗೊಳಿಸಲೂ ಬಳಸಬಹುದು. ಉತ್ತಮ ಬಣ್ಣಕ್ಕೆ: ಆಲೂಗಡ್ಡೆಯ ರಸವು ನೈಸರ್ಗಿಕವಾಗಿ ಬಿಳಿ ಬಣ್ಣವನ್ನು ಉಂಟು ಮಾಡುವಂತಹ ಗುಣವನ್ನು ಹೊಂದಿದೆ. ಆದ್ದಿಂದ ಚರ್ಮಕ್ಕೆ ಉತ್ತಮ ಬಣ್ಣವನ್ನೂ ಕೊಡುತ್ತದೆ. ಒಂದು ಆಲೂಗಡ್ಡೆಯನ್ನು ಚಿಕ್ಕದಾಗಿ ತುರಿದು, ಇದಕ್ಕೆ ಒಂದು ಚಮಚ ಮೊಸರು ಸೇರಿಸಿ ನುಣ್ಣಗೆ ಅರೆಯಬೇಕು. ಈ ಪೇಸ್ಟ್‌ ಅನ್ನು ಕಪ್ಪಾಗಿದ್ದ ಚರ್ಮದ ಮೇಲೆ ತೆಳುವಾಗಿ ಹೆಚ್ಚಿ ನಯವಾಗಿ …

Read More »

ರಕ್ತ ಪರಿಚಲನೆ ಸುಗಮವಾಗಿ ಸಾಗಲು ಈ ಆಹಾರಗಳನ್ನು ತಪ್ಪದೇ ಸೇವಿಸಿ!

ಜೀವಕೋಶಗಳ ಆರೋಗ್ಯಕರ ಬೆಳವಣಿಗೆ ಮತ್ತು ವಿವಿಧ ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ದೇಹದಲ್ಲಿ ಸರಾಗವಾದ ರಕ್ತಪರಿಚಲನೆ ಅತಿ ಅಗತ್ಯ. ರಕ್ತಪರಿಚಲನೆಯಲ್ಲಿ ವ್ಯತ್ಯಯವಾದರೆ ಅನೇಕ ಅನಾರೋಗ್ಯಗಳು ಕಾಡುತ್ತವೆ. ಆ್ಯಂಟಿಆಕ್ಸಿಡೆಂಟ್ಸ್‌, ಒಮೆಗಾ 3 ಫ್ಯಾಟಿ ಆ್ಯಸಿಡ್ಸ್‌, ನಾರು, ವಿಟಮಿನ್‌ಗಳು ಮತ್ತು ಖನಿಜಾಂಶಗಳಿಂದ ತುಂಬಿದ ಆಹಾರಗಳನ್ನು ತಿನ್ನುವುದರಿಂದ ರಕ್ತಪರಿಚಲನೆ ಸುಗಮವಾಗಿ ದೇಹದಲ್ಲಿರುವ ತ್ಯಾಜ್ಯಗಳೆಲ್ಲಾ ಹೊರ ಹೋಗುತ್ತವೆ. ಹಾಗಾದರೆ ನೈಸರ್ಗಿಕವಾಗಿ ರಕ್ತ ಪರಿಚಲನೆ ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ; ಕಿತ್ತಳೆ: ವಿಟಮಿನ್‌ ಸಿ ಯ ಆಗರವಾಗಿರುವ ಕಿತ್ತಳೆ …

Read More »

Suffering from Period Pain? Few home remedies to ease menstrual pain and cramps!

Did you know that dysmenorrhea i.e. extreme period pain interferes with the daily activities of 1 in every 5 women according to the American Academy of Family Physicians. Cramping, bloating, mood swings, lower back pain,headache, fatigue, heavy bleeding – “This ‘natural process’ is our passage into womanhood? Seriously? Why for …

Read More »