Breaking News
Home / ಇತರೆ / ಕಾನೂನು

ಕಾನೂನು

ನಟಿ ಪೂಜಾಗಾಂಧಿಗೆ ಕೋರ್ಟ್ ಕೊಟ್ಟ ವಿಚಿತ್ರ ಶಿಕ್ಷೆ: ಸಮನ್ಸ್ ಕೊಡುವ ಬದಲು ಸೆಲ್ಫಿ ತೆಗೆಸಿಕೊಂಡ ಪೊಲೀಸ್ ಪೇದೆ!

 ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿರುವ ನಟಿ ಪೂಜಾ ಗಾಂಧಿಗೆ ರಾಯಚೂರಿನ 2ನೇ ಹೆಚ್ಚುವರಿ ಜಿಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಇಡೀ ದಿನ ಕೋರ್ಟ್ ಹಾಲ್ ನಲ್ಲಿ ಕಾಯವ ಶಿಕ್ಷೆ ನೀಡಿತು. ವಿಚಾರಣೆಗೆಂದ ಬೆಳಗ್ಗೆ 11 ಗಂಟೆಗೆ ಆಗಮಿಸಿದ ನಟಿ ಪೂಜಾ ಗಾಂಧಿ ಸಂಜೆ 5.,30ರವರೆಗೂ ಕಾಯಬೇಕಾಯಿತು. ಮಧ್ಯಾಹ್ನ ಭೋಜನ ವಿರಾಮಕ್ಕೂ ಬಿಡುವು ನೀಡದ ನ್ಯಾಯಾಧೀಶರಾದ ಪೂರ್ಣಿಮಾ ಯಾದವ್, ನಾನು ಹೇಳುವವರೆಗೂ ಇಲ್ಲಿಯೇ ಕೂತಿರಬೇಕು ಎಂದು …

Read More »

18 ವರ್ಷದೊಳಗಿನ ಹೆಂಡತಿ ಜೊತೆ sex ಮಾಡಿದರೆ ರೇಪ್ ಕೇಸ್: ಸುಪ್ರೀಂಕೋರ್ಟ್ ಮಹತ್ವದ ತೀರ್ಪು

18 ವರ್ಷದೊಳಗಿನ ಹೆಂಡತಿ ಜೊತೆ ಸೆಕ್ಸ್ ಮಾಡಿದರೆ ಅದನ್ನು ಅತ್ಯಾಚಾರ ಅಥವಾ ರೇಪ್ ಎಂದು ಪರಿಗಣಿಸಲಾಗುವುದು. ಅದು ಶಿಕ್ಷಾರ್ಹ ಅಪರಾಧವೂ ಹೌದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. 15 ವರ್ಷ ಮೇಲ್ಪಟ್ಟ ಮಹಿಳೆಯನ್ನು ಮದುವೆ ಆದರೆ ಅದನ್ನು ಬಾಲ್ಯ ವಿವಾಹ ಎಂದು ಪರಿಗಣಿಸಬಾರದು ಎಂಬ ಅರ್ಜಿ ಮೇಲಿನ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. 15 ವರ್ಷದೊಳಗಿನ ಮಹಿಳೆಯನ್ನು ಮದುವೆ ಮಾಡಿಕೊಂಡರೂ ಆಕೆಯೊಂದಿಗೆ ದೈಹಿಕ ಸಂಪರ್ಕ …

Read More »

ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಜಯಂತ್ ಪಟೇಲ್ ರಾಜೀನಾಮೆ ತಂದ ಸಂಚಲನ

ಸೇವಾ ಹಿರಿತನ ಕಡೆಗಣಿಸಿ ಮುಖ್ಯ ನ್ಯಾಯಮೂರ್ತಿ ಹುದ್ದೆ ತಪ್ಪಿಸಿದ್ದರಿಂದ ಅಸಮಾಧಾನಗೊಂಡ ಹೈಕೋರ್ಟ್ ನ್ಯಾಯಮೂರ್ತಿ ಜಯಂತ್ ಪಟೇಲ್ ರಾಜೀನಾಮೆ ನೀಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಕರ್ನಾಟಕದ ವಕೀಲರ ಸಂಘ ಕೂಡ ಪ್ರತಿಭಟನೆ ನಡೆಸಿದೆ. ಇದೇ ವೇಳೆ ಗುಜರಾತ್ ನ್ಯಾಯಾಲಯ ಕೂಡ ಈ ಆದೇಶಕ್ಕೆ ತಡೆ ನೀಡಿದೆ. ಇರ್ಶಾತ್ ಪ್ರಕರಣವನ್ನು ಸಿಬಿಐಗೆ ವಹಿಸಿ ದಿಟ್ಟತನ ಮೆರೆದಿದ್ದ ಜಯಂತ್ ಪಟೇಲ್, ಸ್ವತಃ ತನಿಖೆಯ ಪ್ರಗತಿಯನ್ನು ಪರಿಶೀಲಿಸುತ್ತಿದ್ದರು. ಇದೀಗ ರಾಜೀನಾಮೆ …

Read More »

ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಶ್ರೀ ರವಿಶಂಕರ್ ಗುರೂಜಿ ಡ್ರಾಪ್ ಕೊಟ್ಟ ಹೈಕೋರ್ಟ್ ನ್ಯಾಯಮೂರ್ತಿ!

ಶ್ರೀ ರವಿಶಂಕರ್ ಗುರೂಜಿ ಸೆಪ್ಟೆಂಬರ್ 5ರಂದು ನಡೆದ ಈಶಾನ್ಯ ಭಾರತದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಗುವಾಹಟಿಯ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಅಜಿತ್ ಸಿಂಗ್ ರವಿಶಂಕರ್ ಗುರೂಜಿ ಅವರನ್ನು ಸ್ವತಃ ಕಾರು ಚಲಾಯಿಸಿಕೊಂಡು ವಿಮಾನ ನಿಲ್ದಾಣಕ್ಕೆ ಬೀಳ್ಕೊಟ್ಟಿದ್ದರು. ಈ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ದೇಶಾದ್ಯಂತ ವಕೀಲ ಸಮುದಾಯ ಮುಖ್ಯ ನ್ಯಾಯಮೂರ್ತಿಗಳು ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿ ಪ್ರತಿಭಟನೆಗೆ ಇಳಿದಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಯಂತಹ ಉನ್ನತ …

Read More »

ಖಾಸಗೀತನ ಮೂಲಭೂತ ಹಕ್ಕು: 547 ಪುಟಗಳ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನೇನು ಹೇಳಿದೆ ಗೊತ್ತಾ?

ಖಾಸಗೀತನ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂದು 9 ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಇಂಟರ್‍ ನೆಟ್‍ ಯುಗದಲ್ಲಿ ಖಾಸಗೀತನ ಅನ್ನೋದೇ ಇಲ್ಲ ಎಂಬ ಕೇಂದ್ರ ಸರಕಾರದ ವಾದಕ್ಕೆ ಮುಖಭಂಗವಾಗಿದೆ. ಸರಕಾರದ ಪ್ರತಿಯೊಂದು ಯೋಜನೆ ಸೇರಿದಂತೆ ಎಲ್ಲಾದಕ್ಕೂ ಆಧಾರ್‍ ಕಾರ್ಡ್ ಲಿಂಕ್‍ ಮಾಡುವುದು ಅಗತ್ಯ ಎಂದು ಕೇಂದ್ರ ವಾದಿಸಿತ್ತು. ಆದರೆ ಇದರಿಂದ ಆಧಾರ್ ಕಾರ್ಡ್‍ನಲ್ಲಿ ಭಾರತೀಯ ನಾಗರೀಕರ ಮಾಹಿತಿ ಸೋರಿಕೆ ಆಗಲಿದ್ದು, ಇದು ಖಾಸಗೀತನದ ವಿರುದ್ಧವಾಗಿದೆ …

Read More »

ತ್ರಿವಳಿ ತಲಾಖ್‍ಗೆ ಮಾನ್ಯತೆ ಇಲ್ಲ: ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನಲ್ಲಿ ಏನೇನು ಹೇಳಿದೆ ಗೊತ್ತಾ?

ಮುಸ್ಲಿಂ ಸಮುದಾಯದಲ್ಲಿ ನಡೆದು ಬಂದಿರುವ ಸಾಂಪ್ರದಾಯಿಕ ತ್ರಿವಳಿ ತಲಾಖ್‍ಗೆ ಭಾರತೀಯ ಸಂವಿಧಾನದಲ್ಲಿ ಮಾನ್ಯತೆ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಸಂಬಂಧ ಸೂಕ್ತ ಕಾನೂನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ಸೂಚನೆಯನ್ನೂ ನೀಡಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೇಹರ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಭಾರೀ ಚರ್ಚೆಗೆ ಕಾರಣವಾಗಿದ್ದ ತ್ರಿವಳಿ ತಲಾಖ್‍ ಕುರಿತು ಸುದೀರ್ಘ ವಿಚಾರಣೆ ಮಂಗಳವಾರ ಬೆಳಗ್ಗೆ ಅತ್ಯಂತ ಮಹತ್ವದ ತೀರ್ಪು ನೀಡಿದೆ. ಇದರಿಂದ ಮುಸ್ಲಿಂ ಸಮುದಾಯದಲ್ಲಿ ತ್ರಿವಳಿ …

Read More »

ಕನ್ನಡಿಗರೇ ಹುಷಾರ್‍!… ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಯಾರು ಗೊತ್ತಾ?

ನ್ಯಾಯಮೂರ್ತಿ ಜೆ.ಎಸ್‍. ಖೇಹರ್ ನಂತರ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ದೀಪಕ್‍ ಮಿಶ್ರಾ ಕಾರ್ಯ ನಿರ್ವಹಿಸಲಿದ್ದಾರೆ. ಕೇಂದ್ರ ಸರಕಾರ 63 ವರ್ಷದ ದೀಪಕ್ ಮಿಶ್ರಾ ಅವರನ್ನು ಮುಂದಿನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡಿದೆ. 13 ತಿಂಗಳ ಕಾಲ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ ನ್ಯಾ. ಜೆ.ಎಸ್. ಖೇಹರ್ ಆಗಸ್ಟ್ 27ರಂದು ನಿವೃತ್ತರಾಗಲಿದ್ದಾರೆ. ಅವರ ನಂತರ ದೀಪಕ್ ಮಿಶ್ರಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದೇಶಾದ್ಯಂತ ಗಮನ ಸೆಳೆದ ನಿರ್ಭಯ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಪೀಠವನ್ನು …

Read More »

ಶಾಲೆ, ಸರಕಾರಿ, ಖಾಸಗಿ ಕಚೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ: ಮದ್ರಾಸ್‍ ಹೈಕೋರ್ಟ್

ತಮಿಳುನಾಡಿನ ಶಾಲೆ, ಸರಕಾರಿ ಕಚೇರಿ ಮತ್ತು ಖಾಸಗಿ ಸಂಸ್ಥೆಗಳು ಹಾಗೂ ಕೈಗಾರಿಕೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಂ.ವಿ. ಮುರಳೀಧರನ್ ನೇತೃತ್ವದ ಪೀಠ ಮಂಗಳವಾರ ನೀಡಿದ ಆದೇಶದಲ್ಲಿ ಶಾಲೆಗಳಲ್ಲಂತೂ ಸೋಮವಾರ ಅಥವಾ ಶುಕ್ರವಾರದಂದು ಅಥವಾ ವಾರದಲ್ಲಿ ಕನಿಷ್ಠ ಒಂದು ಬಾರಿ ಹಾಡಿಸಬೇಕು. ರಾಷ್ಟ್ರಗೀತೆಯನ್ನು ಕಚೇರಿಗಳಲ್ಲಿ ಕನಿಷ್ಠ ತಿಂಗಳಲ್ಲಿ ಒಂದು ಬಾರಿಯಾದರೂ ಹಾಡಿಬೇಕು ಎಂದು ಸ್ಪಷ್ಟಪಡಿಸಿದೆ. ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವಾರದಲ್ಲಿ …

Read More »

ಜೋಯಿಶಾ ಮಂಡಲ್‍ ಈಗ ದೇಶದ ಮೊದಲ ಮಂಗಳಮುಖಿ ನ್ಯಾಯಮೂರ್ತಿ

ಜೋಯಿತಾ ಮಂಡಲ್ ಪಶ್ಚಿಮ ಬಂಗಾಳದ ಇಸ್ಲಾಮಪುರದ ಕೋರ್ಟ್ ಆವರಣದೊಳಗೆ ಪ್ರವೇಶಿಸಿದಾಗ ಮಂಗಳಮುಖಿಯರಿಗೆ ಅದೊಂದು ಹೆಮ್ಮೆಯ ಕ್ಷಣ. ಯಾಕೆಂದರೆ ಅವರು ಅಲ್ಲಿಗೆ ಕಕ್ಷಿದಾರರಾಗಿ ಅಲ್ಲ, ಬಂದಿದ್ದು ಓರ್ವ ಜಡ್ಜ್ ಆಗಿ. ಅದೂ ದೇಶದ ಮೊದಲ ಮಂಗಳಮುಖಿ ನ್ಯಾಯಮೂರ್ತಿ ಎಂಬ ವಿಶೇಷ ಗೌರವ ಅವರಿಗೆ ಲಭಿಸಿತ್ತು. ಜೋಯಿತಾ ರಾಷ್ಟ್ರೀಯ ಲೋಕ ಅದಾಲತ್‍ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಅವರ ಜೊತೆ ಒಬ್ಬ ಹೆಚ್ಚುವರಿ ನ್ಯಾಯಾಧೀಶ ಮತ್ತೋರ್ವ ವಕೀಲರು ನೇಮಕಗೊಂಡಿದ್ದಾರೆ. ವಿಶೇಷ ಅಂದರೆ ಮಂಗಳಮುಖಿ ಎಂಬ ಕಾರಣಕ್ಕೆ ಹೋಟೇಲ್ …

Read More »

ಹಸು ಕೊಂದವರಿಗೆ 14 ವರ್ಷ, ಮನುಷ್ಯರನ್ನು ಕೊಂದರೆ 2 ವರ್ಷ ಶಿಕ್ಷೆ: ನ್ಯಾಯಾಧೀಶರ ಅಸಹಾಯಕತೆ

2008ರಲ್ಲಿ ಹರ್ಯಾಣದ ಉದ್ಯಮಿಯೊಬ್ಬರ ಪುತ್ರ ಬಿಎಂಡಬ್ಲ್ಯು ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಬೈಕ್ ಸವಾರನ ಸಾವಿಗೆ ಕಾರಣವಾದ ವ್ಯಕ್ತಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಆದರೆ ಶಿಕ್ಷೆ ಪ್ರಮಾಣ ವಿಧಿಸುವ ಸಂದರ್ಭದಲ್ಲಿ ಹಸುವನ್ನು ಕೊಂದವರಿಗೆ 14 ವರ್ಷ ಜೈಲು, ಮನುಷ್ಯರನ್ನು ಕೊಂದವರಿಗೆ ಕೇವಲ 2 ವರ್ಷದ ಶಿಕ್ಷೆ ವಿಧಿಸಬೇಕಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. 30ರ ಹರೆಯದ ಉತ್ಸವ್ ಭಾಸಿನ್‍ಗೆ 2 ವರ್ಷ ಜೈಲು ಶಿಕ್ಷೆ ಜೊತೆಗೆ ಮೃತರ ಕುಟುಂಬಕ್ಕೆ …

Read More »

Powered by keepvid themefull earn money