Breaking News
Home / ಕರ್ನಾಟಕ

ಕರ್ನಾಟಕ

ಹೂ ಮಾರುತ್ತಿದ್ದ ಬಾಲಕಿಯನ್ನು ವಸತಿ ಶಾಲೆಗೆ ಸೇರಿಸಿ ಮಾದರಿಯಾದ ಶಿಕ್ಷಣ ಸಚಿವರು!

ಶಿಕ್ಷಣ ಸಚಿವರಾಗಿ ಹತ್ತು – ಹಲವು ಜನ ಮೆಚ್ಚುವ ಕಾರ್ಯಗಳನ್ನು ಮಾಡಿರುವ ಸುರೇಶ್ ಕುಮಾರ್ ಈಗ ಮತ್ತೆ ತಮ್ಮ ವಿಶಾಲ ಹೃದಯದಿಂದ ಜನಮನ ಗೆದ್ದಿದ್ದಾರೆ. ಕಡುಬಡತನದ ಕಾರಣ ತಂದೆತಾಯಿಗೆ ಆರ್ಥಿಕ ಸಹಾಯ ಮಾಡಲು ಕೆಂಗೇರಿ ರೈಲು ನಿಲ್ದಾಣದಲ್ಲಿ ಹೂ ಮಾರುತ್ತಿದ್ದ ಬಾಲಕಿಯೊಬ್ಬಳನ್ನು ಸಚಿವರು ವಸತಿ ಶಾಲೆಗೆ ಸೇರಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಸಂಗೀತಾ ಎಂಬ ಬಾಲಕಿಯ ತಂದೆ ಆಕೆಯನ್ನು ಸರಕಾರಿ ಶಾಲೆಗೆ ಸೇರಿಸಿದ್ದರೂ, ಶಾಲೆ ಮುಗಿದ ಬಳಿಕ ದುಡಿಯುವುದು ಆಕೆಗೆ ಅನಿವಾರ್ಯವಾಗಿತ್ತು. …

Read More »

ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇನ್ಫೋಸಿಸ್ ಮೂರ್ತಿ ದಂಪತಿ ಸುಪುತ್ರ!

ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಅವರ ವಿವಾಹ ಸೋಮವಾರ ಆತ್ಮೀಯರ ಸಮ್ಮುಖದಲ್ಲಿ ಬೆಂಗಳೂರಿನಲ್ಲಿ ಸರಳವಾಗಿ ನೆರವೇರಿತು. ಕೇರಳದ ಕೊಚ್ಚಿ ಮೂಲದ ಅರ್ಪಣಾ ಕೃಷ್ಣನ್ ಜತೆ ರೋಹನ್ ಹಸೆಮಣೆ ಏರಿದ್ದು, ಅವರು ನಿವೃತ್ತ ಎಸ್‍ಬಿಐ ಉದ್ಯೋಗಿ ಸಾವಿತ್ರಿ ಕೃಷ್ಣನ್ ಹಾಗೂ ಕಮಾಂಡರ್, ಮಾಜಿ ಭಾರತೀಯ ನೌಕಾಪಡೆ ಅಧಿಕಾರಿ ಕೆಆರ್ ಕೃಷ್ಣನ್ ಅವರ ಸುಪುತ್ರಿ. ಮೂರು ವರ್ಷಗಳ ಹಿಂದೆ ಸ್ನೇಹಿತರ ಮೂಲಕ …

Read More »

‘ನೀವು ಬಿತ್ತಿದ್ದನ್ನು ಕೊಯ್ಯಿರಿ’; ‘ಫಡ್ನವಿಸ್’ಗೆ ತಕ್ಕ ಶಾಸ್ತಿ’ ಸರಣಿ ಟ್ವೀಟ್ ಗಳ ಮೂಲಕ ಕಾಲೆಳೆದ ಕುಮಾರಣ್ಣ!

ಮಹಾರಾಷ್ಟ್ರದಲ್ಲಿ ನಡೆದ ರಾಜಕೀಯ ನಾಟಕ ಕೊನೆಗೊಂದು ಇನ್ನೇನು ಶಿವಸೇನೆ – ಎನ್ ಸಿಪಿ, ಕಾಂಗ್ರೆಸ್ ಅಧಿಕಾರಕ್ಕೇರಲು ಸಜ್ಜಾಗಿ ನಿಂತಿವೆ. ರಾತ್ರೋರಾತ್ರಿ ಬಹುಮತವಿಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವಿಸ್ ಬಹುಮತ ಸಾಬಿತುಪಡಿಸಲು ಅಸಾಧ್ಯ ಎಂದು ಅರಿವಿಗೆ ಬಂದ ಕೂಡಲೇ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇನ್ನು ಅವರ ರಾಜೀನಾಮೆ ‘ಮಾಡಿದ್ದುಣ್ಣೋ ಮಹರಾಯ’ ಎಂಬ ಗಾದೆಯಂತೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರಣಿ ಟ್ವೀಟ್ ಗಳ ಮೂಲಕ ಟೀಕಿಸಿದ್ದಾರೆ. ಅಲ್ಲದೆ, …

Read More »

RCBಗೆ ಬೇಡವಾಯಿತೇ ಬೆಂಗಳೂರು?; ಅಭಿಮಾನಿಗಳಿಂದ ತೀವ್ರ ಆಕ್ರೋಶ- ಅಷ್ಟಕ್ಕೂ ಏನಾಯಿತು ಅಂತೀರಾ?

ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿ ೧೨ ಆವೃತ್ತಿಗಳು ಕಳೆದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಒಂದೇ ಒಂದು ಕಪ್ ಕೂಡ ಗೆದ್ದಿಲ್ಲ. ಆದರೆ ಆರ್ ಸಿಬಿ ಅಭಿಮಾನಿಗಳು ತಮ್ಮ ತಂಡವನ್ನು ಒಂಚೂರು ಬಿಟ್ಟುಕೊಟ್ಟಿಲ್ಲ.. ಸೋತರೂ, ಗೆದ್ದರೂ ನಮಗೆ ಆರ್ ಸಿಬಿಯೇ ಬೆಸ್ಟ್ ಅಂತ ಬೆಂಬಲಕ್ಕೆ ನಿಲ್ಲುತ್ತಾರೆ. ಆದರೆ ಈಗ ಆರ್ ಸಿಬಿ ಫ್ರ್ಯಾಂಚೈಸಿ ವಿರುದ್ಧ ಅದರ ಅಭಿಮಾನಿಗಳೇ ತಿರುಗಿ ಬಿದ್ದಿದ್ದಾರೆ. ನಾವಿನ್ನು ನಿಮಗೆ ಬೆಂಬಲವೇ ಕೊಡುವುದಿಲ್ಲ ಎಂದು ಆಕ್ರೋಶ …

Read More »

‘ಗ್ರಹಣ’ದ ಬಗ್ಗೆ ಭಯ ಬಿಟ್ಟು ಜ್ಞಾನ ಹರಡಲು ಶಾಲೆ – ಶಾಲೆ ತಿರುಗುತ್ತಿರುವ ಉಡುಪಿಯ ನಿವೃತ್ತ ಮೇಷ್ಟ್ರು!

ಮಾನವ ಚಂದ್ರನಲ್ಲಿ ಕಾಲಿಟ್ಟರೂ, ಹಲವು ವೈಜ್ಞಾನಿಕ ಸತ್ಯಗಳನ್ನು ಓದಿ ತಿಳಿದುಕೊಂಡಿದ್ದರೂ ಇನ್ನೂ ಗ್ರಹಣ ಬಂತೆಂದೆರೆ ಸಾಕು, ಮಡಿ, ಮೈಲಿಗೆ, ಗ್ರಹಗತಿ ಹೀಗೆ ಜನ ಜ್ಯೋತಿಷ್ಯ, ಹೋಮ – ಹವನದ ಮೊರೆ ಹೋಗುವುದು ಸಾಮಾನ್ಯ. ಈ ಬಗ್ಗೆ ಹಲವಾರು ಅರಿವು ಹುಟ್ಟಿಸುವ ಕಾರ್ಯಕ್ರಮಗಳು ನಡೆದರೂ ಅದು ಜನರ ಮನ ಮುಟ್ಟುವುದಿಲ್ಲ. ಈಗ ಈ ರೀತಿ ಜನರ ಮನಸ್ಸಿಗೆ ಹಿಡಿದಿರುವ ‘ಗ್ರಹಣ’ವನ್ನು ಬಿಡಿಸಲು ಉಡುಪಿಯ ಭೌತಶಾಸ್ತ್ರಜ್ಞರೊಬ್ಬರು ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಹೌದು! ಇವರು …

Read More »

[Video]ಕುವೆಂಪು ಕನ್ನಡ ಕವನ ವಾಚನ ಮಾಡಿ ಕಿಚ್ಚ, ಅಪ್ಪುಗೆ ಚಾಲೆಂಜ್ ಮಾಡಿದ ಕುಂಬ್ಳೆ; ವಿಡಿಯೋ ನೋಡಿ ಕನ್ನಡಿಗರು ಫುಲ್ ಖುಷ್!

ಕನ್ನಡ ರಾಜ್ಯೋತ್ಸವ ದಿನಾಚರಣೆ ಮುಗಿದು 15 ದಿನಗಳು ಕಳೆದರೂ ಅದರ ಕಂಪು ಇನ್ನೂ ಹಾಗೆ ಇದೆ. ಹಲವಾರು ಜನ ಹತ್ತು ಹಲವು ರೀತಿಯಲ್ಲಿ ಈ ರಾಜ್ಯೋತ್ಸವವನ್ನು ಆಚರಿಸಿ ಕನ್ನಡದ ಹಬ್ಬಕ್ಕೆ ಕಳೆ ಕಟ್ಟಿದ್ದಾರೆ. ಇನ್ನು ನಮ್ಮ ಚಂದನವನದಲ್ಲಿ ಸಿನಿತಾರೆಯರು ವಿಶಿಷ್ಟ ರೀತಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡಿದ್ದಾರೆ. ಅದುವೇ ಕನ್ನಡ ಕವನ ಓದುವ ಸವಾಲು. ಟ್ವಿಟರ್ ನಲ್ಲಿ ಒಬ್ಬರು ಕವನ ಓದಿ ವಿಡಿಯೋ ಮಾಡಿ ನಂತರ ಅದನ್ನು ಹಂಚಿಕೊಂಡು ಮತ್ತೆ ಇನ್ಯಾರಿಗೋ …

Read More »

ಚಿದಂಬರಂ ಪ್ರಕರಣ ಕಾಪಿ ಪೇಸ್ಟ್; ED ಎಡವಟ್ಟಿಗೆ ಸುಪ್ರೀಂ ತರಾಟೆ; ಡಿಕೆಶಿಗೆ ಬಿಗ್ ರಿಲೀಫ್

ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಮಾಜಿ ಸಚಿವ ಡಿಕೆಶಿಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದ್ದು, ಇದಕ್ಕೆ ಒಂದು ರೀತಿಯಲ್ಲಿ ಇಡಿ ಎಡವಟ್ಟೇ ಕಾರಣ ಎನ್ನಲಾಗಿದೆ. ಅಕ್ಟೋಬರ್‌ 23 ರಂದು ದೆಹಲಿ ಹೈಕೋರ್ಟ್ ಡಿಕೆ ಶಿವಕುಮಾರ್‌ಗೆ ಜಾಮೀನು ನೀಡಿತ್ತು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದ ಇಡಿ, ಜಾಮೀನು ನೀಡಿದರೆ ಆರೋಪಿ ಸಾಕ್ಷಿ ನಾಶ ಪಡಿಸಬಹುದು ಎಂದು ವಾದ ಮಾಡಿತ್ತು. ಆದರೆ ಇಂದು ವಿಚಾರಣೆ ಮಾಡಿದ …

Read More »

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಕನ್ನಡದ ಕುವರಿ!

12 ವರ್ಷದ ಬಾಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಓಜಲ್ ಎಸ್ ನಲವಡಿ ಎಂಬ ಬಾಲಕಿ ಈ ಸಾಧನೆ ಮಾಡಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ಇದನ್ನು ದಾಖಲಿಸಿಕೊಂಡರು. …

Read More »

ವಿಶ್ವದ ಘಟಾನುಘಟಿಗಳ ಹುಬ್ಬೇರಿಸುವಂತೆ ಮಾಡಿದ ಕನ್ನಡಿಗನ ಅದ್ಭುತ ಸಾಧನೆ!

ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಯೊಬ್ಬ ಪ್ರಾಜೆಕ್ಟ್ ತಯಾರಿಸಲು ಹೋದಾಗ ‘ಮಕ್ಕಳಾಟ’ ಎಂದು ತಿರಸ್ಕೃತಗೊಂಡಿತ್ತು. ಅದೇ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಪದವೀಧರನೋರ್ವನ ಅದೇ ಪ್ರಾಜೆಕ್ಟ್ ಇಂದು ಇಂಡಿಯನ್ ಆರ್ಮಿ, ಇನ್‌ಫೋಸಿಸ್ ಸೇರಿದಂತೆ ಘಟಾನುಘಟಿ ಉದ್ಯಮಿಗಳನ್ನೇ ಬೆರಗುಗೊಳಿಸಿದೆ. ಏಕೆಂದರೆ ಕೇವಲ 20 ರೂ.ಗೆ ನೀರಿನ ಫಿಲ್ಟರ್‌ ತಯಾರಿಸಿ ಈ ಕನ್ನಡಿಗ ವಿದೇಶದಲ್ಲೂ ಸದ್ದು ಮಾಡುತ್ತಿದ್ದು, ‘ಫಿಲ್ಟರ್‌ ಮ್ಯಾನ್‌’ ಆಗಿ ಹೊರಹೊಮ್ಮಿದ್ದಾರೆ. ಯಾರು ಈ ವಿಶ್ವ ಪ್ರಸಿದ್ದ ಕನ್ನಡಿಗ ‘ಫಿಲ್ಟರ್‌ ಮ್ಯಾನ್‌’, ಇವರ ಸಾಧನೆ ಏನು …

Read More »

ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಶಾಸಕ ವೇದವ್ಯಾಸ್ ಕಾಮತ್ ಹೊಸ ಐಡಿಯಾ; ಮೆಚ್ಚುಗೆ ಸೂಚಿಸಿದ ಸ್ವಿಗ್ಗಿ!

ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಪ್ಲಾಸ್ಟಿಕ್‌ ನಿಷೇಧ ಕುರಿತು ಹಲವು ವರ್ಷಗಳಿಂದ ಸರಕಾರ, ಅಧಿಕಾರಿಗಳು, ಸಂಘ ಸಂಸ್ಥೆಗಳು ಅರಿವು ಮೂಡಿಸಲು ಪ್ರಯತ್ನಿಸಿದರೂ ಅದರ ಬಳಕೆ ಮಾತ್ರ ಕಡಿಮೆಯಾಗುತ್ತಿಲ್ಲ. ಈ ಪ್ಲಾಸ್ಟಿಕ್ ಬಳಕೆಗೆ ಆನ್ ಲೈನ್ ಆಹಾರ ಪೂರೈಸುವ ಕಂಪನಿಗಳೂ ಕೂಡ ಕೊಡುಗೆಯೂ ಬಹಳಷ್ಟಿದೆ. ಈಗ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ಈ ಕಂಪನಿಗಳಿಗೆ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಕೋರುವುದರ ಜೊತೆಗೆ ಒಂದು ಒಳ್ಳೆ ಐಡಿಯಾ ಕೂಡ ನೀಡಿದ್ದು, ಈಗ …

Read More »