Breaking News
Home / ಕ್ರೀಡೆ

ಕ್ರೀಡೆ

ಹೀನಾಯ ಸೋಲಿನಲ್ಲೂ ವಿನೂತನ ದಾಖಲೆ ಬರೆದ ಟೀಂ ಇಂಡಿಯಾ ಆಟಗಾರರು!

ದಾಖಲೆ ಅಂದ್ರೆ ದಾಖಲೆ! ಅದು ಒಳ್ಳೆಯ ಸಾಧನೆಯೇ ಆಗಬೇಕಿಂದಿಲ್ಲ. ಕಳಪೆ ಪ್ರದರ್ಶನವೂ ದಾಖಲೆಯೇ ಎಂದು ಕರೆಸಿಕೊಳ್ಳುತ್ತದೆ. ಈಗ ಭಾರತದ ಪಾಲಿಗೂ ಆಗಿರುವುದೂ ಅದೇ. ಅತಿಥೇಯ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೇವಲ ಸೋತಿದ್ದು ಮಾತ್ರವಲ್ಲ, ಹೀನಾಯವಾಗಿ ಸೋತಿದ್ದು ಹಲವು ಮಾಜಿ ಕ್ರಿಕೆಟಿಗರ, ಕ್ರಿಕೆಟ್ ಅಭಿಮಾನಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಆದರೆ ಈ ಮಧ್ಯೆಯೂ ಟೀಂ ಇಂಡಿಯಾದ ಕೆಲವು ಆಟಗಾರರು ವಿನೂತನವಾದ ದಾಖಲೆಯೊಂದನ್ನು ಮಾಡಿದ್ದಾರೆ. …

Read More »

ಭಾರತ ಕ್ರಿಕೆಟ್ ತಂಡದಲ್ಲಿ ಅನುಷ್ಕಾ ಶರ್ಮಾ? ಬಿಸಿಸಿಐ ವಿರುದ್ಧ ಕಿಡಿಕಾರಿದ ಕ್ರಿಕೆಟ್ ಪ್ರೀಯರು!

ಅನುಷ್ಕಾ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಎಂಬುದು ಬಿಟ್ಟರೆ ಆಕೆಗೂ ಕ್ರಿಕೆಟ್ ಏನೇನೂ ಸಂಬಂಧವಿಲ್ಲ ಎಂಬುವುದು ಗೊತ್ತಿರುವ ವಿಚಾರ. ಆದರೆ ಶಿಷ್ಟಾಚಾರ ಮರೆತು ಟೀಂಇಂಡಿಯಾದಲ್ಲಿ ಆಕೆಗೆ ಸ್ಥಾನ ಕಲ್ಪಿಸಿರುವ ಬಿಸಿಸಿಐ ವಿರುದ್ಧ ಈಗ ಕ್ರಿಕೆಟ್ ಅಭಿಮಾನಿಗಳು ಸಿಡಿದುಬಿಟ್ಟಿದ್ದಾರೆ. ಹೌದು! ಕೇವಲ ಭಾರತ ಕ್ರಿಕೆಟ್ ತಂಡದ ಸದಸ್ಯರು ಇರಬೇಕಾದ ಫೋಟೋದಲ್ಲಿ ಅನುಷ್ಕಾ ಶರ್ಮಾ ಕೂಡ ಸೇರಿಕೊಂಡಿರುವುದು ಕ್ರಿಕೆಟ್ ಪ್ರೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಆಕೆಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ …

Read More »

ತಾನು ಅತ್ಯಾಚಾರ ಮಾಡಿದ ಹುಡುಗಿಯನ್ನೇ ಮದುವೆಯಾದ ಭಾರತದ ಆಟಗಾರ!

ನಾಲ್ಕು ತಿಂಗಳ ಹಿಂದೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸಂದರ್ಭ ಅತ್ಯಾಚಾರ ಆರೋಪಕ್ಕೆ ಒಳಗಾಗಿ ಕೊನೆಗೆ ಬಂಧನ ಭೀತಿಯಿಂದ  ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಖ್ಯಾತ ಆಟಗಾರನೊಬ್ಬ ಈಗ ಸಂತ್ರಸ್ತೆಯನ್ನೇ ಮದುವೆಯಾಗಿ ವಿವಾದಕ್ಕೆ ತೆರೆ ಎಳೆದಿದ್ದಾರೆ. ಟೇಬಲ್ ಟೆನ್ನಿಸ್ ನಲ್ಲಿ 2 ಬಾರಿ ಒಲಿಂಪಿಕ್ಸ್ ವಿನ್ನರ್ ಆಗಿದ್ದ ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ರ್ಯಾಂಕಿಂಗ್ ನಲ್ಲಿ 58ನೇ ಸ್ಥಾನಗಳಿಸಿದ್ದ ಭಾರತದ ಅತೀ ಕಿರಿಯ ಚಾಂಪಿಯನ್ 25 ವರ್ಷದ ಸೌಮ್ಯಜಿತ್ ಘೋಷ್ ವಿರುದ್ಧ ಕಳೆದ ಮಾರ್ಚ್ …

Read More »

[Video]’ಎಲ್ಲಿ ಹೋದ ನಿಮ್ಮ ವಿರಾಟ್ ಕೊಹ್ಲಿ?’; ಕಿಚಾಯಿಸುತ್ತಾ ಟೀಂ ಇಂಡಿಯಾಗೆ ಅವಮಾನಿಸಿದ ಇಂಗ್ಲೀಷರು!

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ಇಂಗ್ಲೆಂಡ್ ವಿರುದ್ಧ ವಿರೋಚಿತವಾಗಿ ಸೋತಿದ್ದರೂ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ನಿರ್ವಹಣೆ ತೋರಿ ದಾಖಲೆ ಮಾಡಿದ್ದರು. ಎರಡು ಇನ್ನಿಂಗಸ್ ನಲ್ಲಿ 200 ರನ್ ಗಳಿಸಿದ್ದ ಅವರು ಅತಿಥೇಯರ ಬೆವರಿಳಿಸಿದ್ದರು. ಇಡೀ ಪಂದ್ಯವನ್ನು ತಮ್ಮ ಹೆಗಲ ಮೇಲೆ ಹೊತ್ತು, ಇಂಗ್ಲೀಷರಿಗೆ ಪಂದ್ಯ ಸೋಲುವ ಭೀತಿ ಮೂಡಿಸಿದ್ದ ಕೊಹ್ಲಿ ಕೊನೆಗೆ ವಿಕೆಟ್ ಕಳೆದುಕೊಂಡಾಗ ಇಂಗ್ಲೆಂಡ್ ಪಂದ್ಯವನ್ನು ವಶಪಡಿಸಿಕೊಂಡಿತು. ಭಾರತ ಪಂದ್ಯ ಸೋತ ನಂತರ ಕ್ರೀಡಾಂಗಣದ …

Read More »

ಮತ್ತೆ ಭಾರತಕ್ಕಾಗಿ ಆಡಲಿರುವ ಮಾಜಿ ಕ್ರಿಕೆಟ್ ಕಪ್ತಾನ ಕಪಿಲ್ ದೇವ್!

ಹೌದು! ನೀವು ಕೇಳಿದ್ದು ಸರಿಯಾಗಿಯೇ ಇದೆ. ಆಟಗಾರರಿಗೆ ಜೀವನಪೂರ್ತಿ ನಿವೃತ್ತಿ ಎಂಬುದೇ ಇಲ್ಲ. 24 ವರ್ಷಗಳ ಹಿಂದೆ ಕ್ರಿಕೆ್ ನಿಂದ ನಿವೃತ್ತಿಯಾಗಿರುವ ಟೀಂ ಇಂಡಿಯಾ ಮಾಜಿ ಕಪ್ತಾನ ಈಗ ಮತ್ತೆ ಭಾರತವನ್ನು ಕ್ರೀಡೆಯಲ್ಲಿ ಪ್ರತಿನಿಧಿಸಲಿದ್ದಾರೆ. ಆದ್ರೆ ಈ ಬಾರಿ ಅದು ಬ್ಯಾಟ್, ಬಾಲ್ ಮೂಲಕ ಅಲ್ಲ. ಬದಲಾಗಿ ಗಾಲ್ಫ್ ಆಟಗಾರನಾಗಿ. ಈ ಅಕ್ಟೋಬರ್ ನಲ್ಲಿ ಜಪಾನ್ ನಲ್ಲಿ ನಡೆಯಲಿರುವ 2018ರ ಏಷ್ಯಾ ಫೆಸಿಫಿಕ್ ಹಿರಿಯರ ಗಾಲ್ಫ್ ಟೂರ್ನಿಯಲ್ಲಿ ಭಾಗವಹಿಸಲು ಕಪಿಲ್ …

Read More »

ಬ್ಯಾಟ್ಸ್ ಮನ್ ಸ್ಟ್ರೈಟ್ ಡ್ರೈವ್ ಹೊಡೆತಕ್ಕೆ ಮೈದಾನದಲ್ಲೇ ಕುಸಿದುಬಿದ್ದ ಬೌಲರ್‍! (ವೀಡಿಯೊ)

ಬೌಲರ್‍ನ  ಚೆನ್ನಾಗಿ ದಂಡಿಸಬೇಕು ಎನ್ನುವುದು ಬ್ಯಾಟ್ಸ್ ಮನ್ ಏಕಮಾತ್ರ ಉದ್ದೇಶ ಆಗಿರುತ್ತದೆ. ಅಂದರೆ ಹೆಚ್ಚು ರನ್ ಗಳಿಸಬೇಕು ಎಂಬುದು ಇದರರ್ಥ. ಆದರೆ ಬೌಲರ್ ಅನ್ನು ದಂಡಿಸಲೇಂದು ಬಾರಿಸಿದ ಚೆಂಡು ನಿಜವಾಗಿಯೂ ದಂಡಿಸಿದ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ. ಬೌಲರ್ ಎಸೆದ ಚೆಂಡನ್ನು ಬ್ಯಾಟ್ಸ್‍ ಮನ್‍ ಬೌಲರ್‍ನ ತಲೆಯ ಮೇಲೆ ಹಾದು ಹೋಗುವ ಸ್ಟ್ರೈಟ್‍ ಡ್ರೈವ್ ಮಾಡಿದ್ದಾರೆ. ಆದರೆ ಆ ಚೆಂಡು ತಲೆಗೆ ಬಲವಾಗಿ ಬಡಿದಿದ್ದರಿಂದ ಬೌಲರ್ ಮೈದಾನದಲ್ಲೇ ಕುಸಿದು ಬಿದ್ದ ಘಟನೆ …

Read More »

[Video]ತಮ್ಮ ಸಹೃದತೆಯಿಂದ ಮತ್ತೆ ಮನಗೆದ್ದ ಕೊಹ್ಲಿ; ಧೋನಿಯನ್ನೂ ಮೀರಿಸಿದ ವಿರಾಟ್ ನಡೆಗೆ ಭೇಷ್ ಎಂದ ನೆಟ್ಟಿಗರು!

ಕ್ರಿಕೆಟ್ ಜಗತ್ತಿನಲ್ಲಿ ವಿರಾಟ್ ತುಂಬಾ ಒರಟ, ಅಹಂಕಾರದ ವ್ಯಕ್ತಿತ್ವ ಎಂದೇ ಹೆಸರಾದವರು. ಮಾಜಿ ಕಪ್ತಾನ ಕ್ಯಾಪ್ಟನ್ ಕೂಲ್ ಧೋನಿಯಷ್ಟು ಶಾಂತಚಿತ್ತರಲ್ಲ.. ಪರಿಸ್ಥಿತಿಯನ್ನು ಅವರಷ್ಟು ನಾಜೂಕಾಗಿ ನಿಭಾಯಿಸಲು ಬರುವುದಿಲ್ಲ ಎನ್ನುವುದೇ ಕ್ರಿಕೆಟ್ ಜಗತ್ತಿನ ಅಂಬೋಣ. ಆದ್ರೆ ಅಭಿಮಾನಿಗಳೆಡೆಗೆ ಅವರು ತೋರುವ ಪ್ರೀತಿ ಮಾತ್ರ ಅನನ್ಯ. ಅವರಿಂದ ಆದಷ್ಟು ಅಭಿಮಾನಿಗಳ ಪ್ರೀತಿಗೆ ಸ್ಪಂದಿಸುತ್ತಾ ಅವರನ್ನು ಖುಷಿಪಡುತ್ತಾರೆ. ಇಂತಹುದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಮಂಗಳವಾರದಂದು ಇಂಗ್ಲೆಂಡ್ ನಲ್ಲಿ ನಿರ್ಣಾಯಕ ಏಕದಿನ ಪಂದ್ಯಕ್ಕಾಗಿ ಟೀಂ …

Read More »

[Video]ಕ್ರಿಕೆಟ್’ನ ಅತೀ ‘ಕೆಟ್ಟ ಶಾಟ್’; ಏನೋ ಮಾಡಲು ಹೋಗಿ ಮತ್ತೇನೋ ಆಯಿತು!

ಕ್ರಿಕೆಟ್ ನಲ್ಲಿ ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಕ್ರಿಕೆಟ್ ಮೈದಾನದಲ್ಲಿ ಮಾಡುವ ಚೇಷ್ಟೆಗಳು, ವಿಚಿತ್ರ ಬ್ಯಾಟಿಂಗ್, ಬೌಲಿಂಗ್ ಶೈಲಿಗಳು ಬಹಳ ಬೇಗನೆ ಅಭಿಮಾನಿಗಳನ್ನು ಸೆಳೆಯುತ್ತವೆ. ಶ್ರೀಲಂಕಾದಲ್ಲಿ ನಡೆದ ಕ್ಲಬ್ ಪಂದ್ಯವೊಂದರಲ್ಲಿ ಶ್ರೀಲಂಕಾ ಆಟಗಾರ ಚಾಮರ್ ಸಿಲ್ವಾ ಪ್ರದರ್ಶಿಸಲು ಹೋದ ವಿಶಿಷ್ಟ ಬ್ಯಾಟಿಂಗ್ ಶೈಲಿ ವಿಚಿತ್ರ ಮಾತ್ರವಲ್ಲ, ಕ್ರಿಕೆಟ್ ತಜ್ಞರಿಂದ ಅತೀ ಕೆಟ್ಟ ಶಾಟ್ ಎಂದು ಕರೆಸಿಕೊಂಡಿದೆ. ಅತಿ ಆತ್ಮವಿಶ್ವಾಸದಿಂದ ಈ ಕ್ರಿಕೆಟಿಗ ವಿಶೇಷತೆ ಪ್ರದರ್ಶಿಸಲು ಹೋಗಿ ತನ್ನ ವಿಕೆಟನ್ನು ತಾನೆ ಕಳೆದುಕೊಂಡಿದ್ದಾರೆ. …

Read More »

ಇವರನ್ನೂ ಅಭಿನಂದಿಸೋಣ; ಅಂಧರ ಟಿ20; ಶ್ರೀಲಂಕಾ ವಿರುದ್ಧ 10 ವಿಕೆಟ್ ಗಳ ಭರ್ಜರಿ ಗೆಲುವು; 4-1 ರಿಂದ ಸರಣಿ ಗೆದ್ದ ಭಾರತ!

ಭಾರತ ಮತ್ತೊಂದು ಅಂತರಾಷ್ಟ್ರೀಯ ಟಿ20 ಸರಣಿ ಗೆದ್ದಿದೆ. ಆದ್ರೆ ಈ ಬಾರಿ ಗೆದ್ದಿರುವುದು ವಿರಾಟ್ ಕೊಹ್ಲಿ ನೇತೃತ್ವದ ತಂಡವಲ್ಲ. ಬದಲಾಗಿ ಭಾರತದ ಹೆಮ್ಮೆಯ ಅಂಧರ ತಂಡ ಶ್ರೀಲಂಕಾ ವಿರುದ್ಧ 4 – 0 ಅಂತರದಿಂದ ಗೆದ್ದು ಸರಣಿಯನ್ನು ವಶಪಡಿಸಿಕೊಂಡಿದೆ. The Indian blind cricket team defeated Sri Lanka 4-1 in the #T20 bilateral series held at Colombo. pic.twitter.com/9wx4CwT5N5 — All India Radio …

Read More »

ನೀತಿಸಂಹಿತೆ ಉಲ್ಲಂಘನೆ; ಎಲ್ಲಾ ಮಾದರಿ ಕ್ರಿಕೆಟ್’ನಿಂದ ಸಸ್ಪೆಂಡ್ ಆದ ಕ್ರಿಕೆಟಿಗ!

ನೀತಿ ಸಂಹಿತೆ ಉಲ್ಲಂಘನೆ ಆಧಾರದ ಮೇಲೆ ಕಠಿಣ ಕ್ರಮ ಕೈಗೊಂಡಿರುವ ಕ್ರಿಕೆಟ್ ಬೋರ್ಡ್ ಶ್ರೀಲಂಕಾದ ಧನುಷ್ಕಾ ಗುಣತಿಲಕ ಅವರನ್ನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಕೊಲಂಬೋದಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ದಕ್ಷಿಣ ಆಫ್ರೀಕಾ ನಡುವಣ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಟೂರ್ನಿಯ ಎರಡನೇ ಮತ್ತು ಕೊನೆಯ ಪಂದ್ಯದ 3ನೇ ದಿನದಾಟದಲ್ಲಿ ಈ ಆದೇಶ ಹೊರಡಿಸಿದ್ದು, ತತ್ಕ್ಷಣ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ …

Read More »

Powered by keepvid themefull earn money