Breaking News
Home / ಜಿಲ್ಲಾ ಸುದ್ದಿ

ಜಿಲ್ಲಾ ಸುದ್ದಿ

ಮಂಗಳೂರು: ಏಷ್ಯನ್ ಪವರ್ ಲಿಫ್ಟಿಂಗ್ ವಿಜೇತರಿಗೆ ಅಭೂತಪೂರ್ವ ಸ್ವಾಗತ; ನಾವೂ ಅಭಿನಂದಿಸೋಣ!

ಕಜಕಿಸ್ತಾನದ ಆಲ್ಮಾಟಿಯಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಕ್ರೀಡಾಕೂಟದಲ್ಲಿ ಪದಕ ಗೆದ್ದು ದೇಶಕ್ಕೆ, ಊರಿಗೆ ಹೆಮ್ಮೆ ತಂದ ಪವರ್ ಲಿಫ್ಟರ್‌ಗಳಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ವರ್ಣ ಪದಕ ಗೆದ್ದ ಶರತ್ ಪೂಜಾರಿ, ಸತೀಶ್ ಖಾರ್ವಿ, ಸುಲೋಚನಾ, ಅರೆನ್ ಫೆರ್ನಾಂಡಿಸ್ ಮತ್ತು ಬರೋಬ್ಬರಿ ನಾಲ್ಕು ಬೆಳ್ಳಿಪದಕ ಪಡೆದ ದೀಪಾ ದೀಪಾ ಕೆ.ಎಸ್ ಅವರನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು. ಕೋಚ್ ಪ್ರದೀಪ್ …

Read More »

ಬೆಳ್ತಂಗಡಿ: ಶಾಲಾ ಬಾವಿಯ ನೀರು ಕುಡಿದ ಮಕ್ಕಳು ಅಸ್ವಸ್ಥ; ವಿಷ ಬೆರೆಸಿರುವ ಅನುಮಾನ!

ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲೆಯ 8 ಮಕ್ಕಳು ಶಾಲೆಯದೇ ಬಾವಿಯ ನೀರು ಕುಡಿದು ಅಸ್ವಸ್ಥರಾಗಿದ್ದು, ಅವರನ್ನು ಈಗ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ಆವರಣದಲ್ಲಿರುವ ಬಾವಿಯಿಂದ ನೀರು ಕುಡಿದ ಮಕ್ಕಳಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಲು ಪ್ರಾರಂಭಿಸಿದರು. ಚಿಕಿತ್ಸೆ ಬಳಿಕ ಮಕ್ಕಳು ಚೇತರಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಶಿಬಾಜೆಯ ಪೆರ್ಲ ದ.ಕ ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಯ ಬಾವಿಯಿಂದ ಮಕ್ಕಳು …

Read More »

ರಾತ್ರಿ ಟ್ರೋಫಿ ಗೆದ್ದು, ಬೆಳಿಗ್ಗೆ ಕುಡ್ಲದ ಪೊಣ್ಣನ ಜೊತೆ ಸಪ್ತಪದಿ ತುಳಿದ ಕ್ರಿಕೆಟರ್ ಮನೀಷ್ ಪಾಂಡೆ!

ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಟೀಮ್ ಇಂಡಿಯಾ ಆಟಗಾರ ಮನೀಶ್ ಪಾಂಡೆ ಇಂದು ಮಂಗಳೂರಿನ ಯುವತಿ ಆಶ್ರಿತಾ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ಪಾಂಡೆ ಸಪ್ತಪದಿ ತುಳಿದಿದ್ದು, ಮನೀಶ್ ಮದುವೆಯ ಫೋಟೋವನ್ನು ಮೊದಲು ಸನ್‍ರೈಸರ್ಸ್ ಹೈದರಾಬಾದ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಮಾಡುವೆ ಇನ್ನೂ ಎರಡು ದಿನ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ತುಳುನಾಡಿನ ಆಶ್ರಿತಾ 2012ರಲ್ಲಿ ‘ತೆಲಿಕೆದ ಬೊಳ್ಳಿ’ ತುಳು ಚಿತ್ರದ …

Read More »

ಉಡುಪಿ: ಪತ್ನಿ, ಮಕ್ಕಳನ್ನು ಭೀಕರವಾಗಿ ಕೊಂದು ನೇಣಿಗೆ ಶರಣಾದ ಪತಿ!

ತನ್ನ ಪತ್ನಿ ಮತ್ತು ಮಕ್ಕಳನ್ನು ಕೊಂದು ವ್ಯಕ್ತಿಯೊಬ್ಬರು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಹೆಬ್ರಿಯ ಗೋಳಿಯಂಗಡಿ ಬೆಳ್ವೆ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಮೃತಪಟ್ಟವರನ್ನು ಸೂರ್ಯನಾರಾಯಣ ಭಟ್ (50), ಪತ್ನಿ ಮಾನಸಿ (40), ಪುತ್ರರಾದ ಸುಧೀಂದ್ರ (14) ಸುಧೀಶ್ (8) ಎನ್ನಲಾಗಿದೆ. ಸೂರ್ಯನಾರಾಯಣ ಭಟ್ ಅತ್ಯಂತ ಭೀಕರವಾಗಿ ತನ್ನ ಕುಟುಂಬದ ಕೊಲೆ ಮಾಡಿದ್ದು, ಕಾರಣವಿನ್ನೂ ತಿಳಿದುಬಂದಿಲ್ಲ. ಮೊದಲು ಮೂವರಿಗೂ ವಿಷವಿಕ್ಕಿದ ಅವರು ನಂತರ ಕಬ್ಬಿಣದ ರಾಡ್ ನಿಂದ …

Read More »

ಮೇಳದ ಅವಹೇಳನ, ಅಗೌರವ, ಅಶಿಸ್ತಿನ ವರ್ತನೆಗಾಗಿ ಸೂಚನೆ ನೀಡಿಯೇ ಭಾಗವತರನ್ನು ದೂರ ಇಟ್ಟಿದ್ದೆವು; ಸಂಚಾಲಕರು!

ಕಟೀಲು ಯಕ್ಷಗಾನ ಮೇಳದಿಂದ ಪಟ್ಲ ಸತೀಶ್ ಶೆಟ್ಟಿ ಅವರಿಗೆ ಭಾಗವತಿಗೆ ಮಾಡಲು ನಿರಾಕರಣೆ ಮಾಡಿದ ಸಂಬಂಧ ವಿವಾದ ಹಬ್ಬಿರುವಂತೆಯೇ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಈಗ ಅದಕ್ಕೆಲ್ಲ ಸ್ಪಷ್ಟಣೆ ನೀಡಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು ‘ಪತ್ತನಾಜೆಯ ಕೊನೆಯ ಸೇವೆಯಾಟದ ಬಳಿಕ ಶುಕ್ರವಾರ ನಡೆದ ಪ್ರಸ್ತುತ ವರ್ಷದ ಆರಂಭಿಕ ಸೇವೆಯಾಟದ ವರೆಗೆ ಪಟ್ಲ ಸತೀಶ್‌ ಶೆಟ್ಟಿ ಅವರು ನನ್ನನ್ನು ಭೇಟಿಯಾಗಿಲ್ಲ. ಒಂದು ವರ್ಷದಿಂದ …

Read More »

ಉಡುಪಿ: ಆ ರವಿಶಾಸ್ತ್ರಿಗೂ ಈ ಕರ್ವಾಲು’ಗೂ ಎತ್ತಣಿಂದೆತ್ತ ಸಂಬಂಧ ಅಂತೀರಾ? ಇಲ್ಲಿದೆ ನೋಡಿ ಕಾರಣ!

ಭಾರತ ತಂಡದ ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ಕಾರ್ಕಳದಲ್ಲಿರುವ ಕರ್ವಾಲುನಲ್ಲಿರುವ ಮಹಾವಿಷ್ಣು ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದು ಭಾರೀ ಸುದ್ದಿಯಾಗಿತ್ತು. ಆದರೆ ಅದೆಲ್ಲೋ ಇರುವ ರವಿಶಾಸ್ತ್ರಿಗೂ ಇಷ್ಟು ಕುಗ್ರಾಮವೆಂದೇ ಕರೆಯಲ್ಪಡುವ ಹಳ್ಳಿಯ ದೇವಸ್ಥಾನಕ್ಕೂ ಏನು ಸಂಬಂಧ ಅವರು ಅಲ್ಲಗೇ ಬಂದು ಪೂಜೆ ಸಲ್ಲಿಸಲು ಇರುವ ಕಾರಣವೇನು ಬಲ್ಲಿರಾ? ಇದು ಮೊದಲ ಬಾರಿಯಲ್ಲ, ಪ್ರತಿವರ್ಷ ರವಿಶಾಸ್ತ್ರಿ ಮಹಾವಿಷ್ಣು ದೇವಸ್ಥಾನಕ್ಕೆ  ಭೇಟಿ ನೀಡಿ ಇಲ್ಲಿನ ನಾಗಸನ್ನಿಧಿಯಲ್ಲಿ ಪಂಚಾಮೃತ ಸೇವೆ ಮತ್ತು ವಿಶೇಷ ಪೂಜೆ ಸಲ್ಲಿಸುತ್ತಾರೆ. …

Read More »

ಪುತ್ತೂರು: ಅಜ್ಜ – ಮೊಮ್ಮಗಳನ್ನು ಭೀಕರವಾಗಿ ಕೊಲೆಗೈದ ಆರೋಪಿ ಅರೆಸ್ಟ್!

ಪುತ್ತೂರಿನ ಹೊಸಮಾರಿನಲ್ಲಿ ಸಾರ್ವಜನಿಕರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದ ಜೋಡಿ ಕೊಲೆ ಮತ್ತು ಮಹಿಳೆ ಮೇಲೆ ಭೀಕರ ಕೊಲೆ ಯತ್ನ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ 6 ಸಾವಿರ ರೂ ನಗದು ಮತ್ತು 30ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಅದೇ ಊರಿನ ಕಟ್ಟತ್ತಾರು ನಿವಾಸಿ 39 ವರ್ಷದ ಕರೀಂ ಖಾನ್ ಎಂದು ತಿಳಿದು ಬಂದಿದೆ. ಈತ ಕಳ್ಳತನ ನಡೆಸಲೆಂದು ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಕೊಗ್ಗು ಸಾಹೇಬ್ …

Read More »

‘ಗ್ರಹಣ’ದ ಬಗ್ಗೆ ಭಯ ಬಿಟ್ಟು ಜ್ಞಾನ ಹರಡಲು ಶಾಲೆ – ಶಾಲೆ ತಿರುಗುತ್ತಿರುವ ಉಡುಪಿಯ ನಿವೃತ್ತ ಮೇಷ್ಟ್ರು!

ಮಾನವ ಚಂದ್ರನಲ್ಲಿ ಕಾಲಿಟ್ಟರೂ, ಹಲವು ವೈಜ್ಞಾನಿಕ ಸತ್ಯಗಳನ್ನು ಓದಿ ತಿಳಿದುಕೊಂಡಿದ್ದರೂ ಇನ್ನೂ ಗ್ರಹಣ ಬಂತೆಂದೆರೆ ಸಾಕು, ಮಡಿ, ಮೈಲಿಗೆ, ಗ್ರಹಗತಿ ಹೀಗೆ ಜನ ಜ್ಯೋತಿಷ್ಯ, ಹೋಮ – ಹವನದ ಮೊರೆ ಹೋಗುವುದು ಸಾಮಾನ್ಯ. ಈ ಬಗ್ಗೆ ಹಲವಾರು ಅರಿವು ಹುಟ್ಟಿಸುವ ಕಾರ್ಯಕ್ರಮಗಳು ನಡೆದರೂ ಅದು ಜನರ ಮನ ಮುಟ್ಟುವುದಿಲ್ಲ. ಈಗ ಈ ರೀತಿ ಜನರ ಮನಸ್ಸಿಗೆ ಹಿಡಿದಿರುವ ‘ಗ್ರಹಣ’ವನ್ನು ಬಿಡಿಸಲು ಉಡುಪಿಯ ಭೌತಶಾಸ್ತ್ರಜ್ಞರೊಬ್ಬರು ತಮ್ಮ ಜೀವನ ಮುಡುಪಾಗಿಟ್ಟಿದ್ದಾರೆ. ಹೌದು! ಇವರು …

Read More »

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸ್ಕೇಟಿಂಗ್ ನಲ್ಲಿ ಗಿನ್ನಿಸ್ ದಾಖಲೆ ಬರೆದ ಕನ್ನಡದ ಕುವರಿ!

12 ವರ್ಷದ ಬಾಲೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೇವಲ 51 ಸೆಕೆಂಡ್ ನಲ್ಲಿ 400 ಮೀಟರ್ ಸ್ಕೇಟಿಂಗ್ ಮಾಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಮಕ್ಕಳ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಶಿರೂರು ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಓಜಲ್ ಎಸ್ ನಲವಡಿ ಎಂಬ ಬಾಲಕಿ ಈ ಸಾಧನೆ ಮಾಡಿದ್ದಾರೆ. ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿ ವಿಕ್ಟರ್ ಫೆನೆಸ್ ಇದನ್ನು ದಾಖಲಿಸಿಕೊಂಡರು. …

Read More »

ತನ್ನದೇ ಆಟೋವನ್ನು ನದಿಗೆ ತಳ್ಳಿದ ಭೂಪ; ಕಾರಣವಾದರೂ ಏನು?

ಕೊಡಗಿನ ಕೊಪ್ಪ ಬಳಿ ಆಟೊ ಚಾಲಕನೊಬ್ಬ ತನ್ನದೇ ವಾಹನವನ್ನು ಸೇತುವೆ ಮೇಲಿಂದ ಕಾವೇರಿ ನದಿಗೆ ತಳ್ಳಿನಜಾಗ ಖಾಲಿ ಮಾಡಿದ್ದಾನೆ. ಈತನ ಈ ಕೃತ್ಯದ ಹಿಂದಿನ ಕಾರಣವಾದರೂ ಏನು? ದಿನನಿತ್ಯ ಈ ಸ್ಥಳದಲ್ಲಿ ಸ್ನಾನಕ್ಕೆ ಹಾಗೂ ಬಟ್ಟೆ ಒಗೆಯಲು ಸ್ಥಳೀಯರು ಆಗಮಿಸುತ್ತಿದ್ದರು. ಆದರೆ ಈ ಚಾಲಕನ ಹುಚ್ಚಾಟದ ಸಂದರ್ಭ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಆಟೊ ಸಂಪೂರ್ಣ ನಜ್ಜುಗುಜ್ಜಾಗಿದೆ. ಗುಡ್ಡೇನಹಳ್ಳಿಯ ಆಟೊರಿಕ್ಷಾ ಚಾಲಕ ಮಂಜು ಶನಿವಾರ ಬೆಳಗ್ಗೆ …

Read More »