Breaking News
Home / ಧಾರ್ಮಿಕ

ಧಾರ್ಮಿಕ

ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗುವ ವಿಶಿಷ್ಟ ಶಿವ ದೇವಸ್ಥಾನ; ದರ್ಶನ ಪಡೆಯುವುದು ಹೇಗೆ ಗೊತ್ತೇ?

ಭಾರತದಲ್ಲಿ ಅಗೆದಷ್ಟೂ, ಬಗೆದಷ್ಟೂ ಹಲವು ವೈಚರೀತ್ಯಗಳೂ ಕಾಣಸಿಗುತ್ತಿರುತ್ತವೆ. ದೇವಳಗಳ ಬೀಡಾದ ಭಾರತದಲ್ಲಿ ಕೆಲವೊಂದು ಸ್ಥಳಗಳು ಹೇಗೆ ಉದ್ಭವವಾದವು? ಇನ್ನೂ ಹೇಗೆ ಉಳಿದಿವೆ ಎನ್ನುವುದೇ ಒಂದು ವಿಚಿತ್ರ. ಅಂತಹುದೇ ಒಂದು ಅದ್ಭುತ ಶಿವನ ದೇವಸ್ಥಾನ ಸಮುದ್ರದ ಮಧ್ಯದಲ್ಲಿದ್ದು, ಭಕ್ತರು ದರ್ಶನ ಪಡೆಯಲೆಂದೇ ಏನೋ ಕೆಲವೊಂದು ಬಾರಿ ಅಲೆಗಳನ್ನು ಮೀರಿ ಭಕ್ತರು ದರ್ಶನ ಪಡೆಯಲು ಅನುವು ಮಾಡಿಕೊಡುತ್ತದೆ ಮತ್ತು ಕೆಲವೇ ಗಂಟೆಗಳಲ್ಲಿ ನಾವು ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗಿಬಿಡುತ್ತದೆ. ಗುಜರಾತಿನ ಭಾವನಗರದಲ್ಲಿರುವ ಕೊಲಿಯಲ್ …

Read More »

ಇಲ್ಲಿದೆ ನೋಡಿ ಬೆಕ್ಕಿನ ದೇವಸ್ಥಾನ; ಕರ್ನಾಟಕದಲ್ಲಿರುವ ಈ ಊರಲ್ಲಿ ಬೆಕ್ಕು ಶುಭಸೂಚಕ ಅಷ್ಟೇ ಅಲ್ಲ ಪೂಜನೀಯವೂ ಅಂತೆ!

ಭಾರತವು ವೈವಿಧ್ಯತೆಗೆ ಹೆಸರುವಾಸಿದುದು, ಒಂದೊಂದು ಊರಲ್ಲಿ ಒಂದೊಂದು ಪದ್ಧತಿ, ಒಂದೊಂದು ರೀತಿ ನೇಮ ನಿಯಮಗಳು ಪಾಲಿಸಲ್ಪಡುತ್ತದೆ. ಇನ್ನು ಕೇವಲ ಕರ್ನಾಟಕದಲ್ಲೇ ನೂರಾರು ಬಗೆಯ ವಿಶೇಷತೆಗಳನ್ನು ನಾವು ಕಾಣಬಹುದು. ನಮ್ಮ ದೇಶದಲ್ಲಿ ಪ್ರಾಣಿ – ಪಕ್ಷಿಗಳನ್ನು ಪೂಜಿಸುತ್ತಾರೆ ಎಂದಬುಸು ನಮಗೆ ಗೊತ್ತಿರುವ ಸಂಗತಿಯೇ. ಆದರೆ ಬೆಕ್ಕಿಗೂ ಒಂದು ದೇವಸ್ಥಾನವಿದೆ ಎಂಬ ಸಂಗತಿ ನಿಮಗೆ ಗೊತ್ತಿದೆಯೇ? ಬೆಕ್ಕು ಕೆಟ್ಟ ಶಕುನ ಎಂಬ ಮೂಢನಂಬಿಕೆ ನಮ್ಮಲ್ಲಿದೆ. ಅಂತಹುದರಲ್ಲಿ ಈ ಊರಲ್ಲಿ ಬೆಕ್ಕನ್ನು ಶುಭಶಕುನ ಎಂದು …

Read More »

ಪುತ್ತೂರಿನ ಪಂಚಮುಖಿ ಆಂಜನೇಯ ದೇವಸ್ಥಾನ; ಸಂಪೂರ್ಣ ರಾಮಾಯಣದ ಅನುಭವ ಪಡೆಯಲು ಒಮ್ಮೆ ಭೇಟಿ ನೀಡಿ!

ಕರಾವಳಿ ಹತ್ತು ಹಲವು ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಹೆಸರಾಗಿದೆ. ಇಲ್ಲಿನ ಹಲವು ದೇವಸ್ಥಾನಗಳಲ್ಲಿ ದೈವೀ ಶಕ್ತಿಯಿದೆ, ಭಕ್ತಿಯಿಂದ ಕೇಳಿಕೊಂಡರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಅದರಲ್ಲಿ ಒಂದು ದೇವಸ್ಥಾನ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿರುವ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನ. ವಿಶಾಲವಾದ ಪ್ರದೇಶದಲ್ಲಿರುವ ಈ ದೇವಸ್ಥಾನದ ಒಳಹೊಕ್ಕ ಕೂಡ ಮೈಮನಸ್ಸು ಪುಳಕಿತಗೊಳ್ಳುತ್ತದೆ. ಈ ದೇವಸ್ಥಾನದ ವಿಶೇಷವೆಂದರೆ ಇಲ್ಲಿರುವ ಶಿಲ್ಪ, ಕಲ್ಲು, ಮಂಟಪಗಳು ನಮ್ಮನ್ನು ರಾಮಾಯಣದ ಕಾಲಕ್ಕೆ ಎಳೆದೊಯ್ದು …

Read More »

Viral Video: ಥೆಯ್ಯ೦ ಪಾತ್ರಧಾರಿಯಿಂದ ಜನರಿಗೆ ಚಾಟಿಯೇಟು; ಮಾನವ ಹಕ್ಕು ಆಯೋಗದಿಂದ ಕೇಸು; ಭಕ್ತರ ವಿರೋಧ!

ಮಾನವ ಹಕ್ಕುಗಳ ಉಲ್ಲಂಘನೆಯನ್ನು ದೇವರು ಮಾಡಿದರೂ ಅದು ತಪ್ಪೇ ಎನ್ನುತ್ತಿದೆ ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ. ಇಷ್ಟಕ್ಕೂ ಕೇಸು ದಾಖಲಾಗಿರುವುದು ದೇವರ ಪಾತ್ರಧಾರಿ ಮೇಲೆ ಎಂಬುದು ಗಮನಾರ್ಹ ಅಂಶ. ದೇವರಿಗಿಂತ ಹೆಚ್ಚಾಗಿ ದೈವ, ಭೂತಗಳ ಆರಾಧನೆ ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ನಡೆಯುತ್ತದೆ. ಭಕ್ತರು ಈ ದೈವಗಳನ್ನು ಭಯ – ಭಕ್ತಿಯಿಂದ ನಂಬುತ್ತಾರೆ. ಅದಕ್ಕೆ ಸ್ವಲ್ಪ ಅಪಚಾರವಾದರೂ ಸಹಿಸುವುದಿಲ್ಲ. ಆದರೆ ಈಗ ಅದೇ ದೈವದ ಪಾತ್ರಧಾರಿ ಜನರಿಗೆ ಚಾಟಿಯಿಂದ …

Read More »

ಈ ಮಂದಿರದಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ; ಆದರೆ ಪೂಜೆ ನಡೆಯುತ್ತದೆ ಈ ‘ವಿಶಿಷ್ಟ ಶಕ್ತಿ’ಗೆ!

ದೇವಸ್ಥಾನವೆಂದರೆ ಅಲ್ಲಿ ದೇವರ ವಿಗ್ರ ಇರುತ್ತದೆ, ಅದಕ್ಕೆ ಅಲಂಕಾರ ಮಾಡಿ ಪೂಜೆ – ಪುನಸ್ಕಾರಗಳು ನಡೆಯುತ್ತಾ ಇರುತ್ತವೆ. ಆದರೆ ದೇವಸ್ಥಾನಗಳ ತವರೂರಾದ ಭಾರತದಲ್ಲಿ ಹಲವು ವಿಶಿಷ್ಟ, ವಿಚಿತ್ರ, ರಹಸ್ಯ ಮಂದಿರಗಳಿವೆ. ಅಂಥಹುದೇ ಒಂದು ವಿಶಿಷ್ಟ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ; ಈ ಮಂದಿರದ ಹೆಸರು ‘ಜ್ವಾಲಾ ಮಂದಿರ’ ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ. ಇಲ್ಲಿ ಜ್ವಾಲಾ ಎನ್ನುವ ದೇವಿಗೆ ಪೂಜೆ ನಡೆಯುತ್ತದೆ. ಜ್ವಾಲಾ ದೇವಿ …

Read More »

ವರ್ಷದ 6 ತಿಂಗ್ಳು ಮಾತ್ರ ತೆರೆದಿರುತ್ತದೆ ಅದ್ವಿತೀಯ ಶಕ್ತಿಯ ಈ ‘ನೆಲ್ಲಿತೀರ್ಥ ಗುಹಾಲಯ’; ಭೇಟಿ ನೀಡಲೇಬೇಕಾದ ಪುಣ್ಯಸ್ಥಳವಿದು!

ದಕ್ಷಿಣ ಕನ್ನಡ ಹತ್ತು ಹಲವು ಶಕ್ತಿಯುತ ದೇವಾಲಯಗಳ ಸಂಗಮ. ಈ ಪ್ರದೇಶವು ತನ್ನ ವೈಶಿಷ್ಟ್ಯಗಳಿಂದ ಜಗತ್ತಿನಲ್ಲಿ ತನ್ನದೇ ಆದ ಒಂದು ಹೆಸರು ಪಡೆದಿದೆ. ತುಳುನಾಡನ್ನು ಆಳುತ್ತಿದ್ದ ಹೆಚ್ಚಿನ ಅರಸರುಗಳು ಸೋಮನಾಥನ ಭಕ್ತರಾಗಿದ್ದರು. ಹಾಗಾಗಿ ಇಲ್ಲಿ ಈಶ್ರನ ಹಲವಾರು ದೇವಸ್ಥಾನಗಳನ್ನು ನಾವು ಕಾಣಬಹುದು. ಇದರಲ್ಲಿ ಒಂದಿ ನೆಲ್ಲಿತೀರ್ಥ ಸೋಮನಾಥ ಗುಹಾಲಯ. ಬೃಹತ್ ಮೊಸಳೆಯೊಂದು ಬಾಯ್ತೆರೆದು ಮಲಗಿದಂತೆ ಪ್ರಥಮ ನೋಟಕ್ಕೆ ಕಾಣುವ ಗುಹಾಲಯ ವರ್ಷದಲ್ಲಿ ಕೇವಲ 6 ತಿಂಗಳು ಅಂದ್ರೆ ಅಕ್ಟೋಬರ್ ನಿಂದ …

Read More »

ಅಯ್ಯೋ! ಶಬರಿಮಲೆಗೆ ಹೋಗುವ ಅಯ್ಯಪ್ಪ ಭಕ್ತರ ಬಗ್ಗೆ ಕೇಂದ್ರ ಸಚಿವರು ಹೀಗೆ ಹೇಳ್ಬೋದಾ?

ಶಬರಿಮಲೆ ಅಯ್ಯಪ್ಪ ದೇವಳ… ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಪವಿತ್ರ ಕ್ಷೇತ್ರ. ಮಹಿಳೆಯರಿಗೆ ಪ್ರವೇಶ ಬೇಕೇ? ಬೇಡವೇ? ಎಂಬ ಚರ್ಚೆ ಜೊತೆಗೆ ಈ ಬರಿ ಮಹಿಳೆಯರಿಗೆ ಪ್ರವೇಶವನ್ನೂ ಕಲ್ಪಿಸಿಲ್ಲ. ಈ ಎಲ್ಲದರ ಮಧ್ಯೆ ಅಂತಹ ಕ್ಷೇತ್ರದ ಬಗ್ಗೆ ಈಗ ಕೇಂದ್ರ ಸಚಿವರೊಬ್ಬರು ಅತ್ಯಂತ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ‘ಕೇರಳದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವವರೆಲ್ಲ ನಿಜವಾದ ಭಕ್ತರೇ ಅಲ್ಲ. ಅವರೆಲ್ಲಾ ನಗರದ ನಕ್ಸಲರಿದ್ದಂತೆ ಮತ್ತು ಅವರೆಲ್ಲ ಅರಾಜಕತವಾದಿಗಳು ಹಾಗೂ …

Read More »

ಪ್ರಚಾರಕ್ಕಾಗಿ ಶಬರಿಮಲೆ ಪ್ರವೇಶ ಬೇಡ; ಮಹಿಳೆಯರಿಗೆ ಸರ್ಕಾರದ ವಿಶೇಷ ರಕ್ಷಣೆ ಇಲ್ಲ; ಕೇರಳ ಸಚಿವ!

ಶಬರಿಮಲೆಗೆ ಬರುವ ಮಹಿಳೆಯರಿಗೆ ಸರ್ಕಾರದ ಕಡೆಯಿಂದ ಯಾವುದೇ ರಕ್ಷಣೆ ನೀಡುವುದಿಲ್ಲ. ಈ ಹಿಂದೆಯೂ ನೀಡಿಲ್ಲ ಮುಂದೆಯೂ ನೀಡುವುದಿಲ್ಲ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸ್ಪಷ್ಟಪಡಿಸಿದ್ದಾರೆ. ಇನ್ನು ಅಲ್ಲಿಗೆ ಹೋಗಲು ಇಚ್ಚಿಸುವ ಮಹಿಳೆಯರು ಸುಪ್ರೀಂ ಕೋರ್ಟ್ ಆದೇಶವನ್ನಿಟ್ಟುಕೊಂಡು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಂಡು ಹೋಗಬೇಕು ಎಂದವರು ಹೇಳಿದ್ದಾರೆ. ಶಬರಿಮಲೆ ಭಕ್ತಿಯಿಂದ ಹೋಗುವವರಿಗೆ ಇರುವ ಸ್ಥಳವೇ ಹೊರತು ಇಲ್ಲಿ ಯಾವುದೇ ಕ್ರಿಯವಾದ ನಡೆಯುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತಾಡಿದ …

Read More »

ಶಬರಿಮಲೆಯ ಆ 18 ಮೆಟ್ಟಿಲುಗಳ ವಿಶೇಷತೆ ಬಲ್ಲಿರಾ? ಅಯ್ಯಪ್ಪ ಭಕ್ತರು ತಿಳ್ಕೊಳ್ಳೆಬೇಕಾದ ಮಹತ್ವದ ಸಂಗತಿಯಿದು!

ಕೇರಳದ ಪತ್ತಂತಿಟ್ಟ ಜಿಲ್ಲೆಯ ಬೆಟ್ಟದ ಮೇಲಿರುವ ಸ್ವಾಮಿ ಅಯ್ಯಪ್ಪನ ಖ್ಯಾತಿ ವಿಶ್ವವಿಖ್ಯಾತ. ಈ ದೇವಸ್ಥಾನಕ್ಕೆ ಕೇರಳ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಅತಿ ಹೆಚ್ಚು ಸಂಖ್ಯೆಯ ಭಕ್ತರು ಬರುವುದುಂಟು. ದೇಶ ಮತ್ತು ವಿದೇಶಗಳ ಭಕ್ತರೂ ಇಲ್ಲಿಗೆ ಬರುತ್ತಾರೆ. ದಟ್ಟ ಕಾನನದಲ್ಲಿರುವ ಈ ಪುರಾತನ ದೇವಾಲಯ ನಿರ್ಮಾಣಗೊಂಡ ಮೊದಲ ಮೂರು ಶತಮಾನಗಳ ಕಾಲ ದರ್ಶನಕ್ಕೆ ಅಲಭ್ಯವಾಗಿಯೇ ಉಳಿದಿತ್ತು. 12ನೇ ಶತಮಾನದ ಪಂದಳಂ ರಾಜ ಮಣಿಕಂದನ್‌ ಶಬರಿಮಲೆ ದೇವಸ್ಥಾನದ ಪಥವನ್ನು ಮರಳಿ ಕಂಡು …

Read More »

ಸ್ತ್ರೀ ರೂಪದಲ್ಲಿರುವ ಈ ಆಂಜನೇಯ ಸರ್ವರೋಗ ನಿವಾರಕನಂತೆ; ಒಮ್ಮೆ ಭೇಟಿ ನೀಡಲೇಬೇಕಾದ ಪುಣ್ಯಸ್ಥಳ!

ಪ್ರತೀ ಶನಿವಾರ ಆಂಜನೇಯನನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುತ್ತಾರೆ. ಬ್ರಹಮಚಾರಿಯಾದ ಭಜರಂಗಿಯನ್ನು ಮಹಾನ್ ಶಕ್ತಿಶಾಲಿ ಎನ್ನುತ್ತಾರೆ, ಸಾಮಾನ್ಯವಾಗಿ ಮದುವೆಯಾಗದ ಬ್ರಹ್ಮಚಾರಿಗಳು ಹನುಮಂತನನ್ನು ಹೆಚ್ಚಾಗಿ ಆರಾಧಿಸುತ್ತಾರೆ. ಆದರೇ ಅದೇ ಹನುಮ ದೇವ ಸ್ತ್ರೀ ರೂಪದಲ್ಲಿದ್ದರೇ? ವಿಶ್ವದಲ್ಲೇ ಮಹಿಳೆಯ ರೂಪದಲ್ಲಿರುವ ಏಕೈಕ ಭಜರಂಗಿ ದೇವಸ್ಥಾನ ಎಂಬ ಖ್ಯಾತಿಯ ಈ ದೇವಸ್ಥಾನ ಛತ್ತೀಸ್ ಗಢದ ರತನ್ ಪುರ್ ಗ್ರಾಮದ ಗಿರಿಜಾಬಂಧ್ ಎಂಬಲ್ಲಿದೆ. ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ಸರ್ವರೋಗಗಳಿಗೂ ಪರಿಹಾರ ದೊರೆಯುತ್ತದೆ ಎಂಬುದು …

Read More »