Breaking News
Home / ಪ್ರವಾಸ

ಪ್ರವಾಸ

ಈ ಮಂದಿರದಲ್ಲಿ ದೇವರ ಮೂರ್ತಿ ಇಲ್ಲ, ಫೋಟೋ ಇಲ್ಲ; ಆದರೆ ಪೂಜೆ ನಡೆಯುತ್ತದೆ ಈ ‘ವಿಶಿಷ್ಟ ಶಕ್ತಿ’ಗೆ!

ದೇವಸ್ಥಾನವೆಂದರೆ ಅಲ್ಲಿ ದೇವರ ವಿಗ್ರ ಇರುತ್ತದೆ, ಅದಕ್ಕೆ ಅಲಂಕಾರ ಮಾಡಿ ಪೂಜೆ – ಪುನಸ್ಕಾರಗಳು ನಡೆಯುತ್ತಾ ಇರುತ್ತವೆ. ಆದರೆ ದೇವಸ್ಥಾನಗಳ ತವರೂರಾದ ಭಾರತದಲ್ಲಿ ಹಲವು ವಿಶಿಷ್ಟ, ವಿಚಿತ್ರ, ರಹಸ್ಯ ಮಂದಿರಗಳಿವೆ. ಅಂಥಹುದೇ ಒಂದು ವಿಶಿಷ್ಟ ದೇವಸ್ಥಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ; ಈ ಮಂದಿರದ ಹೆಸರು ‘ಜ್ವಾಲಾ ಮಂದಿರ’ ಇದು ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜ್ವಾಲಾಮುಖಿ ಎನ್ನುವ ಪ್ರದೇಶದಲ್ಲಿದೆ. ಇಲ್ಲಿ ಜ್ವಾಲಾ ಎನ್ನುವ ದೇವಿಗೆ ಪೂಜೆ ನಡೆಯುತ್ತದೆ. ಜ್ವಾಲಾ ದೇವಿ …

Read More »

ವರ್ಷದ 6 ತಿಂಗ್ಳು ಮಾತ್ರ ತೆರೆದಿರುತ್ತದೆ ಅದ್ವಿತೀಯ ಶಕ್ತಿಯ ಈ ‘ನೆಲ್ಲಿತೀರ್ಥ ಗುಹಾಲಯ’; ಭೇಟಿ ನೀಡಲೇಬೇಕಾದ ಪುಣ್ಯಸ್ಥಳವಿದು!

ದಕ್ಷಿಣ ಕನ್ನಡ ಹತ್ತು ಹಲವು ಶಕ್ತಿಯುತ ದೇವಾಲಯಗಳ ಸಂಗಮ. ಈ ಪ್ರದೇಶವು ತನ್ನ ವೈಶಿಷ್ಟ್ಯಗಳಿಂದ ಜಗತ್ತಿನಲ್ಲಿ ತನ್ನದೇ ಆದ ಒಂದು ಹೆಸರು ಪಡೆದಿದೆ. ತುಳುನಾಡನ್ನು ಆಳುತ್ತಿದ್ದ ಹೆಚ್ಚಿನ ಅರಸರುಗಳು ಸೋಮನಾಥನ ಭಕ್ತರಾಗಿದ್ದರು. ಹಾಗಾಗಿ ಇಲ್ಲಿ ಈಶ್ರನ ಹಲವಾರು ದೇವಸ್ಥಾನಗಳನ್ನು ನಾವು ಕಾಣಬಹುದು. ಇದರಲ್ಲಿ ಒಂದಿ ನೆಲ್ಲಿತೀರ್ಥ ಸೋಮನಾಥ ಗುಹಾಲಯ. ಬೃಹತ್ ಮೊಸಳೆಯೊಂದು ಬಾಯ್ತೆರೆದು ಮಲಗಿದಂತೆ ಪ್ರಥಮ ನೋಟಕ್ಕೆ ಕಾಣುವ ಗುಹಾಲಯ ವರ್ಷದಲ್ಲಿ ಕೇವಲ 6 ತಿಂಗಳು ಅಂದ್ರೆ ಅಕ್ಟೋಬರ್ ನಿಂದ …

Read More »

ಚಿಕ್ಕಮಗಳೂರಿನಲ್ಲೊಂದು ಮಾನವ ನಿರ್ಮಿತ ಸುಂದರ ಸರೋವರ… ಒಮ್ಮೆ ಭೇಟಿ ನೀಡಿ

ಚಿಕ್ಕಮಗಳೂರಿನಲ್ಲಿ ಮುಳ್ಳಯ್ಯನಗಿರಿ ಬೆಟ್ಟಗಳ ತಪ್ಪಲಿನಲ್ಲಿ ಹಿರೆಕೊಳಲೆ ಎಂಬ ಪ್ರಶಾಂತವಾದ ಮನ ಸೂರೆಗೊಳಿಸುವ ಸರೋವರವಿದೆ. ಸರೋವರದ ಸುತ್ತ ಪಶ್ಚಿಮ ಘಟ್ಟಗಳ ಬೃಹತ್ ಪರ್ವತಗಳ ಅಲಂಕಾರವು ಇದರ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಾನವ ನಿರ್ಮಿತ ಸರೋವರವು ಚಿಕ್ಕಮಗಳೂರಿನಿಂದ 10 ಕಿ.ಮೀ ಮತ್ತು ಕೆಮ್ಮಣ್ಣುಗುಂಡಿಯಿಂದ 50 ಕಿ.ಮೀ ದೂರದಲ್ಲಿದೆ. ಚಿಕ್ಕಮಗಳೂರು ಪಟ್ಟಣಕ್ಕೆ ಕುಡಿಯುವ ನೀರು ಮತ್ತು ಹತ್ತಿರದ ಹಳ್ಳಿಗಳಿಗೆ ನೀರಾವರಿಯನ್ನು ಇಲ್ಲಿಂದ ಪೂರೈಸುವುದಕ್ಕಾಗಿ ನಿರ್ಮಿಸಲಾಗಿದೆ. ಬೆಂಗಳೂರಿನಿಂದ 250 ಕಿಲೋಮೀಟರ್ ದೂರದಲ್ಲಿರುವ ಈ ಸರೋವರದ …

Read More »

ನಮ್ಮದೇ ದೇಶದಲ್ಲಿರುವ ಈ ದೆವ್ವಗಳ ಊರಿನ ಬಗ್ಗೆ ನಿಮಗ್ಗೊತ್ತಾ? ಇಲ್ಲಿವೆ ಭಯಾನಕ ರಹಸ್ಯಗಳ ಭಂಡಾರ!

ಪ್ರಪಂಚದಲ್ಲಿ ನಮಗೇ ಗೊತ್ತಿರದಂತೆ ಹಲವು ಚಿತ್ರ – ವಿಚಿತ್ರ ಪ್ರದೇಶಗಳು ಅದರ ಹಿಂದೆ ನಾವು ಊಹಿಸದೇ ಇರುವ ಕಥೆ, ಇತಿಹಾಸ, ಹಿನ್ನೆಲೆಗಳಿರುತ್ತವೆ. ಅದನ್ನು ಕೆದಕುತ್ತಾ ಹೋದರೆ ರಹಸ್ಯಗಳ ಭಂಡಾರವೇ ತೆರೆಯುತ್ತದೆ. ಈಗ ಅಂತಹದ್ದೇ ಒಂದು ಊರಿನ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಅದೊಂದು ಊರು ದೂರದಿಂದ ನೋಡಿದರೆ ತುಂಬಾ ಸುಂದರವಾಗಿ ಕಾಣುತ್ತದೆ, ಆದರೆ ರಾತ್ರಿ ಬಿಡಿ, ಹಚ್ಚ ಹಗಲು ಹೊತ್ತಿನಲ್ಲೂ ಅದರ ಬಳಿ ಸುಳಿಯಲು ಜನ ಹೆದರುತ್ತಾರೆ. ಇದರ ಸುತ್ತಲೂ …

Read More »

ಸ್ತ್ರೀ ರೂಪದಲ್ಲಿರುವ ಈ ಆಂಜನೇಯ ಸರ್ವರೋಗ ನಿವಾರಕನಂತೆ; ಒಮ್ಮೆ ಭೇಟಿ ನೀಡಲೇಬೇಕಾದ ಪುಣ್ಯಸ್ಥಳ!

ಪ್ರತೀ ಶನಿವಾರ ಆಂಜನೇಯನನ್ನು ಪೂಜಿಸಿದರೆ ಇಷ್ಟಾರ್ಥಗಳು ನೆರವೇರುತ್ತದೆ ಎನ್ನುತ್ತಾರೆ. ಬ್ರಹಮಚಾರಿಯಾದ ಭಜರಂಗಿಯನ್ನು ಮಹಾನ್ ಶಕ್ತಿಶಾಲಿ ಎನ್ನುತ್ತಾರೆ, ಸಾಮಾನ್ಯವಾಗಿ ಮದುವೆಯಾಗದ ಬ್ರಹ್ಮಚಾರಿಗಳು ಹನುಮಂತನನ್ನು ಹೆಚ್ಚಾಗಿ ಆರಾಧಿಸುತ್ತಾರೆ. ಆದರೇ ಅದೇ ಹನುಮ ದೇವ ಸ್ತ್ರೀ ರೂಪದಲ್ಲಿದ್ದರೇ? ವಿಶ್ವದಲ್ಲೇ ಮಹಿಳೆಯ ರೂಪದಲ್ಲಿರುವ ಏಕೈಕ ಭಜರಂಗಿ ದೇವಸ್ಥಾನ ಎಂಬ ಖ್ಯಾತಿಯ ಈ ದೇವಸ್ಥಾನ ಛತ್ತೀಸ್ ಗಢದ ರತನ್ ಪುರ್ ಗ್ರಾಮದ ಗಿರಿಜಾಬಂಧ್ ಎಂಬಲ್ಲಿದೆ. ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ಸರ್ವರೋಗಗಳಿಗೂ ಪರಿಹಾರ ದೊರೆಯುತ್ತದೆ ಎಂಬುದು …

Read More »

ನಾಗಾರಾಧನೆಯ ಶ್ರೀಕ್ಷೇತ್ರ ‘ಕುಡುಪು ಅನಂತ ಪದ್ಮನಾಭ ದೇವಸ್ಥಾನ’; ಇಲ್ಲಿಗೆ ‘ಕುಡುಪು’ ಎಂಬ ಹೆಸರು ಯಾಕೆ ಬಂತು ಗೊತ್ತೇ?

ದಕ್ಷಿಣ ಕನ್ನಡ ಜಿಲ್ಲೆ ಹಲವು ದೇವಳಗಳ ಬೀಡು… ಇಲ್ಲಿ ದೈವಾರಾಧನೆ, ನಾಗಾರಾಧನೆಗೆ ವಿಶೇಷ ಸ್ಥಾನವಿದೆ. ನಾಗನನ್ನು ಕುಟುಂಬದ ಒಂದು ದೈವ ಶಕ್ತಿಯೆಂದು ಪೂಜಿಸುವ ಪರಂಪರೆ ಕರಾವಳಿಗರ ವೈಶಿಷ್ಟ್ಯ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗ ದೇವತೆಗಳ ದೇವಸ್ಥಾನಗಳಲ್ಲಿ ಶ್ರೀ ಕ್ಷೇತ್ರ ಸುಭ್ರಮಣ್ಯ ಮೊದಲನೇ ಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನ ಶ್ರೀ ಕ್ಷೇತ್ರ ಕುಡುಪುವಿಗೆ ಸಲ್ಲುತ್ತದೆ. ನಾಗದೇವರ ಸಕಲ ಶಾಪಗಳಿಗೂ, ದೋಷಗಳಿಗೂ ಈ ಕ್ಷೇತ್ರದಲ್ಲಿ ಪರಿಹಾರವಿದ್ದು ನಿತ್ಯವು ನೂರಾರು ಜನರು ದೇವರ …

Read More »

ಹತ್ತೂರ ಭಕ್ತರನ್ನು ತನ್ನ ಶಕ್ತಿಯಿಂದ ಪೊರೆಯುತ್ತಿರುವ ಕಾರ್ಣಿಕ ಕ್ಷೇತ್ರ ‘ಪಣೋಲಿಬೈಲಿ’ನ ಬಗ್ಗೆ ನಿಮಗೆಷ್ಟು ಗೊತ್ತು?

ದಕ್ಷಿಣ ಕನ್ನಡದ ಸುತ್ತಮುತ್ತಲಿನ ಜನರಿಗೆ ಯಾವುದೇ ಪರಿಹರಿಸಲಾಗದ ಸಮಸ್ಯೆ ಉಂಟಾದರೆ ಥಟ್ಟನೆ ಹೇಳುವ ಮಾತು ‘ಪಣೋಲಿಬೈಲಿನ ಕಲ್ಲುರ್ಟಿಗೊಂದು ಅಗೆಲು ಕೊಡುತ್ತೇವೆ’ ಎಂಬುವುದು. ಅಲ್ಲಿಗೆ ಅವರು ಕಳೆದುಕೊಂಡಿದ್ದು ಸಿಗುತ್ತದೆ, ಅವರ ಮನಸಿನ ಇಷ್ಟಾರ್ಥ ನೆರವೇರುತ್ತದೆ ಎಂದೇ ಅರ್ಥ. ತುಳುನಾಡಿನ ಅತ್ಯಂತ ಕಾರ್ಣೀಕ ಕ್ಷೇತ್ರ ಪಣೋಲಿಬೈಲಿನಲ್ಲಿ  ನೆಲೆನಿಂತಿರುವ ಕಲ್ಕುಡ ಮತ್ತು ಕಲ್ಲುರ್ಟಿ ದೈವಗಳು ತಮ್ಮನ್ನು ನಂಬಿ ಬಂದ ಭಕ್ತರಿಗೆ ಯಾವತ್ತೂ ನಿರಾಸೆಯುಂಟು ಮಾಡುವುದಿಲ್ಲ. ಇಲ್ಲಿಗೆ ಭೇಟಿ ನೀಡುವ ಭಕ್ತರಲ್ಲಿ ಯಾವುದೇ ಜಾತಿ, ಧರ್ಮ …

Read More »

ಈಶ್ವರಮಂಗಲದಲ್ಲಿ ನೋಡ ಬನ್ನಿ: ರಾಮಾಯಣ, ಹುನುಮಾಯಣದ ಶಿಲ್ಪ ಕಥಾನಕ

ರಾಮ-ಲಕ್ಷ್ಮಣ ಶುಶ್ರೂಷೆಗಾಗಿ ಹನುಮಂತನು ಪಂಚಮುಖಿ ಸ್ವರೂಪ ತಾಳಿ, ಹಿಮಾದ್ರಿ ಸೇರಿ ದ್ರೋಣಾಚಲವನ್ನೇ ಎತ್ತಿ ತಂದ ಸಾಹಸಗಾಥೆಯು ಇಲ್ಲಿನ ನಿಸರ್ಗದತ್ತ ಕಲ್ಲು ಬಂಡೆಗಳಲ್ಲಿ ಚಿತ್ತಾರವಾಗಿ ಮೂಡಿ ಬಂದಿದೆ. ಈ ಶಿಲ್ಪಕಲೆಯ ಕೆತ್ತನೆಯ ಸೊಗಡು ನೋಡುಗರ ಕಣ್ಮನ ತಣಿಸುತ್ತಿದೆ. ಹನ್ನೊಂದು ಅಡಿ ಎತ್ತರದ ಶ್ರೇಷ್ಟ ಕೃಷ್ಣಶಿಲೆಯಲ್ಲಿ ಕೆತ್ತಿದ ಪಂಚಮುಖಿ ಆಂಜನೇಯನ ಏಕಶಿಲಾ ವಿಗ್ರಹವು ನೋಡುಗರಲ್ಲಿ ಸಾರ್ಥಕ್ಯ ಭಾವ ಮೂಡಿಸುತ್ತಿದೆ. ಪುತ್ತೂರು ತಾಲೂಕಿನ ಈಶ್ವರಮಂಗಲದ ಹನುಮಗಿರಿಯಲ್ಲಿ ಇಂಥದ್ದೊಂದು ಅದ್ಭುತ ಕ್ಷೇತ್ರ ಮೈದಳೆದಿದೆ. ಜೀವರಕ್ಷಣೆಯ ಗಿಡಮೂಲಿಕೆಗಳು, …

Read More »

ಈ ಏಳು ಸುತ್ತಿನ ಕೋಟೆಯೊಳಗೊಂದು ಶಿವ ಸಾನ್ನಿಧ್ಯ; ಸೌಹಾರ್ದತೆಯ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಲೇಬೇಕು

ಹಾಸನದ ಅರಸೀಕೆರೆಯಲ್ಲಿ ಏಳು ಸುತ್ತಿನ ಕೋಟೆಯೊಂದಿದೆ, ಈ ಕೋಟೆಯೊಳಗೊಂದು ಶಿವ ದೇವಾಲಯ ಮತ್ತು ವೃಕ್ಷವಿದೆ. ಈ ವೃಕ್ಷದಲ್ಲಿ ಸಂತಾನ ಭಾಗ್ಯಕ್ಕಾಗಿ ಬೇಡಿಕೊಂಡರೆ ಸಂತಾನಪ್ರಾಪ್ತಿಯಾಗುತ್ತದಂತೆ. ಕೇವಲ ಇಷ್ಟಕ್ಕೆ ಆ ಕೋಟೆಯ ಕಥೆ ಮುಗಿದಿಲ್ಲ. ಆದರೆ ಈ ಪ್ರದೇಶವು ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಸೌಹಾರ್ದತೆಯನ್ನು ಉತ್ತೇಜಿಸುವಂಥ ಹಲವು ಕಥೆಗಳನ್ನು ಹೊಂದಿದೆ. ಇಲ್ಲಿರುವ ಗರುಡನಗಿರಿ ಬೆಟ್ಟವು ಆರೋಹಿಗಳ ಸ್ವರ್ಗವಾಗಿದೆ. ಈ ಬೆಟ್ಟವು ಗರುಡನನ್ನು ಹೋಲುತ್ತದೆ ಮತ್ತು ಅದರ ಕಾರಣದಿಂದ ಇದನ್ನು ಗರುಡನಗಿರಿ ಎಂದು …

Read More »

ತನ್ನ 60 ಪತ್ನಿಯರನ್ನು ಕೊಂದು ನಿರ್ಮಿಸಿದ 60 ಸಮಾಧಿ; ಕರ್ನಾಟಕದಲ್ಲೇ ಇರುವ ಈ ಸ್ಥಳವನ್ನು ನೋಡಿದ್ದೀರಾ?

ಕರ್ನಾಟಕದಲ್ಲಿ ನಾವು ನೋಡದೆ ಕೇಳದೆ ಹೆಚ್ಚು ಬೆಳಕಿಗೆ ಬರದೇ ಇರುವ ಹಲವಾರು ಐತಿಹಾಸಿಕ ಪ್ರವಾಸಿ ತಾಣಗಳಿವೆ. ಕೆಲವೊಂದು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿ ಪಾಲು ಬಿದ್ದಿವೆ. ಅಂತಹ ಒಂದು ಸ್ಥಳವೇ ‘ಸಾಟ್ ಖಬರ್’. ಕರ್ನಾಟಕದ ಪ್ರಮುಖ ಐತಿಹಾಸಿಕ ಸ್ಥಳಗಳಲ್ಲಿ ಬಿಜಾಪುರ ಪ್ರಮುಖ ಸ್ಥಾನ ಪಡೆಯುತ್ತದೆ. ಇಲ್ಲಿನ ಕೋಟೆ, ಗೋಲ್ ಗುಂಬಜ್, ಇಬ್ರಾಹಿಂ ರೋಜಾ ಮಸ್ಜಿದ್, ಬಾರಾ ಕಮಾನ್ ಮುಂತಾದವುಗಳನ್ನು ನೀವು ನೋಡಿರಬಹುದು. ಅಲ್ಲೇ ಸ್ವಲ್ಪ ದೂರದಲ್ಲಿದೆ ಈ ಸಾಟ್ ಖಬರ್. ‘ಡಾರ್ಕ್‌ …

Read More »