Breaking News
Home / ವಿದೇಶ

ವಿದೇಶ

ಹಚ್ಚೆ ಹಾಕಿಸಿಕೊಂಡು ಗಿನ್ನಿಸ್ ಧಾಖಲೆ ಸೇರಿದ ಜೋಡಿ; ಕೇಳಿ ಇವರ ‘ಟ್ಯಾಟೂ ಲವ್ ಸ್ಟೋರಿ’!

ಗಿನ್ನಿಸ್ ದಾಖಲೆ ಮಾಡಬೇಕೆಂದು ಅದ್ಭುತ ಸಾಧನೆಗಳನ್ನು ಮಾಡುವವರಿದ್ದಾರೆ, ಅಥವಾ ಅವರಿಗೇ ಗೊತ್ತಿಲ್ಲದೆ ಕೆಲವರ ಕೌಶಲ್ಯಗಳು, ಸಾಧನೆಗಳು ಗಿನ್ನಿಸ್ ಪುಟ ಸೇರಿರುತ್ತವೆ. ಇನ್ನೂ ಕೆಲವರು ಇದಕ್ಕಾಗಿ ಹುಚ್ಚು ಸಾಹಸಗಳನ್ನೂ ಮಾಡುವವರಿದ್ದಾರೆ. ಇಲ್ಲೊಂದು ಇಳಿವಯಸ್ಸಿನ ಜೋಡಿ ಮೈಮೇಲೆ ಎಲ್ಲಾ ಕಡೆ ಹಚ್ಚೆ ಹಾಕಿಸಿಕೊಂಡು ಈಗ ಗಿನ್ನಿಸ್ ಪುಟ ಸೇರಿದ್ದಾರೆ. ಅವರೇ ಚಾರ್ಲೊಟ್ಟೆ ಗುಟ್ಟನ್ ಬರ್ಗ್ ಮತ್ತು ಚಂಕ್ ದಂಪತಿ. ಪತ್ನಿ ವಯಸ್ಸು 67, ಪತಿಯ ವಯಸ್ಸು 81. ಕಳೆದ 10 ವರ್ಷಗಳಿಂದ ತನ್ನ …

Read More »

[Video]ತೆವಳುತ್ತಾ ತಟ್ಟೆಯಿಂದ ಹೊರಬಂದು ನೆಲಕ್ಕೆ ಜಿಗಿದ ಹಸಿ ಮಾಂಸದ ತುಂಡು; ಬೆಚ್ಚಿಬೀಳಿಸುವ ವಿಡಿಯೋ

ಅಬ್ಬಾ! ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಭಯವಾಗುವುದಂತೂ ಖಂಡಿತ. ನಾವು ಹೋಟೆಲ್ ಗೆ ಹೋಗಿ ಹೊಟ್ಟೆತುಂಬಾ ತಿನ್ನಲೆಂದು ಖಾದ್ಯಗಳನ್ನು ತರಿಸಿ ಇನ್ನೇನು ತಿನ್ನಬೇಕು ಎನ್ನುವಷ್ಟರಲ್ಲಿ ಅದರಲ್ಲಿರುವ ಮಾಂಸದ ತುಂಡೊಂದಕ್ಕೆ ಜೀವ ಬಂದು ಚಲಿಸಲು ಪ್ರಾರಂಭಿಸಿದರೆ? ಅರೆರೇ … ಏನಾಗಬೇಡ? ಈಗ ಇಂಥ ಒಂದು ಘಟನೆಗೆ ಸಾಕ್ಷಿಯಾಗಿದೆ ಫ್ಲೋರಿಡಾದ ಒಂದು ರೆಸ್ಟೋರೆಂಟ್. ಅಲ್ಲಿ ಗ್ರಾಹಕನೊಬ್ಬ ಆಹಾರ ತರಿಸಿಕೊಂಡಿದ್ದ… ಆಗ ಆತನ ತಟ್ಟೆಯಲ್ಲಿದ್ದ ಹಸಿ ಮಾಂಸದ ತುಂಡೊಂದು ನಿಧಾನಕ್ಕೆ ತೆವಳುತ್ತಾ ಮುಂದೆ …

Read More »

ಟ್ರಂಪ್ ಗೆ ಮಧ್ಯ ಬೆರಳು ತೋರಿಸಿ ಕೆಂಗಣ್ಣಿಗೆ ಗುರಿಯಾಗಿದ್ದ ಮಹಿಳೆಗೆ ಸ್ಥಳೀಯ ಅಭೂತಪೂರ್ವ ಗೆಲುವು !

೨೦೧೭ರಲ್ಲಿ ಅಮೇರಿಕಾ ಅಧ್ಯಕ್ಷ ಅವರು ಬೆಂಗಾವಲು ವಾಹನದ ಜೊತೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಪಕ್ಕದಲ್ಲೇ ಸೈಕಲ್ ನಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ಅಧ್ಯಕ್ಷರಿಗೆ ತನ್ನ ಮಧ್ಯದ ಬೆರಳು ತೋರಿಸಿ ಅಣಕಿಸಿ ಸುದ್ದಿಯಾಗಿದ್ದರು. ಜೂಲಿ ಬ್ರಿಸ್ಕ್ಮ್ಯಾನ್ ಎಂಬ ಸೈಕಲ್ ಸವಾರೆ ಈ ರೀತಿ ಅಣಕ ಮಾಡಿದ್ದು, ಅವರು ಕೈಬೆರಳನ್ನು ಎತ್ತಿದ್ದನ್ನು ಎಎಫ್ ಪಿ ಛಾಯಾಗ್ರಾಹಕ ಕ್ಲಿಕ್ಕಿಸಿದ್ದು, ನಂತರ ಅದು ವೈರಲ್ ಆಗಿತ್ತು. ಈ ಕಾರಣಕ್ಕಾಗಿ ಆಕೆ ತನ್ನ ಮಾರ್ಕೆಟಿಂಗ್ ಅನಾಲಿಸ್ಟ್ ಹುದ್ದೆಯನ್ನೂ ಕಳ್ಕೊಳ್ಳಬೇಕಾಯಿತು. ಅಲ್ಲದೆ, …

Read More »

ವಿದೇಶ ಪ್ರವಾಸಕ್ಕೆ ಹೋಗಲು ಅಡ್ಡಿಯಾಗುತ್ತರೆಂದು ತನ್ನ ಪುಟ್ಟ ಮಕ್ಕಳನ್ನು ಈ ದುಷ್ಟ ತಾಯಿ ಏನು ಮಾಡಿದಳು ಗೊತ್ತೇ?

ಪ್ರವಾಸಕ್ಕೆ ಹೋಗುವಾಗ ನಾವು ಸಾಮಾನ್ಯವಾಗಿ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗುತ್ತೇವೆ ಅಥವಾ ಯಾರಾದ್ದಾರೂ ಸುಪರ್ದಿಗೆ ವಹಿಸಿ ಅವರು ಸುರಕ್ಷಿತರಾಗಿದ್ದರೆಂದು ಖಚಿತಪಡಿಸಿ ಹೊರಡುತ್ತೇವೆ. ಆದರೆ ಇಲ್ಲೊಬ್ಬ ತಾಯಿ ವಿದೇಶಕ್ಕೆ 11 ದಿನಗಳ ಪ್ರವಾಸಕ್ಕೆ ಹೊರಟಾಗ ತನ್ನ 4 ಮಕ್ಕಳನ್ನು ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಮಾಡದೆ ಮನೆಯಲ್ಲಿಯೇ ಬಿಟ್ಟು ಹೋಗಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ನ್ಯೂಯಾರ್ಕ್ ನ ಜಾನ್ ಸ್ಟನ್ ನ ನಿವಾಸಿಯಾಗಿರುವ 30 ವರ್ಷದ ಎರಿನ್‌ ಲೀ ಮ್ಯಾಕ್‌ ತನ್ನ 12 ವರ್ಷದ …

Read More »

[Video]ಹೀಗಿತ್ತು ದುಬೈನಲ್ಲಿ ದೀಪಾವಳಿ ಸಂಭ್ರಮ; ಮೊಳಗಿದ ‘ಜನಗಣಮನ’- ಬಾನಂಗಳದಲ್ಲಿ ಬಣ್ಣದ ಚಿತ್ತಾರಗಳು!

ಅತೀ ಹೆಚ್ಚು ಭಾರತೀಯರು ನೆಲೆಸಿರುವ ದುಬೈನಲ್ಲಿ ಈ ಬಾರಿ ಬಹಳ ವಿಶೇಷವಾಗಿ ದೀಪಾವಳಿ ಆಚರಿಸಲಾಗಿದ್ದು, ಬೆಳಕಿನ ಹಬ್ಬದ ಸಂಭ್ರಮದ ಜೊತೆಗೆ ವಿದೇಶದಲ್ಲೂ ಭಾರತದ ರಾಷ್ಟ್ರಗೀತೆ ಮೊಳಗಿದೆ. ದುಬೈ ಪ್ರವಾಸೋದ್ಯಮ ಇಲಾಖೆ ಮತ್ತು ಭಾರತೀಯ ದೂತಾವಾಸ ಕಚೇರಿಗಳು ಜಂಟಿಯಾಗಿ ಆಯೋಜಿಸಿದ್ದ ದೀಪಾವಳಿ ಕಾರ್ಯಕ್ರಮದಲ್ಲಿ ಅಲ್ಲಿನ ಪೊಲೀಸ್ ಬ್ಯಾಂಡ್ ಜೊತೆ ನಮ್ಮ ರಾಷ್ಟ್ರಗೀತೆ ಮೊಳಗಿದ್ದು, ಭಾರತೀಯರಲ್ಲಿ ಭಾರೀ ಖುಷಿ, ಹೆಮ್ಮೆಗೆ ಕಾರಣವಾಗಿದೆ. ಎಲ್ಲಾ ಮನೋರಂಜನಾ ಕಾರ್ಯಕ್ರಮಗಳು ಮುಗಿದು ಕಾರ್ಯಕ್ರಮ ಸಮಾರೋಪವಾಗುವ ಸಂದರ್ಭದಲ್ಲಿ ಆಕರ್ಷಕ …

Read More »

ರಸ್ತೆಯಲ್ಲಿ ನೋಟಿನ ಕಂತೆಗಳ ಸುರಿಮಳೆ…ಸಿಕ್ಕಷ್ಟು ಬಾಚಿಕೊಂಡ ಜನ

ರಸ್ತೆಯ ತುಂಬ ನೋಟುಗಳ ಮಳೆಯೇ ಸುರಿದರೆ ಇನ್ನೇನಾಗುತ್ತದೆ. ಇಲ್ಲಿ ಟ್ರಕ್​ನಿಂದ ಬಿತ್ತು ಕಂತೆ ಕಂತೆ ಹಣ, ಜನ ಕೈಗೆ ಸಿಕ್ಕಷ್ಟು ಬಾಚಿಕೊಂಡು ಹೋದರು. ಈ ವೀಡಿಯೊ ವೈರಲ್ ಆಗಿದೆ. ರಸ್ತೆ ಬದಿ ತಮ್ಮ ವಾಹನಗಳನ್ನ ನಿಲ್ಲಿಸಿ ಸಿಕ್ಕಿದ್ದೇ ಚಾನ್ಸ್​ ಅಂತ ಕೈಗೆ ಸಿಕ್ಕಷ್ಟು ನೋಟುಗಳನ್ನ ಜನ ಬಾಚಿಕೊಳ್ತಿರಬೇಕಾದರೆ ನೋಡಿದ ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬರುವ ವೇಳೆಗೆ ಹಲವರು ಹಣ ಬಾಚಿಕೊಂಡು ಪರಾರಿಯಾಗಿದ್ದಾರೆ. ಇಂಥದ್ದೊಂದು ಘಟನೆ ನಡೆದಿದ್ದು ಅಮೆರಿಕದ …

Read More »

ಕ್ರಿಕೆಟ್ ಮೈದಾನದಲ್ಲಿ ‘ವಾಟರ್ ಬಾಯ್’ ಆದ ಆಸ್ಟ್ರೇಲಿಯಾ ಪ್ರಧಾನಿ; ಪ್ರಶಂಸೆಯ ಸುರಿಮಳೆ!

ಪ್ರಧಾನಿಯೊಬ್ಬರು ಸಾಮಾನ್ಯ ಜನರಿಗೆ ನೋಡಲು ಸಿಗುವುದೇ ಅಪರೂಪ. ಅದರಲ್ಲೂ ಅವರು ಯಾವಾಗಲೂ ತಮ್ಮ ಅಂಗರಕ್ಷಕರ ಮಧ್ಯೆಯೋ, ಇಲ್ಲಾ ವೇದಿಕೆ ಮೇಲೋ ಅಥವಾ ತಮ್ಮ ಕಚೇರಿಯಲ್ಲಿ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡುತ್ತಲೋ ಇರುವ ಫೋಟೋಗಳನ್ನಷ್ಟೇ ನಾವು ನೋಡಬಹುದು. ಆದರೆ ಅತೀ ಅಪರೂಪ ಎನ್ನುವಂತೆ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೋರಿಸನ್ ಕ್ರಿಕೆಟ್ ಮೈದಾನದಲ್ಲಿ ತಮ್ಮ ತಂಡಕ್ಕೆ ನೀರು ಹಂಚಿ ವಾಟರ್ ಬಾಯ್ ಆಗಿರುವ ಕ್ಷಣ ಅಚ್ಚರಿ ಮೂಡಿಸಿದೆ. ಭಾನುವಾರ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಮೂರು …

Read More »

[Photos]ಅಬ್ಬಾ! ಅತಿ ಅಪರೂಪದ ಭಯಾನಕ ಚಿತ್ರವಿದು; ಈ ಫೋಟೋಗ್ರಾಫರ್’ನ ಗಟ್ಟಿ ಗುಂಡಿಗೆಗೆ ಭೇಷ್ ಎನ್ನಲೇಬೇಕು!

ಪ್ರಪಂಚದಲ್ಲಿ ಇರುವ ಹಲವು ಅಪರೂಪದ ಚಿತ್ರಗಳನ್ನು ನಾವು ನೋಡಿರುತ್ತೇವೆ, ವಾವ್ ಅದೆಷ್ಟು ಚೆನ್ನಾಗಿದೆ ಎಂದು ಹೇಳಿ ಬಿಟ್ಟುಬಿಡುತ್ತೇವೆ. ಆದರೆ ಅದನ್ನು ತೆಗೆದ ಫೋಟೋಗ್ರಾಫರ್ ಅದರ ಹಿಂದಿನ ಕಥೆ ನಾವು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಅದರಲ್ಲೂ ಇತ್ತೀಚೆಗಿನ ಚಿತ್ರಗಳನ್ನು ನಾವು ಗ್ರಾಫಿಕ್ಸ್ ಅಂದುಕೊಳ್ಳುತ್ತೇವೆ ಬಿಡಿ. ಆದರೆ ಆ ಕಾಲದಲ್ಲಿ ಕೆಲವೊಂದು ಇಂಗ್ಲಿಷ್ ಸಿನಿಮಾಗಳಲ್ಲಿ ಸಾಗರದಾಳದಲ್ಲಿ ಜಲಚರಗಳನ್ನು ಹತ್ತಿರದಿಂದ ತೋರಿಸಿ ಭಯ ಮೂಡಿಸುವ ಕೆಲವು ದೃಶ್ಯಗಳನ್ನು ನೋಡಿರಬಹುದು. ಆದರೆ ಇಲ್ಲೊಬ್ಬರು ಫೋಟೋಗ್ರಾಫರ್ …

Read More »

ಕಲ್ಲಂಗಡಿ ಹಣ್ಣಿನಿಂದ ಸಿಕ್ತು 49 ಕೋಟಿ ರೂ!

ಅಬ್ಬಬ್ಬಾ! ಇದೇನಿದು ಅನ್ಕೊಂಡ್ರಾ? ಕಲ್ಲಂಗಡಿ ಹಣ್ಣಿನ ಒಳಗೆ ಇಷ್ಟು ಹಣ ಇತ್ತು ಅನ್ಕೊಂಡ್ರಾ? ಇಲ್ಲ ಕಣ್ರೀ.. ಓದಿ ಈ ಸ್ಟೋರಿ! ನ್ಯೂಯಾರ್ಕ್ ನ ವಾಲ್ ಮಾರ್ಟ್ ನಲ್ಲಿ ವ್ಯಕ್ತಿಯೊಬ್ಬರು ಕಲ್ಲಂಗಡಿ ಖರೀದಿಸಲು ಹೋಗಿ ತನ್ನ ಪೃಷ್ಠದ ಭಾಗಕ್ಕೆ ಗಾಯ ಮಾಡಿಕೊಂಡಿದ್ದರು. ಇದು ನಡೆದಿದ್ದು 2015ರಲ್ಲಿ. 61 ವರ್ಷದ ಹೆನ್ರಿ ವಾಕರ್ ಕಲ್ಲಂಗಡಿ ಖರೀದಿಸುವಾಗ ಅವರ ಕಾಲು ಹಣ್ಣು ಇಟ್ಟಿದ್ದ ಪೆಟ್ಟಿಗೆಯಡಿ ಇಟ್ಟಿದ್ದ ಜಾಹೀರಾತು ಫಲಕದ ಮಧ್ಯೆ ಸಿಕ್ಕಿಹಾಕಿಕೊಂಡು ಕೆಳಗೆ ಬಿದ್ದಾಗ …

Read More »

ಅಮೇರಿಕಾದ ಖ್ಯಾತ ಪಾಪ್ ತಾರೆಯಿಂದ ಸಂಸ್ಕೃತ ಪಠಣ; ಉಘೇ ಉಘೇ ಎಂದ ಭಾರತೀಯರು!

ಭಾರತದ ಸಂಸ್ಕೃತಿ, ಆಚಾರ – ವಿಚಾರಗಳು ವಿದೇಶಿಯರಲ್ಲಿ ಭಾರೀ ಆಕರ್ಷಣೆಯನ್ನು ಹುಟ್ಟುಹಾಕಿದ್ದು, ಅದರ ಬಗ್ಗೆ ಕಲಿಯಲು ಅವರು ವಿಪರೀತ ಆಸಕ್ತಿ ತೋರಿಸುತ್ತಿರುವುದು ನಮಗೆ ಗೊತ್ತಿರುವ ಸಂಗತಿ. ಈಗ ನಮ್ಮ ಸಂಸ್ಕೃತ ಪಠಣ ಮಾಡಿ ಭಾರತೀಯರ ಮನ ಗೆದ್ದಿರುವುದು ಅಮೇರಿಕಾದ ಖ್ಯಾತ ಪಾಪ್ ಗಾಯಕಿ ಲೇಡಿ ಗಾಗ. ಲೇಡಿ ಗಾಗಾಗೆ ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದರೆ ಇನ್ನು ಮುಂದೆ ಬಹುಶಃ ಭಾರತದಲ್ಲೂ ಅವರಿಗೆ ಹೆಚ್ಚು ಹೆಚ್ಚು ಅಭಿಮಾನಿ ಬಳಗ ಸೃಷ್ಠಿಯಾಗುವ ಸಾಧ್ಯತೆಯಿದೆ. …

Read More »