Breaking News
Home / ವಿದೇಶ (page 10)

ವಿದೇಶ

ಅರಬ್ ದೇಶಗಳ ಒಗ್ಗಟ್ಟಿನಲ್ಲಿ ಬಿರುಕು: ಉಗ್ರರಿಗಾಗಿ ಕತಾರ್‍ ತಗಾದೆ

ಯುನೈಟೆಡ್‍ ಅರಬ್‍ ಎಮಿರೆಟ್ಸ್‍ ಜೊತೆಗಿನ ರಾಜತಾಂತ್ರಿಕ ಸಂಬಂಧ ಮುರಿದುಕೊಳ್ಳಲು ಕತಾರ್ ಮುಂದಾಗಿದ್ದು, ಅರಬ್‍ ಇತಿಹಾಸದಲ್ಲೇ ಅತೀ ದೊಡ್ಡ ಬಿರುಕು ಉಂಟಾಗಿದೆ. ಇದು ಮುಂದಿನ ದಿನಗಳಲ್ಲಿ ಅತೀ ದೊಡ್ಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಅರಬ್‍ ದೇಶಗಳ ಒಕ್ಕೂಟ ವ್ಯವಸ್ಥೆಯಿಂದ ಕತಾರ್ ಹೊರಬರಲು ನಿರ್ಧರಿಸಿದೆ. ಅಲ್ಲದೇ ಸೌದಿ ಅರೆಬಿಯಾ ಮತ್ತು ಈಜಿಪ್ಟ್‍ ಕೂಡ ದೋಹಾ ಸಂಬಂಧ ಕಡಿದುಕೊಳ್ಳಲು ಬಯಸುತ್ತಿವೆ. ಇದರಿಂದ ಅರಬ್‍ ದೇಶಗಳ ನಡುವಣ ಗಡಿ, ಸಮುದ್ರ ಮುಂತಾದ ಭೂ …

Read More »

8ಕ್ಕೆ ಬ್ರಿಟನ್‍ ಸಂಸತ್‍ ಚುನಾವಣೆ: ಥೆರೆಸಾ ವಿರುದ್ಧ ಭಾರತದ ನೀರಜ್‍ ಪಟೇಲ್‍ ಕಣಕ್ಕೆ

ಜೂನ್ 8 ಕ್ಕೆ ಬ್ರಿಟನ್ ಸಂಸತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಲಂಡನ್ ನ ಪುಟ್ನೆ ಕ್ಷೇತ್ರದಿಂದ ಲೇಬರ್ ಪಕ್ಷದ ಅಭ್ಯರ್ಥಿಯಾಗಿರುವ ಭಾರತದ, ಕರ್ನಾಟಕ ಮೂಲದ ವೈದ್ಯ ನೀರಜ್ ಪಾಟೀಲ್ ಅವರು  ಕನ್ಸರ್ವೇಟಿವ್ ಪಕ್ಷದ ತನ್ನ ಎದುರಾಳಿಗೆ ‘ ರಾಜಕೀಯದಲ್ಲಿ ಒಂದು ವಾರ ಕಳೆಯುವುದು ಬಹಳ ದೀರ್ಘವಾದ ಸಮಯ’ ಎಂದು ಎಚ್ಚರಿಕೆ ನೀಡಿದ್ದಾರೆ. ನ್ಯಾಷನಲ್ ಹೆಲ್ತ್ ಸರ್ವಿಸ್ ನಲ್ಲಿ ಆ್ಯಕ್ಸಿಡೆಂಟ್ ಮತ್ತು ಎಮೆರ್ಜೆನ್ಸಿ ಕನ್ಸಲ್ಟೆಂಟ್ ಆಗಿರುವ ನೀರಜ್ ಪಾಟೀಲ್ ಅವರು 1993 ರಲ್ಲಿ …

Read More »

ಕುವೈತ್ ವೀಸಾ ನಿಯಮ ಇನ್ನೂ ಕಠಿಣ: ಪತ್ನಿ, ಮಕ್ಕಳಿಗಷ್ಟೇ ಅವಕಾಶ

ಇನ್ನು ಮುಂದೆ ಕುವೈತ್ ವಿದೇಶಿ ಉದ್ಯೋಗಿಗಳಿಗೆ ತಮ್ಮ ತಂದೆ – ತಾಯಿ, ಸಹೋದರ – ಸಹೋದರಿ ಅಥವಾ ಹತ್ತಿರದ ಬಂಧುಗಳನ್ನು ಕುಟುಂಬ ವೀಸಾದ ಮೂಲಕ ಕರೆಯಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. 22ನೇ ನಂಬರಿನ ವೀಸಾವನ್ನು ಪತ್ನಿ ಮತ್ತು ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿ ಎಂದು ಕುವೈತ್ ಸರಕಾರ ಆದೇಶ ಹೊರಡಿಸಿದೆ. ಗೃಹಸಚಿವಾಲಯದ ರೆಸಿಡೆನ್ಶಿಯಲ್ – ಪಾಸ್ ಪೋರ್ಟ್ ಅಂಡರ್ ಸೆಕ್ರೆಟರಿ ಮೇಜರ್ ಜನರಲ್ ಶೇಖ್ ಮಾಸಿನ್ ಅಲ್ ಜರ್ರಾಹ್ ಈ ಆದೇಶವನ್ನು ಹೊರಡಿಸಿದ್ದಾರೆ. ಈವರೆಗೂ …

Read More »

ಟೆಡ್ಡಿಬೇರ್ ಗಳಿಗೂ ಆಸ್ಪತ್ರೆ ಇದೆ ಗೊತ್ತಾ?

ಇದೇನಪ್ಪಾ ಇದು ಎಂದು ಹುಬ್ಬೇರಿಸಿಕೊಳ್ಳುತ್ತಿದ್ದೀರಾ?  ಹೌದು, ದುಬೈನಲ್ಲಿ ಮಕ್ಕಳು ಆಟ ಆಡುವ ಟೆಡ್ಡಿ ಬೇರ್ ಗಳಿಗೊಂದು ಆಸ್ಪತ್ರೆ ಕಟ್ಟಲಾಗಿದೆಯಂತೆ, ಅಂದರೆ ಮಕ್ಕಳು ತಮ್ಮ ‘ಅನಾರೋಗ್ಯ’ ಇರುವ ಟೆಡ್ಡಿಗಳನ್ನು ಈ ಆಸ್ಪತ್ರೆಗೆ ಕರೆದುಕೊಂಡು ಬರುವಂತಹ ಸೌಲಭ್ಯವನ್ನು ಮೊತ್ತಮೊದಲ ಬಾರಿಗೆ ಒದಗಿಸುತ್ತಿದೆ. ಟೆಡ್ಡಿಗಳಿಗಾ ಗಿಯೇ ಯುಎಇಯಲ್ಲಿ ಆಸ್ಪತ್ರೆಯನ್ನು ಪ್ರಾರಂಭಿಸ ಲಾಗಿದೆಯಾದರೂ, ಇದು ವೈದ್ಯರನ್ನು ಕಂಡರೆ ಭಯಪಡುವ ಮಕ್ಕಳನ್ನು ಅದರಿಂದ ಹೊರಬರಲು ಮಾಡಿದ ವ್ಯವಸ್ಥೆಯಂತೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಉಪಾಧ್ಯಕ್ಷ ಶೇಕ್ ಮುಹಮ್ಮದ್ …

Read More »

ಈಜಿಪ್ಟ್ ನಲ್ಲಿ ಗುಂಡಿನ ದಾಳಿ : 26 ಸಾವು

ದಕ್ಷಿಣ ಈಜಿಪ್ಟಿನ ಮಿನ್ಯಾದಲ್ಲಿ ಶುಕ್ರವಾರದಂದು  ಕಾಪ್ಟಿಕ್ ಕ್ರಿಶ್ಚಿಯನ್ಸ್ ಗಳಿದ್ದ ಬಸ್ ಹಾಗು ಟ್ರಕ್ ಮೇಲೆ ಮುಸುಕುಧಾರಿ ಶಸ್ಟ್ರಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದು, ಇನ್ನು 26 ಮಂದಿ ಗಾಯಗೊಂಡಿದ್ದಾರೆ. ಈ ಪ್ರಾಂತ್ಯದ ರಾಜ್ಯಪಾಲ ಎಸ್ಸಾಮ್ ಅಲ್ ಬೆದೈವಿ ಅವರು ‘ಸಾವು -ನೋವಿನ ವಿವರ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. 23 ಮಂದಿ ಸಾವನ್ನಪ್ಪಿರುವುದು ಮತ್ತು 25 ಮಂದಿ ಗಾಯಗೊಂಡಿರುವುದು  ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ’ ಎಂದಿದ್ದಾರೆ. ಅಲ್ಪಸಂಖ್ಯಾತ …

Read More »

ಬ್ರಿಟನ್ ನ ಮ್ಯಾಂಚೆಸ್ಟರ್ ನಲ್ಲಿ ಬಾಂಬ್ ಸ್ಫೋಟ ; 20 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ

ಇಂಗ್ಲೆಂಡ್ ನಲ್ಲಿ ಮತ್ತೊಂದು ಭೀಕರ ಭಯೋತ್ಪಾದಕ ದಾಳಿ ನಡೆದಿದೆ. ಸೋಮವಾರ ರಾತ್ರಿ ಇಂಗ್ಲಿಷ್ ಪಟ್ಟಣ ಮ್ಯಾಂಚೆಸ್ಟರ್‍ನಲ್ಲಿ ಅಮೆರಿಕದ ಪ್ರಸಿದ್ದ ತಾರೆ ಅರಿಯಾನಾ ಗ್ರಾಂಡೆ ಅವರ ಪಾಪ್ ಸಂಗೀತಗೋಷ್ಠಿ ವೇಳೆ ಪ್ರಬಲ ಬಾಂಬ್ ಸ್ಫೋಟಗೊಂಡು 20ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಇತರ 50 ಮಂದಿ ತೀವ್ರ ಗಾಯಗೊಂಡಿದ್ದಾರೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಮಾನವ ಬಾಂಬ್ ದಾಳಿಯಿಂದ ಈ ದಾಳಿ ನಡೆದಿರಬಹುದು …

Read More »

3.75 ಕೋಟಿ ಯೂನಿಟ್‍ ನೋವು ನಿವಾರಕ ಔಷಧ ವಶ: ಐಸಿಸ್‍ ಉಗ್ರರಿಗೆ ಭಾರತದ ಕಂಪನಿಯಿಂದ ಪೂರೈಕೆ?

ಇಟಲಿ ಪೋಲಿಸರು 3.75 ಕೋಟಿ ನೋವು ನಿವಾರಕ ಔಷಧಗಳ ಯೂನಿಟ್‍ಗಳನ್ನು ಇಟಲಿ ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 75 ದಶಲಕ್ಷ ಡಾಲರ್‍ ಆಗಿದೆ. ಭಾರತ ಮೂಲದ ಕಂಪನಿ ಉತ್ಪಾದಿಸಿರುವ ಈ ಔಷಧಗಳನ್ನು ಜಗತ್ತಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿರುವ ಐಸಿಸ್‍ ಉಗ್ರರಿಗೆ ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಟ್ರಮಡೊಲ್‍ ಎಂಬ ಸಿಂಥೆಟಿಕ್‍ ಒಪಿಯೊಡ್‍ ಹೆಸರಿನ ಈ ಔಷಧ ನೋವು ನಿವಾರಕಗಳಾಗಿ ಬಳಸಲಾಗುತ್ತಿದೆ, ಹಡಗಿನಲ್ಲಿದ್ದ ಮೂರು ಬೃಹತ್‍ ಕಂಟೈನರ್ ಗಳ ಮೇಲೆ ಹೊದಿಕೆ …

Read More »

ಸೈನಿಕರ ಮೇಲೆ ದಾಳಿ ಮಾಡಿದರೆ ಭಾರತ ಕೈಕಟ್ಟಿ ಕೂರಲ್ಲ: ಪಾಕಿಸ್ತಾನಕ್ಕೆ ಅಮೆರಿಕ ಖಡಕ್‍ ಎಚ್ಚರಿಕೆ

ಉಗ್ರರಿಗೆ ಸಹಕಾರ ನೀಡುವುದು ಪಾಕಿಸ್ತಾನ ಕೂಡಲೇ ನಿಲ್ಲಿಸಬೇಕು. ಸೈನಿಕರು ಮತ್ತು ನಾಗರೀಕರನ್ನು ಗುರಿಯಾಗಿಸಿ ಇದೇ ರೀತಿ ದಾಳಿ ಮುಂದುವರಿಸಿದರೆ ಭಾರತ ಕೈ ಕಟ್ಟಿ ಸುಮ್ಮನೆ ಕೂರುವುದಿಲ್ಲ. ಹೀಗೆಂದು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದು ಅಮೆರಿಕದ ಶಾಸಕ ಜೋ ಕ್ರೊವಲಿ. ಡೆಮಾಕ್ರೆಟಿಕ್‍ ಕಾಕೂಸ್‍ ಮುಖಂಡರೂ ಆಗಿರುವ ಜೋ, ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿನ ಉದ್ಚಿಗ್ನ ಪರಿಸ್ಥಿತಿ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು. ಉಗ್ರರಿಗೆ ಪಾಕಿಸ್ತಾನ ಬೆಂಬಲ …

Read More »

ಪಾಕಿಸ್ತಾನದೊಳಗೆ ನುಗ್ಗಿ ಹೊಡಿತಿವಿ: ಹಾಗಂತ ಹೇಳಿದ್ದು ಯಾವ ದೇಶ ಗೊತ್ತಾ?

ದೇಶದೊಳಗಿನ ಸುನ್ನಿ ಉಗ್ರರು ಗಡಿಗಳಲ್ಲಿ ನಡೆಸುತ್ತಿರುವ ಉಪಟಳ ನಿಗ್ರಹಕ್ಕೆ ಪಾಕಿಸ್ತಾನ ಸರಕಾರ ಕ್ರಮ ಕೈಗೊಳ್ಳದೇ ಇದ್ದಲ್ಲಿ ದೇಶದೊಳಗೆ ನುಗ್ಗಿ ಹೊಡೆಯಬೇಕಾಗುತ್ತದೆ ಎಂದು ಇರಾನಿ ಸೇನಾ ಪಡೆ ಎಚ್ಚರಿಕೆ ನೀಡಿದೆ. ಪಾಕಿಸ್ತಾನದ ಗಡಿಯೊಳಗೆ ಉಗ್ರರ ಬಂಕರ್‍ ಗಳನ್ನು ಭಾರತದ ಸೇನಾ ಪಡೆ ನಾಶಪಡಿಸಿದ ವೀಡಿಯೊ ದೃಶ್ಯಗಳು ಬಿಡುಗಡೆ ಆದ ಬೆನ್ನಲ್ಲೇ ಇರಾನ್‍ ಈ ಎಚ್ಚರಿಕೆ ನೀಡಿರುವುದು ಪಾಕಿಸ್ತಾನದ ಸಂಕಷ್ಟ ಹೆಚ್ಚಿಸಿದಂತಾಗಿದೆ. ಪಾಕಿಸ್ತಾನ ಗಡಿಯಲ್ಲಿ ಉಗ್ರರು ಅಪ್ರಚೋದಿತ ಗುಂಡಿನ ದಾಳಿ ನಡೆಸುವುದು ಮಾತ್ರವಲ್ಲ, …

Read More »

ಈಜಿಪ್ಟ್ ನಲ್ಲಿ ರವೀಂದ್ರನಾಥ್‍ ಠಾಗೂರ್‍ ಅವರ 156ನೇ ಜಯಂತಿ ಆಚರಣೆ

ನೋಬೆಲ್ ಪ್ರಶಸ್ತಿ ಪುರಸ್ಕೃತ  ಕವಿ ರವೀಂದ್ರನಾಥ್ ಠಾಗೋರ್ ಅವರ 156ನೇ ಜನ್ಮದಿನದ ಅಂಗವಾಗಿ ಭಾರತವು ಈಜಿಪ್ಟ್ ನಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ.ಭಾರತದ ರಾಯಭಾರ ಕಛೇರಿಯ ಸಾಂಸ್ಕೃತಿಕ ಘಟಕವಾದ ಮೌಲಾನಾ ಆಝಾದ್ ಸೆಂಟರ್ ಫಾರ್ ಇಂಡಿಯನ್ ಕಲ್ಚರ್ ಈ ಉತ್ಸವದ ಆಯೋಜಕರಾಗಿದ್ದು, ಮೇ 8 ರಿಂದ 12 ರವರೆಗೆ ನೃತ್ಯ, ಸಿನಿಮಾ ಸ್ಕ್ರೀನಿಂಗ್, ನಾಟಕ, ಚಿತ್ರಕಲಾ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ. ಮೇ 8 ರಂದು ಠಾಗೋರ್ ರವರ ಕಾದಂಬರಿ ಆಧಾರಿತ,  …

Read More »