Breaking News
Home / ವಿಶೇಷ

ವಿಶೇಷ

ಭಾರತದಲ್ಲೇ ಇರುವ ಈ ಸ್ಥಳಗಳಿಗೆ ಭಾರತೀಯರಿಗೇ ಪ್ರವೇಶವಿಲ್ಲ; ಇಲ್ಲಿ ವಿದೇಶಿಯರದೇ ರಾಜ್ಯಭಾರ!

ಇದು ನಮ್ಮ ಮನೆಯಲ್ಲಿಯೇ ನಾವು ಕೆಲವು ಜಾಗಗಳಿಗೆ ಹೋಗುವುದನ್ನು ನಿರ್ಬಂಧಿಸಿದಂತೆ. ಹೌದು! ನಮಗೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದರೂ ಇನ್ನೂ ನಮ್ಮದೇ ದೇಶದಲ್ಲಿರುವ ಕೆಲವು ಪ್ರದೇಶಗಳಿಗೆ ನಮಗೆ ಪ್ರವೇಶ ನಿರಾಕರಣೆ ಮಾಡುತ್ತಾರೆ ಗೊತ್ತೇ? ಈ ಕೆಲವು ಪ್ರದೇಶಗಳು ಭಾರತದ ಒಡೆತನದಲ್ಲಿದ್ದರೂ ಇಲ್ಲಿ ವಿದೇಶಿಯರಿಗೆ ಮಾತ್ರ ಮಣೆ. ಇದು ನಮ್ಮದೇ ದೇಶದಲ್ಲಿ ನಮ್ಮನ್ನು ಎರಡನೇ ದರ್ಜೆಯವರನ್ನಾಗಿ ನಡೆಸಿಕೊಳ್ಳುವ ರೀತಿ. ಬನ್ನಿ ಅಂತಹ ಕೆಲವು ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ! ಊನೋ ಇನ್ ಹೋಟೇಲ್, …

Read More »

ಪರಿಸರ ಸ್ನೇಹಿ ಬಾಟೆಲ್‍ ಮನೆ ಕೇಳಿದ್ದೀರಾ? ಖರ್ಚೂ ಕಡಿಮೆ, ಲಾಭ ಅಧಿಕ!

ನಾವು ಬಾಟಲ್ ನೀರು ಕುಡಿದು ಅದನ್ನು ಬಿಸಾಡುತ್ತೇವೆ.ಪ್ಲಾಸ್ಟಿಕ್ ಬಾಟಲಿಗಳು ನಮ್ಮ ಪರಿಸರ ಮತ್ತು ವನ್ಯಜೀವಿಗಳಿಗೆ ಹೇಗೆ ಹಾನಿಕಾರಕವೆಂದು ನಮಗೆ ತಿಳಿದಿದೆ. ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು 450 ವರ್ಷಗಳು ತೆಗೆದುಕೊಳ್ಳುತ್ತದೆ. ಆದರೆ ಉತ್ತರ ನೈಜೀರಿಯಾದಲ್ಲಿ ಜನರು ನಮ್ಮ ಮಣ್ಣಿಗೆ ಮಾರಕವಾಗಿರುವ, ಜನರು ತಿರಸ್ಕರಿಸಿದ ಪ್ಲಾಸ್ಟಿಕ್ ಬಾಟಲಿಗಳ ‘ಉತ್ತಮ’ ಬಳಕೆಯನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಅಲ್ಲಿನ ಜನರು ಇದೇ ಪ್ಲಾಸ್ಟಿಕ್ ಬಾಟಲ್ ಗಳನ್ನು ಉಪಯೋಗಿಸಿ ತಮಗೆ ವಾಸಿಸಲು ಮನೆಗಳನ್ನು ನಿರ್ಮಿಸಿ, ಒಂದು ಸಾಮ್ರಾಜ್ಯವನ್ನೇ ಸ್ಥಾಪಿಸಿದ್ದಾರೆ! …

Read More »

18 ಜನರ ಪ್ರಾಣ ಕಾಪಾಡಿದ ಜಿಂಕೆಗಳು; ವಿಚಿತ್ರವಾದರೂ ಇದು ನಿಜ!

ಪ್ರಾಣಿಗಳು ಮನುಷ್ಯರಿಗೆ ತೊಂದರೆಯನ್ನುಂಟು ಮಾಡುತ್ತದೆ ಎಂದು ಅದನ್ನು ಓಡಿಸುವವರೇ ಹೆಚ್ಚು. ಅದರಲ್ಲೂ ತಾವು ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಪ್ರಾಣಿಗಳು ತಿಂದು ಹಾಕಿದರೆ ರೈರಿಗಂತೂ ಅವು ದುಃಸ್ವಪ್ನಗಳಂತೆ ಕಾಣುತ್ತವೆ. ಆದ್ರೆ ಅದೇ ಪ್ರಾಣಿಗಳಿಂದಾಗಿ ಸುಮಾರು 18 ಜನರು ಬದುಕುಳಿದಿದ್ದಾರೆಂದರೆ ನೀವು ನಂಬುವಿರೇ? ನಂಬಲೇಬೇಕು ಬಿಡಿ. ಅಹಮಾಬಾದ್ ನ ಸೌರಾಷ್ಟ್ರದ ರೈತರಿಗೆ ಅಲ್ಲಿನ ಗದ್ದೆಗಳಿಗೆ ತಂಡೋಪತಂಡವಾಗಿ ನುಗ್ಗುವ ನೀಲಿ ಜಿಂಕೆ(ನೀಲ್ ಗಾಯ್)ಗಳೆಂದರೆ ಸಿಟ್ಟು ಅಷ್ಟಿಷ್ಟಲ್ಲ.. ಅವು ಬಂದು ತಮ್ಮ ಬೆಳೆಗಳನ್ನೆಲ್ಲಾ …

Read More »

ಹಲವಾರು ಮನೆಗಳು ಸುಟ್ಟು ಹೋಗಲು ಕಾರಣವಾಗಿತ್ತು ಈ ನಿಗೂಢ ‘ಅಳುತ್ತಿರುವ ಬಾಲಕ’ನ ಕಲಾಕೃತಿ; ಅಂಥದ್ದೇನಿದೆ ಅದರಲ್ಲಿ?

ಅದೊಂದು ರಾತ್ರಿ ಲಂಡನ್ ನ ಮೆಯೊಂದರಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಂಡಿತು. ಮನೆಯ ಪ್ರತಿಯೊಂದು ಕೋಣೆಯಲ್ಲಿದ್ದ ಪೀಠೋಪಕರಣಗಳು, ಬಟ್ಟೆಗಳು , ವಸ್ತುಗಳು ಪ್ರತಿಯೊಂದು ಸುಟ್ಟು ಬೂದಿಯಾಗಿದ್ದವು. ಆ ಮನೆಯ ಮಾಲಿಕರಾದ ರಾನ್ ಮತ್ತು ಮೇ ಹಾಲ್ ತಮಗೆ ಸೇರಿದ್ದ ಪ್ರತಿಯೊಂದು ವಸ್ತುವನ್ನೂ ಕಳೆದುಕೊಂಡಿದ್ದರು. ಆದರೆ ಪೂರ್ತಿ ಮನೆ ಹೊತ್ತಿ ಉರಿದರು ಒಂದು ವಸ್ತು ಮಾತ್ರ ಉಳಿದಿತ್ತು. ಅದುವೇ ಅವರ ಮನೆಯ ಗೋಡೆಯಲ್ಲಿದ್ದ ‘ವರ್ಣ ಕಲಾಕೃತಿ’. ಆ ಕಲಾಕೃತಿಯಲ್ಲಿದ್ದ ಅಳುವ ಹುಡುಗನ ಕಣ್ಣುಗಳು …

Read More »

ಕೊಡಗಿನಲ್ಲಿ ಬೆಕ್ಕಿನ ಮಲದಿಂದ ವಿಶ್ವದಲ್ಲೇ ದುಬಾರಿ ಕಾಫಿಪುಡಿ ಉತ್ಪಾದನೆ; ಬೆಲೆ ಕೇಳಿದರೆ ಶಾಕ್ ಆಗುವಿರಿ!

ಆಶ್ಚರ್ಯವಾಯಿತೇ? ವಾಕರಿಕೆ ಬರುತ್ತಿದೆಯೇ? ಇನ್ನು ಇದರ ಬೆಲೆ ಕೇಳಿದರೆ ಎಚ್ಚರ ತಪ್ಪುದೊಂದೇ ಬಾಕಿ. ಏಷ್ಯಾದಲ್ಲಿ ಮೂರನೇ ಅತಿ ದೊಡ್ಡ ಕಾಫಿ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಈಗ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಬೆಕ್ಕಿನ ಮಲದಿಂದ ವಿಶ್ವದ ಅತ್ಯಂತ ದುಬಾರಿ ಕಾಫಿಪುಡಿ ಉತ್ಪಾದನೆಗೆ ಚಾಲನೆ ನೀಡಿದೆ. ‘ಸಿವೆಟ್ ಕಾಫಿ’ ವಿಶ್ವದ ದುಬಾರಿ ಕಾಫಿ ಎಂದೇ ಪ್ರಸಿದ್ಧಿ ಪಡೆದಿದ್ದು, ಇದನ್ನು ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ. ಪುನುಗು ಬೆಕ್ಕು ಹಾಕುವ ಮಲದಲ್ಲಿ ಸಿಗುವ ಕಾಫಿ ಬೀಜವನ್ನು …

Read More »

ಈ ಗ್ರಾಮದ ಎಲ್ಲರಿಗೂ ವಿಚಿತ್ರ ಖಾಯಿಲೆ, ಅಸಹ್ಯ ವರ್ತನೆ, ವಾರಗಟ್ಟಲೆ ನಿದ್ದೆ; ಅದ್ಯಾಕೆ ಹೀಗೆ ಅಂತೀರಾ?

ವಿಶ್ವದಲ್ಲಿ ನಾವು ಕಂಡು ಕೇಳರಿಯದ, ಊಹಿಸಲೂ ಸಾಧ್ಯವಾಗದ ಎಷ್ಟೋ ಸಂಗತಿಗಳಿವೆ. ನಮ್ಮಂತೆಯೇ ಮನುಷ್ಯರಾಗಿರುವವರೂ ವಿಚಿತ್ರವಾಗಿ ವರ್ತಿಸುವಂತಹ ಕೆಲವು ಘಟನೆಗಳನ್ನು ನಾವು ಕೇಳಿರುತ್ತೇವೆ. ಆದರೆ ಈ ಊರಿನಲ್ಲಿರುವ ಜನರ ವರ್ತನೆ, ಜೀವನಶೈಲಿಯೇ ವಿಚಿತ್ರ! ಇದು ಕಝಕಿಸ್ತಾನದ ಕಲಾಚಿ ಎಂಬ ಪ್ರದೇಶದ ಕ್ರಾಸ್ನೋಗೋಸ್ಕ್ ಎಂಬ ಊರಿನ ಕಥೆ. ಇಲ್ಲಿನ ಊರಿನ ಮಕ್ಕಳಿಂದ ಮುದುಕರವೆಗೂ ಎಲ್ಲರಿಗೂ ವಿಚಿತ್ರ ಖಾಯಿಲೆಗಳು. ಇಲ್ಲಿ ನಡೆಯುವ ಈ ವಲಕ್ಷಣ ಘಟನೆಗಳನ್ನು ನೋಡಿ ಈ ಗ್ರಾಮಕ್ಕೆ ‘sleepy hollow’ ಎಂಬ …

Read More »

ಕಾರಿಗೆ ಅಲಂಕರಿಸುವ ಈ ಬಿಡಿಭಾಗಗಳು ನಿಮ್ಮ ಜೀವಕ್ಕೆ ಕುತ್ತು ತರಬಹುದು; ಎಚ್ಚರ!

ಸ್ವಂತ ಕಾರು ಇರಬೇಕು, ಅದನ್ನು ಆಕರ್ಷಕವಾಗಿ ಕಾಣುವಂತೆ ಮಾಡಬೇಕು ಎನ್ನುವುದು ಸಾಮಾನ್ಯವಾಗಿ ಎಲ್ಲಾ ಕಾರು ಮಾಲಿಕರ ಬಯಕೆಯಾಗಿರುತ್ತದೆ. ಅದಕ್ಕೆ ಪೂರಕವೆನ್ನುವಂತೆ ಕಾರಿನ ಒಳಗೆ ಬೇಕಾಗುವ ಹಲವಾರು ಅಲಂಕಾರಿಕ ಬಿಡಿ ಭಾಗಗಳು ಅಂಗಡಿಗಳಲ್ಲಿ ದೊರಕುತ್ತವೆ. ನಿಜ ಹೇಳಬೇಕೆಂದರೆ ಈ ಬಿಡಿಭಾಗಗಳು ಅತ್ಯವಶ್ಯಕವೇನಲ್ಲ. ಆದರೂ ನಾವು ಬಳಸುತ್ತೇವೆ. ಆದರೆ ಇದೇ ಅಲಂಕಾರಿಗಳ ಬಿಡಿ ಭಾಗಗಳು ನಮ್ಮ ಜೀವಕ್ಕೆ ಅಪಾಯ ಒಡ್ಡಬಹುದು ಎಂಬ ಕಲ್ಪನೆ ಇದೆಯೇ? ಬನ್ನಿ… ಅವೇನೆಂದು ತಿಳಿದುಕೊಳ್ಳೋಣ! ಸ್ಟೇರಿಂಗ್ ಕವರ್: ಸ್ಟೇರಿಂಗ್ …

Read More »

ಈ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಉಡುಪು ಧರಿಸುತ್ತಾರೆ ಗೊತ್ತೇ?

ಭಾರತವು ಹಲವು ಆಚರಣೆ – ಸಂಸ್ಕೃತಿಗಳ ತವರೂರು. ಇಲ್ಲಿ ನಡೆಯುವ ಪ್ರತಿಯೊಂದು ಆಚರಣೆಯೂ ಭಾರತದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸುತ್ತದೆ. ಹಾಗೆಯೇ ಒಂದೊಂದು ಆಚರಣೆಯ ಹಿಂದೆಯೂ ಒಂದೊಂದು ಪುರಾತನ ಕಥೆಯಿರುತ್ತದೆ. ಈಗ ನಾವು ಕೇರಳದ ಕೊಲ್ಲಂ ಬಳಿಯ ಚಾವಾರದಲ್ಲಿರುವ ಕೊಟ್ಟಂಕುಲಂಗರ ಶ್ರೀ ದೇವಿ ದೇವಸ್ಥಾನದಲ್ಲಿ ನಡೆಯುವ ಒಂದು ವಿಶಿಷ್ಟ ಉತ್ಸವದ ಬಗ್ಗೆ ತಿಳಿಸುತ್ತೇವೆ.ಮೀನ ಮಾಸದ 10 ಮತ್ತು 11ನೇ ದಿನಗಳಂದು ಆಚರಿಸಲಾಗುವ ‘ಚಮಯವಿಳಕ್ಕು’ ಎಂಬ ಉತ್ಸವದಲ್ಲಿ ಪುರುಷರು ಮಹಿಳೆಯರಂತೆ ಉಡುಪು ಧರಿಸಿ …

Read More »

ತನ್ನದೇ ಗ್ರಹಗಳನ್ನು ನುಂಗುವ ನಕ್ಷತ್ರಗಳ ಬಗ್ಗೆ ಕೇಳಿದ್ದೀರಾ? ಇಲ್ಲಿದೆ ನೋಡಿ ಕುತೂಹಲಕಾರಿ ಮಾಹಿತಿ!

ಇತ್ತೀಚೆಗೆ ಖಗೋಳ ವಿಜ್ಞಾನಿಗಳು ಸೂರ್ಯನನ್ನೇ ಹೋಲುವ ಅವಳಿ ನಕ್ಷತ್ರವನ್ನು ಕಂಡುಹಿಡಿದಿದ್ದಾರೆ. ಭೂಮಿಯಿಂದ 350 ಪ್ರಭಾವರ್ಷಗಳಷ್ಟು ದೂರದಲ್ಲಿರುವ ಈ ನಕ್ಷತ್ರ ತನ್ನದೇ ಗ್ರಹಗಳು ಮತ್ತು ಆಕಾಶಕಾಯಗಳನ್ನು ನುಂಗುವ ವಿಶೇಷ ಲಕ್ಷಣವನ್ನು ಹೊಂದಿದೆ. ಈ ಅವಳಿ ನಕ್ಷತ್ರಗಳಿಗೆ ಕ್ರೋನೋಸ್ ಮತ್ತು ಕ್ರಿಯೋಸ್ ಎಂದು ಹೆಸರಿಡಲಾಗಿದೆ. ಈ ಹೆಸರು ಗ್ರೀಕ್ ಪುರಾಣಗಳಲ್ಲಿ ಉಲ್ಲೇಖಿಸಲಾಗಿರುವ 12 ಟೈಟಾನ್‍ಗಳ(ಬೃಹತ್ ಜೀವಿಗಳು ಅಥವಾ ರಾಕ್ಷಸರು) ಪೈಕಿ ಒಂದಾಗಿರುವ ಹಾಗೂ ತನ್ನ ಮಕ್ಕಳನ್ನು ತಿನ್ನುತ್ತದೆ ಎಂಬ ಕಾಲ್ಪನಿಕ ಜೀವಿ ಕ್ರೋನೋಸ್ ನ ಹೆಸರಾಗಿದೆ. ಅಧಿಕೃತವಾಗಿ …

Read More »

ಅಡುಗೆಮನೆಯಲ್ಲಿ ಬೇಗ ಕೆಲಸ ಮುಗಿಸಬೇಕೆ? ಹಾಗಾದರೆ ಈ ಟಿಪ್ಸ್’ ಗಳನ್ನು ಅನುಸರಿಸಿ!

ಮನೆಯಲ್ಲಿಯೇ ಇರುವವರು ತಮ್ಮ ದಿನದ ಅರ್ಧ ಪಾಲನ್ನು ಅಡುಗೆಮನೆಯಲ್ಲಿಯೇ ಕಳೆಯುತ್ತಾರೆ. ಕೊನೆಗೆ ಇಷ್ಟು ಅಡುಗೆ ಮಾಡುವುದಕ್ಕೇ ಇಡೀ ದಿನ ಬೇಕಾ ಎಂಬ ಮಾತನ್ನೂ ಕೇಳಬೇಕಾಗುತ್ತದೆ. ಅಡುಗೆ ಮಾಡುವುದು ಸುಲಭ ವಿಧಾನವಾದರೂ ಅಲ್ಲಿ ಆಗುವ ಸಣ್ಣಪುಟ್ಟ ಸಮಸ್ಯೆಗಳು ಕಿರಿಕಿರಿಯನ್ನು ಉಂಟುಮಾಡುವುದಲ್ಲದೇ ಸಮಯವನ್ನೂ ಕೊಲ್ಲುತ್ತದೆ. ಕೆಳಗೆ ಕೊಟ್ಟಿರುವ ಕೆಲವೊಂದು ಸರಳ ವಿಧಾನಗಳನ್ನು ಅನುಸರಿಸಿದರೆ ನೀವು ಬೇಗನೆ ಕೆಲಸ ಮುಗಿಸಿ ಅಡುಗೆ ಮನೆಯಿಂದ ಹೊರಬರಬಹುದು. ಬೇಳೆಯ ಸ್ವಾದ ಹೆಚ್ಚಲು ಬೇಯಿಸುವ ಮೊದಲು ಸ್ವಲ್ಪ ಹುರಿದುಕೊಳ್ಳಬೇಕು. …

Read More »

Powered by keepvid themefull earn money